ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.27 ರಂದು ಮೈಸೂರು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

|
Google Oneindia Kannada News

ಮೈಸೂರು, ಅಕ್ಟೋಬರ್.26: ಮೈಸೂರಿನ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ (ಅ.27) ಚುನಾವಣೆ ನಡೆಯಲಿದ್ದು, ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಟಿ.ರಮೇಶ್ ಬಾಬು ತಿಳಿಸಿದ್ದಾರೆ.

ಬೆಳಗಾವಿ ಎಪಿಎಂಸಿ ಕದನ ಅಂತ್ಯ: ಮತ್ತೆ ರಾಜಿಯಾದ ಜಾರಕಿಹೊಳಿ ಸಹೋದರರು, ಹೆಬ್ಬಾಳ್ಕರ್ಬೆಳಗಾವಿ ಎಪಿಎಂಸಿ ಕದನ ಅಂತ್ಯ: ಮತ್ತೆ ರಾಜಿಯಾದ ಜಾರಕಿಹೊಳಿ ಸಹೋದರರು, ಹೆಬ್ಬಾಳ್ಕರ್

ಸುದ್ದಿಗೋಷ್ಠಿ ನಡೆಸಿ ಎಪಿಎಂಸಿ ಚುನಾವಣೆ ಬಗ್ಗೆ ಮಾಹಿತಿ ನೀಡಿದ ಅವರು, ಕಚೇರಿಯಲ್ಲಿಯೇ ಬೆಳಗ್ಗೆ 10 ರಿಂದ 11ಗಂಟೆವರೆಗೆ ಅಭ್ಯರ್ಥಿಗಳ ನಾಮಪತ್ರ ಸ್ವೀಕರಿಸಲಾಗುವುದು. 11ರಿಂದ 11:30 ಕ್ಕೆ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಮಾಡಲಾಗುವುದು. 11:30 ರಿಂದ 12 ಗಂಟೆಗೆ ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆಯಬಹುದು.

 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ತಿಳಿಸಿದ ಸಿದ್ದರಾಮಯ್ಯ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ತಿಳಿಸಿದ ಸಿದ್ದರಾಮಯ್ಯ

12:30 ರಿಂದ 1:30ರವರೆಗೆ ಚುನಾವಣೆ ನಡೆಯುತ್ತದೆ. 1:30 ರ ನಂತರ ಮತ ಎಣಿಕೆ ನಡೆಯಲಿದೆ. ನಂತರ‌ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು.

Election will be held for APMC president and vice president place

3 ನಾಮ ನಿರ್ದೇಶಿತ ಸ್ಥಾನ, 8 ಜೆಡಿಎಸ್ ಮತ್ತು ಕಾಂಗ್ರೆಸ್ ಗೆ 6 ಸ್ಥಾನಗಳಿವೆ. ಈ ಪೈಕಿ ಕಾಂಗ್ರೆಸ್ ಬೆಂಬಲದಿಂದ ಆಯ್ಕೆಯಾಗಿದ್ದ ರಘು ಸದಸ್ಯತ್ವ ರದ್ದಾಗಿದೆ. ಹೀಗಾಗಿ ಕಾಂಗ್ರೆಸ್ ಬಲ 5 ಜೆಡಿಎಸ್ ನ 8 ಸದಸ್ಯರ ಪೈಕಿ ಹರೀಶ್ ಗೌಡ ಸಂಬಂಧಿ ಮಹೇಶ್ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ.

 ಮೈಸೂರು ಮಹಾನಗರ ಪಾಲಿಕೆಯಲ್ಲಿ ನಮಗೆ ಮೇಯರ್ ಸ್ಥಾನ ಬೇಕು: ಸಿದ್ದರಾಮಯ್ಯ ಮೈಸೂರು ಮಹಾನಗರ ಪಾಲಿಕೆಯಲ್ಲಿ ನಮಗೆ ಮೇಯರ್ ಸ್ಥಾನ ಬೇಕು: ಸಿದ್ದರಾಮಯ್ಯ

ಹೀಗಾಗಿ ಕಾಂಗ್ರೆಸ್ 6, ಜೆಡಿಎಸ್ 7 ಸದಸ್ಯ ಬಲ ಹೊಂದಲಿವೆ. ಮೂವರು ನಾಮನಿರ್ದೇಶಿತ ಸದಸ್ಯರನ್ನು ಸರ್ಕಾರ ಆಯ್ಕೆ ಮಾಡುವಾಗ ಕಾಂಗ್ರೆಸ್ ಪಕ್ಷಕ್ಕೆ ಎರಡು ಹಾಗೂ ಜೆ ಡಿಎಸ್ ಪಕ್ಷಕ್ಕೆ ಒಂದು ಸ್ಥಾನ ದೊರೆಯುವ ಸಾಧ್ಯತೆ ಇದೆ. ಹೀಗಾದ್ರೆ ಉಭಯ ಪಕ್ಷಗಳು ತಲಾ 8 ಸದಸ್ಯರ ಬಲ ಹೊಂದಲಿವೆ. ಮತ ಚಲಾವಣೆ ಆಗಿ ಸಮಬಲ ಸಾಧಿಸಿದ್ರೆ ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ ಎಂದರು.

ಚುನಾವಣೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಚುನಾವಣೆಯಲ್ಲಿ ಒಂದು ವೇಳೆ ಸಮಬಲ ಬಂದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಮತದಾನ ಹಾಗೂ ಏಣಿಕೆ ಕಾರ್ಯವನ್ನು ಚಿತ್ರೀಕರಣ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ತಿಳಿಸಿದರು.

English summary
Election will be held in Mysore on October 27 for APMC president and vice president place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X