ನಂಜನಗೂಡಲ್ಲಿ ಸಂತ್ರಸ್ತರ ಭೇಟಿ ಮಾಡಿದ ನಟ ಚೇತನ್
ನಂಜನಗೂಡು, ಆಗಸ್ಟ್ 12: ಕಪಿಲಾ ನದಿಯ ಆರ್ಭಟಕ್ಕೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸಾವಿರಾರು ಕುಟುಂಬಗಳು ಆಸ್ತಿ ಪಾಸ್ತಿ, ಮನೆ ಕಳೆದುಕೊಂಡು ಬೀದಿಗೆ ಬಿದ್ದಿವೆ. ಪಟ್ಟಣದ ನಂಜುಂಡೇಶ್ವರ ದೇವಾಲಯದ ತಗ್ಗು ಪ್ರದೇಶಗಳ ಮನೆಗಳು ಮುಳುಗಡೆಯಾಗಿದ್ದು, ಇಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಪಟ್ಟಣದ ಒಕ್ಕಲಗೇರಿ, ಕುರುಬಗೇರಿ, ಚಾಮಲಪುರದ ಹುಂಡಿ, ತೋಪಿನಬೀದಿ, ಸರಸ್ವತಿ ಕಾಲೋನಿ ಮತ್ತಿತರ ಬಡಾವಣೆಗಳಿಗೆ ಭೇಟಿ ನೀಡಿ, ನಂತರ ಪರಿಹಾರ ಕೇಂದ್ರಗಳಿಗೆ ತೆರಳಿ ಸಂತ್ರಸ್ತರ ಜೊತೆ ಮಾತನಾಡಿದರು.
"ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಜತೆ ಮಾತುಕತೆ ನಡೆಸಲಾಗಿದೆ. ಮನೆ, ಆಸ್ತಿ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ದಿನ ಕಳೆಯುತ್ತಿರುವ ಸಂತ್ರಸ್ತರ ಜೀವನ ಮತ್ತು ಮಕ್ಕಳ ಭವಿಷ್ಯ ರೂಪಿಸಲು ಅವರ ಜೊತೆ ಕೈ ಜೋಡಿಸಲಾಗುವುದು" ಎಂದು ಭರವಸೆ ನೀಡಿದರು ಚೇತನ್.

ನಟ ಚೇತನ್ ಅವರ ಸಾಮಾಜಿಕ ಕಾರ್ಯಕ್ಕೆ ಇನ್ನೂ ಹಲವು ಜನ ಕೈ ಜೋಡಿಸಿದ್ದಾರೆ.












Click it and Unblock the Notifications