ಮೈಸೂರು: ಕಾಡು ಪ್ರಾಣಿಗಳ ಬೇಟೆಗೆ ಸಿಡಿಮದ್ದು ಇಟ್ಟ ಕಿಡಿಗೇಡಿಗಳು
ಮೈಸೂರು, ಜುಲೈ 21: ಕಾಡಂಚಿನ ಜಮೀನಿನಲ್ಲಿ ಮೇಯಲು ಬಂದ ಹಸುವಿನ ಬಾಯಿಗೆ ಸಿಡಿಮದ್ದು ಸಿಕ್ಕು ಸ್ಪೋಟಗೊಂಡಿದ್ದರಿಂದ ಮುಖ ಛಿದ್ರವಾಗಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
Recommended Video
ಕಾಡು ಪ್ರಾಣಿಗಳ ಬೇಟೆಗೆ ಕಿಡಿಗೇಡಿಗಳು ಸಿಡಿಮದ್ದು ಇಡುತ್ತಿದ್ದು, ಹಸುವಿನ ಬಾಯಿಯಲ್ಲಿ ಸಿಡಿಮದ್ದು ಸ್ಪೋಟಗೊಂಡಿರುವ ಕಾರಣ ರಾಸು ಜೀವನ್ಮರಣದ ಜೊತೆ ಹೋರಾಡುತ್ತಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಬೆಟ್ಟದಬೀಡು ಗ್ರಾಮದಲ್ಲಿ ಘಟನೆ ನಡೆದಿದ್ದು, ಮೂಕ ಪ್ರಾಣಿಯ ರೋಧನೆ ಕಂಡು, ಸಿಡಿಮದ್ದು ಇರಿಸಿದ್ದವರಿಗೆ ಪ್ರಾಣಿಪ್ರಿಯರು ಹಿಡಿಶಾಪ ಹಾಕುತ್ತಿದ್ದಾರೆ.

ಬೆಟ್ಟದಬೀಡು ಗ್ರಾಮದ ನರಸಿಂಹೇಗೌಡರಿಗೆ ಸೇರಿದ ರಾಸು, ಕಾಡಂಚಿನ ಜಮೀನಿನಲ್ಲಿ ಮೇಯಲು ಹೋಗಿದ್ದರಿಂದ ಹಸುವಿನ ಬಾಯಿಗೆ ಸಿಡಿಮದ್ದು ಸಿಕ್ಕಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ನಿರಂತರ ಗಸ್ತಿನಲ್ಲಿದ್ದಿದ್ದರೇ ಇಂತಹ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಕಾಡಂಚಿನ ಗ್ರಾಮಗಳತ್ತ ಅರಣ್ಯ ಇಲಾಖೆ ಸಿಬ್ಬಂದಿಯ ಸುಳಿವಿಲ್ಲ, ಕಳ್ಳ ಬೇಟೆಗಾರ ತಡೆಗೆ ಗಸ್ತು ಹೆಚ್ಚಿಸುವಂತೆ ಗ್ರಾಮಸ್ಥರ ಆಗ್ರಹವಾಗಿದೆ.












Click it and Unblock the Notifications