ಸಾಹಿತ್ಯ ಸಮ್ಮೇಳನದ ಆಯೋಜಕರಿಂದ ರಾಜಮನೆತನಕ್ಕೆ ಅಗೌರವ
ಮೈಸೂರು, ನವೆಂಬರ್ 25 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 83 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೈಸೂರಿನ ರಾಜಮನೆತಕ್ಕೆ ಆಹ್ವಾನ ನೀಡದೆ ಅಗೌರವ ತೋರಿಸಲಾಗಿದೆ.
ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ರಾಜವಂಶದವರನ್ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಹ್ವಾನ ನೀಡದೆ ಅಗೌರವ ತೋರಲಾಗಿದೆ. ಯದುವಂಶಸ್ಥ ಯದುವೀರ್, ರಾಜಮಾತೆ ಪ್ರಮೋದಾ ದೇವಿ ಅವರಿಗೆ ಆಯೋಜಕರು ಸಮ್ಮೇಳನಕ್ಕೆ ಅಹ್ವಾನ ನೀಡಿಲ್ಲ.

1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅನ್ನು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದರು. ಆದರೆ ಅವರ ಮನೆತನವನ್ನೇ ಸರ್ಕಾರ ಮರೆತು ಸಮ್ಮೇಳನಕ್ಕೆ ಅಹ್ವಾನ ನೀಡದೆ ಅಗೌರವ ತೋರಿದೆ.












Click it and Unblock the Notifications