ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗೆ ಮೋದಿ ಬರುವ ಮುನ್ನವೇ ಬಿಜೆಪಿ ಬಾವುಟ ತೆಗೆಸಿದ ಚು.ಆಯೋಗ

|
Google Oneindia Kannada News

Recommended Video

Lok Sabha Elections 2019: ಮೈಸೂರಿಗೆ ಮೋದಿ ಬರುವ ಮುನ್ನವೇ ಬಿಜೆಪಿ ಬಾವುಟಗಳ ತೆರವು

ಮೈಸೂರು, ಏಪ್ರಿಲ್ 9 : ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿ ಭಾಷಣ ಕೇಳಲು ನೂರಾರು ಬಿಜೆಪಿ ಕಾರ್ಯಕರ್ತರು ಸಜ್ಜಾಗಿದ್ದಾರೆ. ನಗರದ ಎಲ್ಲೆಲ್ಲೂ ಬಿಜೆಪಿ ಬಾವುಟಗಳು ಹಾರಾಡುತ್ತಿದ್ದು, ಮೋದಿಯ ಆಗಮನಕ್ಕೆ ಸ್ವಾಗತ ಕೋರುತ್ತಿವೆ. ಆದರೆ ಈಗ ಪ್ರಧಾನಿ ಮೋದಿ ಬರುವ ಮೊದಲೇ ಹಾಕಿದ್ದ ಬಾವುಟಗಳನ್ನು ತೆರವು ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೌದು, ಇಂದು ಮೈಸೂರಿನಲ್ಲಿ ನಡೆಯುವ ಮೋದಿ ಸಮಾವೇಶಕ್ಕೆ ಬಾವುಟ ಪ್ರದರ್ಶನಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿರಲಿಲ್ಲ. ಈ ಕಾರಣ ಪಕ್ಷದ ಚಿಹ್ನೆಯುಳ್ಳ ಬಾವುಟಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿತ್ತು. ಹೀಗಾಗಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ನಗರದಲ್ಲಿ ಹಾಕಿದ್ದ ಬಾವುಟಗಳನ್ನು ತೆರವುಗೊಳಿಸಿದ್ದಾರೆ.

 ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ಮೈಸೂರು ಬಿಜೆಪಿ ಘಟಕ ರೆಡಿ ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ಮೈಸೂರು ಬಿಜೆಪಿ ಘಟಕ ರೆಡಿ

Election Commission cleared BJP Flags in Mysuru

ರಾಮಸ್ವಾಮಿ ವೃತ್ತದಿಂದ ಕೋರ್ಟ್ ಆವರ ರಸ್ತೆ ಸೇರಿದಂತೆ ಬುಲೇವಾರ್ಡ್ ರಸ್ತೆಯಲ್ಲಿದ್ದ ಬಿಜೆಪಿ ಧ್ವಜಗಳನ್ನು ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ತೆರವು ಮಾಡಿದ್ದಾರೆ.

Election Commission cleared BJP Flags in Mysuru

ಚುನಾವಣೆ ಪ್ರಚಾರ ನಿಮಿತ್ತ ಪ್ರಧಾನಿ ಮೋದಿ ಇಂದು ಚಿತ್ರದುರ್ಗದ ಚಳ್ಳಕೆರೆಗೆ ಆಗಮಿಸಿದ್ದು, ನಂತರ ಮೈಸೂರಿನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೈಸೂರಿನಲ್ಲಿ ಮೋದಿಯ ಅಲೆಯನ್ನು ಹಾಗೂ ಭಾಷಣವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಸಮಾವೇಶ ನಡೆಯುವ ಸ್ಥಳಕ್ಕೆ ನೂರಾರು ಕಾರ್ಯಕರ್ತರು ಆಗಮಿಸಿದ್ದಾರೆ.

English summary
Lok Sabha Elections 2019:Eection commission cleared BJP Flags near Mysuru Maharahaja college ground.Mysuru corporation workers cleared all flags.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X