ಬೀಚನಹಳ್ಳಿ ಚಿಕ್ಕಣ್ಣ ತೆನೆ ಹೊರಲು ಮುಹೂರ್ತ ಫಿಕ್ಸ್

ಮೈಸೂರು, ಡಿಸೆಂಬರ್ 11 : ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಜೆಡಿಎಸ್ ಸೇರ್ಪಡೆಗೆ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರು ಸಮ್ಮತಿಸಿದ್ದು, ಡಿ.13ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮಾವೇಶದಲ್ಲಿ ಪಕ್ಷ ಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಈ ಬಗ್ಗೆ ಬೀಚನಹಳ್ಳಿ ಚಿಕ್ಕಣ್ಣ ಪತ್ರಿಕೆಯೊಂದಿಗೆ ಮಾತನಾಡಿ ಜೆಡಿಎಸ್ ಸೇರ್ಪಡೆ ಖಚಿತ ಎಂದಿದ್ದಾರೆ.

ಇತ್ತೀಚೆಗೆ ಜೆಡಿಎಸ್ ಮುಖಂಡರಾದ ಶಂಭುಗೌಡ, ಸಿ.ವಿ. ನಾಗರಾಜು, ನಾಗಣ್ಣ, ರಾಜೇಂದ್ರ, ಕೆ.ಜಿ.ಗೌಡ, ಮಾಯಪ್ಪ, ಮಾರುತಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಪಿ ನಾಗರಾಜು, ಮಳಲಿ ಶಾಂತಕುಮಾರ್, ರಾಮು, ಪ್ರಕಾಶ್‌, ಕುಮಾರ್‌, ರಾಜೇಶ್‌, ರಾಜೇಗೌಡ, ಶಫೀಉಲ್ಲಾ, ಶಶಿ, ಜವರಪ್ಪ, ತಿಮ್ಮನಾಯಕ, ಹರೀಶ್‌ ಸೇರಿದಂತೆ ಹಲವರು ಪಕ್ಷ ದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಶಾಸಕ ಎಚ್‌.ಡಿ.ರೇವಣ್ಣ, ವಿಧಾನ ಪರಿಷತ್‌ ಸದಸ್ಯ ಸಂದೇಶ್ ನಾಗರಾಜು, ಶಾಸಕ ಜಿ.ಟಿ.ದೇವೇಗೌಡ, ಮುಖಂಡರಾದ ಎಚ್‌.ವಿಶ್ವನಾಥ್‌, ಪ್ರೊ.ರಂಗಪ್ಪ ಅವರಗಳನ್ನು ಭೇಟಿ ಮಾಡಿ ಮುಂಬರುವ ವಿಧಾನಸಭಾ ಚುನಾವಣೆಗೆ ಎಚ್‌.ಡಿ.ಕೋಟೆಯಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿ ಬಗ್ಗೆ ಮಾತುಕತೆ ನಡೆಸಿದ್ದರು.

Ex-MLA Chikkanna will join JD(S) on 13th december.

ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಾಸಕ ಚಿಕ್ಕಮಾದು ಅಕಾಲಿಕ ಮರಣ ನಂತರ ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯಲು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಕಾಂಗ್ರೆಸ್‌ ಪಕ್ಷ ದಿಂದ ಗೆದ್ದು ತಾಲೂಕಿನ ಶಾಸಕರಾಗಿದ್ದ ಬೀಚನಹಳ್ಳಿ ಚಿಕ್ಕಣ್ಣ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ನಂತರ ಸಂಸದ ಆರ್‌. ಧ್ರುವನಾರಾಯಣ್ ಮೇಲಿನ ಅಸಮಾಧಾನದಿಂದ ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರ್ಪಡೆಗೊಂಡಿದ್ದರು.

ಕಳೆದ 2 ತಿಂಗಳ ಹಿಂದೆ ಬಿಜೆಪಿಗೂ ರಾಜೀನಾಮೆ ಕೊಟ್ಟು, ಪುನಃ ಕಾಂಗ್ರೆಸ್‌ ಪಕ್ಷ ದ ಬಾಗಿಲಿಗೆ ಬಂದು ನಿಂತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪನವರಿಗೆ ಒಪ್ಪಿಗೆ ಇದ್ದರೂ, ಸಂಸದ ಆರ್‌. ಧ್ರುವನಾರಾಯಣ್ ಒಪ್ಪಿಗೆ ಕೊಟ್ಟಿರಲಿಲ್ಲ. ಹಾಗಾಗಿ ಚಿಕ್ಕಣ್ಣನವರು ಜೆಡಿಎಸ್ ನತ್ತ ಮುಖ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+