ಮೈಸೂರನ್ನೇ ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆಗೆ ಕಾರಣ ಬಹಿರಂಗ!
ಮೈಸೂರು, ಫೆಬ್ರವರಿ 12: ಮೈಸೂರು ನಗರದ ಎಲೆ ತೋಟದ ಬಳಿ ಭಾನುವಾರ ತಡರಾತ್ರಿ ಜೋಡಿ ಕೊಲೆ ನಡೆದಿತ್ತು. ಪ್ರಕರಣದ ತನಿಖೆ ಕೈಗೊಂಡ ಕೆ. ಆರ್. ಠಾಣಾ ಪೊಲೀಸರು ಕೊಲೆಗೆ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಭಾನುವಾರ ತಡರಾತ್ರಿ ಕತ್ತುಕೊಯ್ದು, ಮಾರಕಾಸ್ತ್ರಗಳಿಂದ ದಾಳಿ ಮಾಡಿ ಗೌರಿಶಂಕರ ನಗರದ ನಿವಾಸಿಗಳಾದ ಕಿರಣ್ ಮತ್ತು ಕಿಶನ್ ಬಂಧಿಸಲಾಗಿತ್ತು. ಸೋಮವಾರ ಮುಂಜಾನೆ ರಕ್ತಸಿಕ್ತ ಮೃತದೇಹಗಳನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದರು.
ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಚಾಮುಂಡಿಬೆಟ್ಟದ ಪಾದದ ನಿವಾಸಿಗಳಾದ ದಿಲೀಪ್ (27), ಸ್ವಾಮಿ (36) ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೊಲೆ ಯತ್ನ ನಡೆದಾಗ ಮಧುಸೂಧನ ಎಂಬುವವರು ಗಾಯಗೊಂಡಿದ್ದರು. ಅವರು ನೀಡಿದ ದೂರಿನ ಮೇಲೆಯೇ ತನಿಖೆ ನಡೆಸಲಾಗಿದೆ.

ಕೊಲೆಗೆ ಕಾರಣವೇನು?; ನಿವೇಶನದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಿರಣ್ ಮತ್ತು ಕಿಶನ್ ಹತ್ಯೆ ಮಾಡಿದ್ದ ನಾಲ್ವರು ಬಳಿಕ ಪರಾರಿಯಾಗಿದ್ದರು. ಮೈಸೂರು ನಗರದ ಗೌರಿಶಂಕರ ನಗರ ಸರ್ವೆ ನಂ.101 ನಿವೇಶನ ಸಂಖ್ಯೆ 2ರ ಜಾಗದ ವಿಚಾರದಲ್ಲಿ ಆರೋಪಿ ಸ್ವಾಮಿ ಹಾಗೂ ಕಿರಣ ಮತ್ತು ಅವರ ಕಡೆಯವರಿಗೂ ಆಗಾಗ ಗಲಾಟೆ ನಡೆಯುತ್ತಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಫೆಬ್ರವರಿ 7ರಂದು ನಡೆದ ಗಲಾಟೆಯಲ್ಲಿ ಗೌರಿಶಂಕರ ನಗರದ ನಿವಾಸಿಗಳಾದ ಕಿರಣ್ ಮತ್ತು ಕಿಶನ್‌ರನ್ನು ಎಲೆತೋಟ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಘಟನೆಯಲ್ಲಿ ಮಧುಸೂಧನ್ ಎಂಬಾತ ಗಾಯಗೊಂಡಿದ್ದ.
ಕೆ. ಆರ್. ಠಾಣಾ ಪೊಲೀಸರು ಮೊದಲು ಆರೋಪಿಗಳಾದ ದಿಲೀಪ್ ಹಾಗೂ ಮಧು ಎಂಬಾತನನ್ನು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳನ್ನು ಫೆಬ್ರವರಿ 10ರಂದು ನಗರದ ಕುಂಬಾರಕೊಪ್ಪಲು ಗೇಟ್ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.












Click it and Unblock the Notifications