• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಎಂಎಫ್ ಸಂಶೋಧನಾ ವಿಭಾಗದ ನಿರ್ದೇಶಕಿಯಾಗಿ ಮೈಸೂರಿನ ಹುಡುಗಿ ಗೀತಾ ನೇಮಕ

|

ಮೈಸೂರು, ಅಕ್ಟೋಬರ್.3: ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಶೋಧನಾ ವಿಭಾಗದ ನಿರ್ದೇಶಕಿಯಾಗಿ ಹಾಗೂ ಹಣಕಾಸು ನೀತಿಯ ಮುಖ್ಯ ಸಲಹೆಗಾರ್ತಿಯಾಗಿ ಮೈಸೂರು ಮೂಲದ ಗೀತಾ ಗೋಪಿನಾಥ್ ಅವರು ನೇಮಕವಾಗಿದ್ದು, ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ಇವರು ಐಎಂಎಫ್ ಹುದ್ದೆಗೇರಿದ ಎರಡನೇ ಭಾರತೀಯೆ. ಈ ಮೊದಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿದ್ದ ರಘುರಾಂ ರಾಜನ್ ಅವರು ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಮುಖ್ಯ ಆರ್ಥಿಕ ತಜ್ಞರಾಗಿರುವ ಮೌರಿ ಅಬ್ ಸ್ಟೆಫಲ್ಸ್ ಡಿಸೆಂಬರ್ ನಲ್ಲಿ ನಿವೃತ್ತರಾಗಲಿದ್ದು, ನಂತರ ಗೀತಾ ಗೋಪಿನಾಥ್ ಅಧಿಕಾರ ಸ್ವೀಕರಿಸಲಿದ್ದಾರೆ.

ಗೀತಾ ಗೋಪಿನಾಥ್ ಐಎಂಎಫ್ ನೂತನ ಮುಖ್ಯ ಆರ್ಥಿಕ ತಜ್ಞೆ

ಡಿಸೆಂಬರ್ 8, 1971ರಂದು, ಟಿ.ವಿ. ಗೋಪೀನಾಥ್ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರಿಯಾಗಿ ಜನಿಸಿದ ಗೀತಾ 9 ನೇ ವಯಸ್ಸಿನಲ್ಲಿ ಮೈಸೂರಿಗೆ ಆಗಮಿಸಿದರು. ದ್ವಿತೀಯ ಪಿಯುಸಿವರೆಗೂ ಮೈಸೂರಿನಲ್ಲಿ ವ್ಯಾಸಂಗ ನಡೆಸಿದರು.

ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಹಾಗೂ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪಡೆದಿದ್ದಾರೆ.

ಮಗಳು ಉನ್ನತ ಹುದ್ದೆಗೇರಿರುವುದರ ಕುರಿತು ತಂದೆ ಗೋಪಿನಾಥ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡದ್ದು ಹೀಗೆ...

 ಓದಿನಲ್ಲಿ ಯಾವಾಗಲೂ ಮುಂದು

ಓದಿನಲ್ಲಿ ಯಾವಾಗಲೂ ಮುಂದು

ತಮ್ಮ ಮಗಳು ಉನ್ನತ ಹುದ್ದೆಗೆ ಏರಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ ಅವರ ತಂದೆ ಟಿವಿ ಗೋಪಿನಾಥ್, "ಕಠಿಣ ಪರಿಶ್ರಮ, ಗುರಿ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಗೀತಾ ಸಾಕ್ಷಿ.

ಗೀತಾ ಅತ್ಯುತ್ತಮ ಅರ್ಥಶಾಸ್ತ್ರಜ್ಞೆಯಾಗಿದ್ದು, ನಿಷ್ಕಳಂಕ ಶೈಕ್ಷಣಿಕ ದಾಖಲೆ ಹೊಂದಿದ್ದಾಳೆ. ತನ್ನ ಶಾಲಾ ದಿನಗಳಿಂದಲೂ ಮೊದಲ ಸ್ಥಾನ ಪಡೆದಿದ್ದು, ಓದುವುದರಲ್ಲಿ ಆಸಕ್ತಿ ಹೊಂದಿದ್ದಳು" ಎಂದು ತಿಳಿಸಿದ್ದಾರೆ.

