• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೂನ್ 1ರಿಂದ ಮೈಸೂರಿನಲ್ಲಿ ಮಾವು ಮೇಳ; 15ಕ್ಕೂ ಹೆಚ್ಚು ಬಗೆಯ ಹಣ್ಣುಗಳು ಲಭ್ಯ

|

ಮೈಸೂರು, ಮೇ 13: ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಮಾವು ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸುವ ಉದ್ದೇಶದಿಂದ ಮೈಸೂರಿನಲ್ಲಿ ಜಿಲ್ಲಾಡಳಿತ ಹಾಗೂ ತೋಟಗಾರಿಕಾ ಇಲಾಖೆ ಜೂನ್ 1ರಿಂದ 5ರವರೆಗೆ ಕರ್ಜನ್ ಪಾರ್ಕ್ ನಲ್ಲಿ 'ಮಾವು ಮೇಳ' ನಡೆಸಲು ನಿರ್ಧರಿಸಿದೆ.

ವರ್ಷಕ್ಕೆ 1.80 ರಿಂದ 2 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆಯಲಾಗುತ್ತದೆ. ಈ ಮಾವಿಗೆ ಯೋಗ್ಯ ದರ ದೊರಕಿಸಿಕೊಡುವ ಮತ್ತು ಮಧ್ಯವರ್ತಿಗಳಿಂದ ಬೆಳೆಗಾರರಿಗಾಗುವ ವಂಚನೆ ತಡೆಯುವ ಪ್ರಯತ್ನ ಇದಾಗಿದೆ. ಅಲ್ಲದೇ ಈ ಮೇಳದ ಮುಖೇನ ಗುಣಮಟ್ಟದ ನೈಸರ್ಗಿಕ ಮಾವಿನ ಹಣ್ಣುಗಳನ್ನು ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತದೆ ಎಂದರು.

ಕೊಪ್ಪಳ : ಮಾವು ಮೇಳ, 100ಕ್ಕೂ ಅಧಿಕ ಬಗೆಯ ಹಣ್ಣು ಸವಿಯಿರಿ

ಜೂನ್ ಮೊದಲ ವಾರದಲ್ಲಿ ಐದು ದಿನಗಳ ಕಾಲ ಮೇಳ ನಡೆಸಲು ತೋಟಗಾರಿಕೆ ಇಲಾಖೆ ತಯಾರಿ ನಡೆಸುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯು ವೈವಿಧ್ಯಮಯ ಹಣ್ಣುಗಳ ರುಚಿ ಉಣಬಡಿಸುವ ಮಾವು ಮೇಳ ಆಯೋಜನೆ ಹಾಗೂ ಮಾವು ಮೇಳದ ರೂಪುರೇಷೆಗಳು ಹಾಗೂ ಬೆಲೆ ನಿಗದಿಪಡಿಸಲು ಮಾವು ಬೆಳೆಗಾರರು, ದಲ್ಲಾಳಿಗಳು ಹಾಗೂ ಮಾರಾಟಗಾರರಿಗೆ ಮೇ 14ರಂದು ಸಭೆ ಸಹ ಕರೆಯಲಾಗಿದೆ.

ಮಾವು ಮೇಳದಲ್ಲಿ ಪಾಲ್ಗೊಳ್ಳಲಿರುವ ಬೆಳೆಗಾರರಿಂದ ಅರ್ಜಿ ಅಹ್ವಾನಿಸಲಾಗಿದೆ. ಮೇ.28ಕ್ಕೆ ಮೇಳದಲ್ಲಿ ಎಷ್ಟು ಮಂದಿ ಮಾವು ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ. ಎಷ್ಟು ಮಳಿಗೆ ತೆರೆಯಲಾಗುತ್ತದೆ. ಯಾವ ಯಾವ ತಳಿಯ ಮಾವಿನಹಣ್ಣುಗಳನ್ನು ತರಲಾಗುತ್ತದೆ ಎಂಬ ಮಾಹಿತಿ ನಿಖರವಾಗಿ ತಿಳಿಯಲಿದೆ.

