ಮೈಸೂರಿನಲ್ಲಿ ಶ್ರೀಗಂಧ ಮರಗಳ್ಳರ ಮೇಲೆ ದಾಳಿ: ಒಬ್ಬ ಸಾವು
ಮೈಸೂರು, ಫೆಬ್ರವರಿ 11: ಶ್ರೀಗಂಧ ಮರವನ್ನು ಕತ್ತರಿಸಿ ಕಳವು ಮಾಡಲು ಯತ್ನಿಸುತ್ತಿದ್ದವರ ಮೇಲೆ ಅರಣ್ಯ ಇಲಾಖೆ ದಾಳಿ ನಡೆಸಿದೆ. ಗುಂಡೇಟಿನಿಂದ ಶ್ರೀಗಂಧ ಚೋರನೊಬ್ಬ ಅಸುನೀಗಿದ್ದಾನೆ.
ಮೈಸೂರಿನ ಲಿಂಗಾಬುದಿ ಕೆರೆಯ ಆವರಣದಲ್ಲಿ ನಿನ್ನೆ(ಶುಕ್ರವಾರ) ಮಧ್ಯರಾತ್ರಿ ಐದಕ್ಕೂ ಹೆಚ್ಚು ಮಂದಿ ಮರಗಳ್ಳರ ತಂಡ ಶ್ರೀಗಂಧದ ಮರವನ್ನು ಕಡಿದು ಕಳುವಿಗೆ ಯತ್ನಿಸಲು ಮುಂದಾಗಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಕಳ್ಳರು ಪರಾರಿಯಾಗಲು ಯತ್ನಿಸಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಒಬ್ಬ ನಿಗೆ ಗುಂಡು ತಲುಲಿ ಮೃತಪಟ್ಟಿದ್ದಾನೆ.[ಕೊಡಗಿನ ಕಂಪು ಸೂಸುವ ಶ್ರೀಗಂಧದ ಸಾವಿನ ಕಥೆ!]

ಗುಂಡಿನ ದಾಳಿ ನಡೆದಿರುವ ಹಿನ್ನೆಲೆ ಲಿಂಗಾಬುದಿ ಕೆರೆಯ ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ಪೊಲೀಸರು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೋರನ ಪೂರ್ಣ ಮಾಹಿತಿ ದೊರೆಯಬೇಕಿದೆ.












Click it and Unblock the Notifications