ಕಲುಷಿತವಾದ ಮೈಸೂರಿನ ಪ್ರಸಿದ್ಧ ಕುಕ್ಕರಹಳ್ಳಿ ಕೆರೆ

ಕ್ಲೀನ್ ಸಿಟಿ ಎಂದೇ ಹೆಸರು ಪಡೆದಿರುವ ಮೈಸೂರಿನ ಜನರ ಮೆಚ್ಚಿನ ತಾಣಗಳಲ್ಲಿ ಒಂದು ಕುಕ್ಕರಹಳ್ಳಿ ಕೆರೆ. ಆದರೆ, ಇದೀಗ ಈ ಸ್ಥಳ ಗಬ್ಬು ವಾಸನೆ ಹೊಡೆಯುತ್ತಿದೆ.

ನಿನ್ನೆ ರಾತ್ರಿ ಮೈಸೂರಿನಲ್ಲಿ ಭಾರಿ ಮಳೆ ಸುರಿದಿದೆ. ಬಡಾವಣೆಯ ನೀರು ಕೊಚ್ಚಿ ಕೆರೆಗೆ ಸೇರಿದೆ. ಇದರಿಂದ ಕೆರೆಯ ನೀರು ಕಲುಷಿತವಾಗಿದೆ. ರಾಜಕಾಲುವೆ ಮುಚ್ಚಿದ್ದ ಕಾರಣ ಪಡುವಾರಳ್ಳಿ ಮಾರ್ಗವಾಗಿ ಬರುವ ನೀರು ಕೆರೆಗೆ ಸೇರಿದೆ.

ಕುಕ್ಕರಹಳ್ಳಿ ಕೆರೆಯಲ್ಲಿ ವಾಕಿಂಗ್ ಮಾಡುವ ಮಂದಿ ಅನೇಕರು. ಮೈಸೂರಿನ ಎಷ್ಟೋ ಜನರ ಮಾರ್ನಿಂಗ್ ಶುರು ಆಗುವುದೇ ಕುಕ್ಕರಹಳ್ಳಿ ಕೆರೆಯಿಂದ. ಕೆರೆಯ ನೀರು ಮಲಿನವಾಗಿದ್ದು, ಕೊಚ್ಚೆ, ಕೆಸರು ಉಂಟಾಗಿ ಗಬ್ಬು ವಾಸನೆ ಬರುತ್ತಿದೆ.

Drainage Water Filled In Kukkarahalli Lake Because Of Heavy Rain

ಪ್ರತಿ ದಿನ ಕುಕ್ಕರಹಳ್ಳಿ ಕೆರೆಗೆ ಬರುವಂತೆ ಇಂದು ಬಂದ ಪರಿಸರ ಪ್ರೇಮಿಗಳು ಬೇಸರಗೊಂಡು ಮನೆಗೆ ಹೋದರು. ಮೂಗು ಮುಚ್ಚಿಕೊಂಡು ಹೋಗೋ ತಮ್ಮ ವಾಯು ವಿಹಾರ ಮುಗಿಸಿದರು.

ಕರೆ ಸಂರಕ್ಷಣೆ ಕಡೆ ಗಮನ ನೀಡಿದ ಜನ ಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ಅಂದಹಾಗೆ, ಕುಕ್ಕರಹಳ್ಳಿ ಕೆರೆ ಮೈಸೂರಿನ ಕುವೆಂಪು ನಗರದಲ್ಲಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+