 16 ಗಂಟೆ ಕೆಲಸ

16 ಗಂಟೆ ಕೆಲಸ

"ನಾನು ಕೊಲ್ಕತ್ತಾ, ದಿಲ್ಲಿ ಮೈಸೂರು ಹೀಗೆ ನನ್ನ ವಾಸಸ್ಥಾನವನ್ನು ಬದಲಿಸಿದರೂ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿಲ್ಲ. ಸ್ವಯಂ ಬಲದಿಂದ ಆಕೆ ಮೇಲೇರುತ್ತಾ ಬಂದಿದ್ದಾಳೆ. ದಿನದಿಂದ ದಿನಕ್ಕೆ 16 ಗಂಟೆ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದಳು.

ವಾರದಲ್ಲಿ ಎಲ್ಲರೂ 5 ದಿನ ಕಾರ್ಯನಿವರ್ಹಿಸದರೆ ಗೀತಾ ಮಾತ್ರ 6 ದಿನ ಕೆಲಸ ಮಾಡುತ್ತಿದ್ದಳು. ಒಂದು ದಿನ ಮಾತ್ರ ವಿಶ್ರಾಂತಿ ಪಡೆಯುತ್ತಿದ್ದಳು" ಎಂದು ಗೀತಾ ತಂದೆ ಗೋಪಿನಾಥ್ ತಿಳಿಸಿದ್ದಾರೆ.

ಸಾಲದ ಸುಳಿಯಲ್ಲಿರುವ ಐಎಲ್ ಆಂಡ್ ಎಫ್ಎಸ್ ಕಂಪೆನಿ ಸೂಪರ್‌ಸೀಡ್

 ಮೈಸೂರಿನಲ್ಲೇ ನೆಲೆಸಿದ್ದಾರೆ

ಮೈಸೂರಿನಲ್ಲೇ ನೆಲೆಸಿದ್ದಾರೆ

ಗೋಪಿನಾಥ್ ದಂಪತಿಗಳು ಮೈಸೂರಿನಲ್ಲೇ ನೆಲೆಸಿದ್ದಾರೆ. ನಗರದ ಕುವೆಂಪುನಗರದಲ್ಲಿ ವಾಸವಾಗಿರುವ ಗೋಪಿನಾಥ್ ಕೃಷಿ ಉತ್ಪಾದನಾ ಸಂಶೋಧನೆಯಲ್ಲಿ ತೊಡಗಿದ್ದಾರೆ. ಗೀತಾ ಜಯಲಕ್ಷ್ಮೀ ಪುರಂನ ಮಹಾಜನ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿರುವುದು ಗಮನಾರ್ಹ.

 ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್

ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್

ಗೀತಾ ಗೋಪಿನಾಥ್ ಪ್ರಸ್ತುತ ಹಾರ್ವರ್ಡ್ ವಿವಿಯ ಜಾನ್ ಜ್ವಾನ್ಸ್ಟ್ರಾ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್, ಎಕನಾಮಿಕ್ಸ್ ವಿಭಾಗದ ಪ್ರೊಫೆಸರ್ ಆಗಿದ್ದಾರೆ. ಇದಕ್ಕೂ ಮುನ್ನ ಅವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಭಾರತದ ಶೇಷ್ಠತೆಯನ್ನು ಹಾಡಿ ಹೊಗಳಿದ ಉಜ್ಬೇಕಿಸ್ತಾನದ ಅಧ್ಯಕ್ಷ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Geetha Gopinath appointment as the director of the International Monetary Fund (IMF) Research Division. She is originally from Mysore. Geetha father is still working in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more