ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ 8 ಮಂದಿಗೆ ಡೆಂಗ್ಯೂ ಜ್ವರ ಪತ್ತೆ

|
Google Oneindia Kannada News

ಮೈಸೂರು, ಜುಲೈ 11: ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧೆಡೆ ಎಂಟು ಜನರಲ್ಲಿ ಡೆಂಗ್ಯೂ ಪ್ರಕರಣ ಖಚಿತವಾಗಿದೆ. ಜೂನ್ ನಲ್ಲಿ 83 ಜನರಲ್ಲಿ ಡೆಂಗ್ಯೂ ಶಂಕೆ ವ್ಯಕ್ತವಾಗಿದ್ದು, ಅವರಲ್ಲಿ ಎಂಟು ಜನರಿಗೆ ಡೆಂಗ್ಯೂ ಇರುವುದಾಗಿ ವರದಿ ದೃಢಪಡಿಸಿದೆ.

ಪ್ರಸಕ್ತ ವರ್ಷದಲ್ಲಿ ಮೈಸೂರಿನಲ್ಲಿ ಜನವರಿಯಲ್ಲಿ 13, ಫೆಬ್ರುವರಿಯಲ್ಲಿ 37, ಮಾರ್ಚ್ ನಲ್ಲಿ 19, ಏಪ್ರಿಲ್ ನಲ್ಲಿ 16, ಮೇನಲ್ಲಿ 15 ಮಂದಿಯ ರಕ್ತದ ಸ್ಯಾಂಪಲ್ ಪರೀಕ್ಷಿಸಲಾಗಿತ್ತಾದರೂ, ಯಾರಲ್ಲೂ ಡೆಂಗ್ಯೂ ಇರಲಿಲ್ಲ. ಆದರೆ ಜೂನ್ ಒಂದೇ ತಿಂಗಳಲ್ಲಿ 83 ಮಂದಿಯ ರಕ್ತದ ಸ್ಯಾಂಪಲ್ ‍ಗಳನ್ನು ಪರೀಕ್ಷಿಸಲಾಗಿದ್ದು, 8 ಮಂದಿಗೆ ಡೆಂಗ್ಯೂ ಜ್ವರವಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಕಳೆದ ವರ್ಷ 49 ಮಂದಿಯಲ್ಲಿ ಡೆಂಗ್ಯೂ ಇರುವುದು ಖಚಿತಪಟ್ಟಿತ್ತು.

 ಬೆಂಗಳೂರಲ್ಲಿ ಮತ್ತೆ ಡೆಂಗ್ಯೂ ಹಾವಳಿ, 1,830 ಪ್ರಕರಣ ಪತ್ತೆ ಬೆಂಗಳೂರಲ್ಲಿ ಮತ್ತೆ ಡೆಂಗ್ಯೂ ಹಾವಳಿ, 1,830 ಪ್ರಕರಣ ಪತ್ತೆ

ರಾಜ್ಯದಲ್ಲಿ 2017ರಲ್ಲಿ 843 ಮಂದಿಗೆ ಡೆಂಗ್ಯೂ ಇರುವುದು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದರು. 2016ರಲ್ಲಿ 582, 2015ರಲ್ಲಿ 382 ಹಾಗೂ 2014ರಲ್ಲಿ 66 ಮಂದಿಯಲ್ಲಿ ಡೆಂಗ್ಯೂ ಪ್ರಕರಣ ದಾಖಲಾಗಿತ್ತು.

eight dengue cases found in Mysuru

ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳು, ಖಾಸಗಿ ಲ್ಯಾಬೊರೇಟರಿಗಳು, ಡಯೋಗ್ನಸ್ಟಿಕ್ ಸೆಂಟರ್ ಗಳಿಗೆ ಬರುವ ರಕ್ತದ ಮಾದರಿಗಳನ್ನು ಪರೀಕ್ಷಿಸಿ, ರೋಗ ಲಕ್ಷಣದ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

English summary
8 dengue cases found in Mysuru. On this year overall 83 cases were diagnised and out of this, eight cases reported dengue positive. Health department officials alerted all health centres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X