ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಚಾಮುಂಡಿಬೆಟ್ಟ ದೇವಾಲಯದ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ

|
Google Oneindia Kannada News

ಮೈಸೂರು, ಡಿಸೆಂಬರ್ 14: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೈಸೂರಿನ ಚಾಮುಂಡಿಬೆಟ್ಟ ದೇವಾಲಯದ ನೌಕರರು ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ದೇವಾಲಯದ 183 ಮಂದಿ ಖಾಯಂ ನೌಕರರು ಹಾಗೂ 37 ಮಂದಿ ಗುತ್ತಿಗೆ ನೌಕಕರು ದೇವಸ್ಥಾನದ ಮುಖ್ಯದ್ವಾರದಲ್ಲಿ ಅಳವಡಿಕೆ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಡಿ. 14ರಂದು ಮೈಸೂರು ಚಾಮುಂಡೇಶ್ವರಿ ದೇವಸ್ಥಾನ ಪೂಜೆ ಸ್ಥಗಿತಕ್ಕೆ ಚಿಂತನೆಡಿ. 14ರಂದು ಮೈಸೂರು ಚಾಮುಂಡೇಶ್ವರಿ ದೇವಸ್ಥಾನ ಪೂಜೆ ಸ್ಥಗಿತಕ್ಕೆ ಚಿಂತನೆ

220 ಮಂದಿ ನೌಕರರ ಪ್ರತಿಭಟನೆಯಿಂದ ಭಕ್ತಾಧಿಗಳಿಗೆ ಸೇವೆಗಳಲ್ಲಿ ತೊಂದರೆಯಾಗುತ್ತಿದೆ. ಬೆಳಗ್ಗೆ 6.30ರಿಂದ 8ರವರೆಗೆ ಪೂಜೆ ಪುನಸ್ಕಾರದಲ್ಲಿ ಭಾಗಿಯಾದ ಅರ್ಚಕರು, ನಂತರ ಮಹಾಮಂಗಳಾರತಿ ಅರ್ಪಿಸಿ ಗರ್ಭಗುಡಿಯಿಂದ ನಿರ್ಗಮಿಸಿ ದೇವಾಲಯದ ಮುಂದೆ ಸಾಂಕೇತಿಕವಾಗಿ ಕುಳಿತು ಕೆಲಸಕ್ಕೆ ಅಸಹಕಾರ ಕೊಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.

Employees of the Chamundi hill Temple have held a Indefinite strike

9 ಗಂಟೆಯ ನಂತರ ಯಾವುದೇ ವಿಶೇಷ ಪೂಜೆಗಳಲ್ಲಿ ಅರ್ಚಕರು ಭಾಗಿಯಾಗಿಲ್ಲ. ಹೀಗಾಗಿ ಭಕ್ತಾಧಿಗಳಿಗೆ ನೀಡುವ ಸೇವೆಗಳಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದೆ. ಇನ್ನು ಟಿಕೆಟ್ ಕೌಂಟರ್, ಪ್ರಸಾದ ವಿತರಣೆ, ಸೇವಾ ಬುಕಿಂಗ್ ಕೌಂಟರ್, ಭಕ್ತಾದಿಗಳನ್ನ ನಿಯಂತ್ರಿಸುವ ಸಿಬ್ಬಂದಿಗಳು, ಸ್ವಚ್ಚತಾ ಸಿಬ್ಬಂದಿಗಳೂ ಕರ್ತವ್ಯಕ್ಕೆ ಅಸಹಕಾರ ತೋರುವ ಮೂಲಕ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಟನೆ ಹಿನ್ನೆಲೆ ಚಾಮುಂಡಿಬೆಟ್ಟದ ಲಾಡು ಪ್ರಸಾದ ವಿತರಣೆ ಸಹ ನಡೆಯುತ್ತಿಲ್ಲ.

Employees of the Chamundi hill Temple have held a Indefinite strike

ಚಾಮುಂಡಿ ಬೆಟ್ಟದ ನಂದಿ ಮೂರ್ತಿಗೆ ಮಹಾಮಸ್ತಕಾಭಿಷೇಕ : ವೈಭವ ಕಣ್ತುಂಬಿಕೊಂಡ ಭಕ್ತರುಚಾಮುಂಡಿ ಬೆಟ್ಟದ ನಂದಿ ಮೂರ್ತಿಗೆ ಮಹಾಮಸ್ತಕಾಭಿಷೇಕ : ವೈಭವ ಕಣ್ತುಂಬಿಕೊಂಡ ಭಕ್ತರು

ಶೇ.30ರಷ್ಟು ವೇತನ ವೃದ್ಧಿ ಹಾಗೂ ಹೆಚ್ಚುವರಿ ತುಟ್ಟಿಭತ್ಯೆ ಹೆಚ್ಚಳ, ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಲು ತುರ್ತಾಗಿ ಆದೇಶ ಮಾಡುವ ಬಗ್ಗೆ, ಅನುಕಂಪದ ಆಧಾರದ ಮೇಲೆ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ರಾಜ್ಯದ ಎಲ್ಲಾ ಇಲಾಖೆಯಲ್ಲಿ ನೌಕರಿ ನೀಡುವ ಬಗ್ಗೆ ತುರ್ತಾಗಿ ಆದೇಶ ಮಾಡಬೇಕಾದ ಕುರಿತು ಇನ್ನು ಕೆಲವು ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

English summary
Employees of the Chamundi hill Temple in Mysore have held a Indefinite strike today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X