ಮಾವಿನ ಸುಗ್ಗಿ ಆರಂಭ : ಇನ್ನೂ ಮೈಸೂರು ಮಾರುಕಟ್ಟೆಗೆ ಲಗ್ಗೆ ಇಡದ ಹಣ್ಣುಗಳ ರಾಜ

ಐದು ದಿನಗಳ ಕಾಲ ನಡೆಯುವ ಮೇಳದಲ್ಲಿ ಮೈಸೂರು ಜಿಲ್ಲೆ, ಮಂಡ್ಯ, ಹಾಸನ, ಚನ್ನಪಟ್ಟಣ, ರಾಮನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳ ರೈತರು ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಮೇಳದಲ್ಲಿ ರತ್ನಗಿರಿ, ಬಾದಾಮಿ, ರಸಪೂರಿ, ಮಲಗೋವಾ, ತೋತಾಪುರಿ, ಮಲ್ಲಿಕಾ, ದಶೇರಿ, ಮಲ್ಲಿಕಾ, ಸೆಂದೂರ, ನೀಲಂ, ಆಮ್ರಪಾಲಿ, ಕೇಸರ್, ಬಂಗನಪಲ್ಲಿ ಮೊದಲಾದ 15ಕ್ಕೂ ವಿವಿಧ ಬಗೆಯ ಹಣ್ಣುಗಳನ್ನು ಖರೀದಿಸಲು ಒಂದೇ ಸೂರಿನಡಿ ಅವಕಾಶ ಲಭಿಸಲಿದೆ.

ಅಕ್ಕರೆಯನ್ನು ನನ್ನ ಬಾಯಿಗೆ ಸುರಿಯುತ್ತಿದ್ದ ಗುಳಂಬದ ಆಯಿ

ಮಾವು ಮೇಳದಲ್ಲಿ ಪಾಲ್ಗೊಳ್ಳುವ ಬೆಳೆಗಾರರಿಗೆ ಈಗಾಗಲೇ ಸಭೆಯಲ್ಲಿ ನಿಫಾ ವೈರಸ್ ಬಗ್ಗೆ ಮಾಹಿತಿ ನೀಡಲಾಗಿದೆ. ಕೇರಳದಲ್ಲಿ ಹಾಗೂ ವಿವಿಧ ದೇಶಗಳಲ್ಲಿ ನಿಫಾ ವೈರಸ್ ಹರಡಿ ಸಾವು ನೋವು ಸಂಭವಿಸಿರುವುದರಿಂದ ಮಾವು ಮೇಳಕ್ಕೆ ತರುವ ಮಾವಿನ ಹಣ್ಣುಗಳ ಬಗ್ಗೆ ಗಮನಹರಿಸಬೇಕು. ಯಾವುದೇ ಪಕ್ಷಿ ಕಚ್ಚಿರುವ ಹಣ್ಣನ್ನು ಹಾಗೂ ಪಕ್ಷಿಗಳು ಉದುರಿಸಿರುವ ಹಣ್ಣುಗಳನ್ನು ತರಬಾರದೆಂದು ಸೂಚನೆ ನೀಡಲಾಗಿದೆ.

ಇದರೊಂದಿಗೆ ಹಣ್ಣುಗಳಿಗೆ ಯಾವುದೇ ರಾಸಾಯನಿಕ ದ್ರಾವಣ ಸಿಂಪಡಿಸದಂತೆ ಮನವರಿಕೆ ಮಾಡಿಕೊಡಲಾಗಿದೆ, ಕಳೆದ ಬಾರಿಗಿಂತ ಈ ಬಾರಿ ನಿಗದಿತ ಮಳೆಯಾಗದ ಕಾರಣ ಮಾವು ಇಳುವರಿಯಲ್ಲಿ ಶೇ.40ರಷ್ಟು ಇಳಿಕೆಯಾಗಿದೆ. ಮೈಸೂರಿನಲ್ಲಿ ವಾಡಿಕೆ ಮಳೆ ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಫಸಲು ಕಡಿಮೆ. ಈ ಹಿನ್ನೆಲೆಯಲ್ಲಿ ದರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳು ಇವೆ.

English summary
Mango mela will organized in Mysuru district, Karnataka from June 1st to 5th, 2019. More than 15 categories of Mango available in in the mela.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more