ಮೈಸೂರಿನಿಂದ ಹೈದರಾಬಾದ್, ಗೋವಾ, ಕೊಚ್ಚಿಗೆ ನೇರ ವಿಮಾನ ಹಾರಾಟ

ಬೆಂಗಳೂರು, ಜುಲೈ 19: ಇಂದಿನಿಂದ ಮೈಸೂರು, ಹೈದರಾಬಾದ್, ಗೋವಾ, ಕೊಚ್ಚಿ ನಡುವೆ ವಿಮಾನ ಹಾರಾಟ ಆರಂಭವಾಗಿದೆ.

ಅಲಯನ್ಸ್ ಏರ್ ಸಂಸ್ಥೆ ಈ ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸಲಿದ್ದು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಇನ್ಮುಂದೆ ಹೆಚ್ಚು ಚಟುವಟಿಕೆಗಳಿಂದ ