ಮೈಸೂರಿನಲ್ಲಿ 8 ಅಂಗಡಿಗಳಲ್ಲಿ ಕಳ್ಳರ ಕೈಚಳಕ
ಮೈಸೂರು, ಜುಲೈ 4: ಮೈಸೂರು - ನಂಜನಗೂಡು ರಸ್ತೆಯಲ್ಲಿರುವ ಎಪಿಎಂಸಿ ಎ ಬ್ಲಾಕ್ ನಲ್ಲಿ 8 ಮಳಿಗೆಗಳ ಬಾಗಿಲು ಮುರಿದು 20 ಸಾವಿರ ರೂಪಾಯಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಎ ಬ್ಲಾಕ್ ನ ಮಳಿಗೆಗಳಿಗೆ ನುಗ್ಗಿದ ಖದೀಮರು ಹಣ ಕಳವು ಮಾಡಿದ್ದಾರೆ. ಜಯ ಮಾತಾಜಿ ಎಂಟರ್ ಪ್ರೈಸಸ್, ಸದಾಶಿವ ಟ್ರೇಡ್ಸ್, ಶ್ರೀ ಈಶ್ವರಿ ಎಂಟರ್ ಪ್ರೈಸಸ್, ವೆಂಕಟೇಶ್ವರ ಟ್ರೇಡರ್ಸ್ ಸೇರಿದಂತೆ ಇನ್ನಿತರ ಮಳಿಗೆಗಳನ್ನು ಜಾಲಾಡಿರುವ ಕಳ್ಳರು, ಹಣ ಸಿಗದೆ ವಾಪಸ್ ತೆರಳಿದ್ದಾರೆ. ಬೆಳಗ್ಗಿನ ಜಾವ ಅನ್ ಲೋಡಿಂಗ್ ಆಗಲು ಲಾರಿಗಳು ಬಂದಾಗ ಮಳಿಗೆಗಳ ಬೀಗಗಳನ್ನು ಹೊಡೆದಿರುವುದನ್ನು ಗಮನಿಸಿದ್ದಾರೆ.

ಕೂಡಲೇ ದಕ್ಷಿಣ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕಳ್ಳತನ ಎಸಗುತ್ತಿರುವ ದೃಶ್ಯಗಳು ಮಳಿಗೆಗಳಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಿಸಿಟಿವಿ ಫುಟೇಜ್ ಪಡೆದಿರುವ ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಸಂಬಂಧ ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications