ಕುಮಾರಸ್ವಾಮಿ ಬಜೆಟ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು ಹೀಗೆ
Recommended Video

ಮೈಸೂರು, ಫೆಬ್ರವರಿ ೦8 : ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒಳ್ಳೆಯ ಬಜೆಟ್ ಮಂಡಿಸಿದ್ದಾರೆ. ನನಗೆ ಇದು ಆವರ್ ಆಲ್ ಗುಡ್ ಬಜೆಟ್ ಎಂದೆನಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇದುವರೆಗೂ ಬಜೆಟ್ ಸಂಪೂರ್ಣವಾಗಿ ನೋಡಿಲ್ಲ. ಸಮ್ಮಿಶ್ರ ಸರ್ಕಾರದ ಕೃಷಿ, ಭಾಗ್ಯ ಕ್ಷೀರ ಭಾಗ್ಯ ಯೋಜನೆಗಳು ಮುಂದುವರೆದಿವೆ ಆದರೆ, ಬೆಳಕು ಯೋಜನೆ ಮುಂದುವರಿಸುವಂತೆ ಹೇಳಿದ್ದೆ. ಅಲ್ಲದೇ ಉಚಿತ ಬಸ್ ಪಾಸ್ ಬಗ್ಗೆಯೂ ತಿಳಿಸಿದ್ದೆ. ಅದರ ಬಗ್ಗೆ ಮಾತನಾಡುತ್ತೇನೆ ಎಂದರು.
ಇನ್ನು ಆಪರೇಷನ್ ಕಮಲ ಹಾಗೂ ಆಡಿಯೋ ವೈರಲ್ ಆದ ಕುರಿತು ಮಾತನಾಡಿ,ಮಾಜಿ ಸಿಎಂ ಯಡಿಯೂರಪ್ಪ ಮತ್ತು ಶರಣಗೌಡ ಅವರ ಫೋನ್ ಕಾಲ್ ಆಡಿಯೋ ಬಿಡುಗಡೆಯಾಗಿದ್ದರಿಂದ ಬಿಎಸ್ವೈ ಎಕ್ಸ್ಫೋಸ್ ಆಗಿದ್ದಾರೆ. ಯಡಿಯೂರಪ್ಪ ಏನೂ ನಡೆದೇ ಇಲ್ಲ ಅಂತಾ ಹೇಳುತ್ತಿದ್ದರು. ಈಗ ಅವರ ಬಣ್ಣ ಬಯಲಾಗಿದೆ ಎಂದರು.

ಇತ್ತ ಆಡಿಯೋ ಮಿಮಿಕ್ರಿ ಎಂಬ ಬಿಎಸ್ ಯಡಿಯೂರಪ್ಪ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದಕ್ಕಿಂತ ನಗೆಪಾಟಲು ಇನ್ನೊಂದಿಲ್ಲ. ಅವರಂಥ ಭಂಡರು ಯಾರೂ ಇಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.












Click it and Unblock the Notifications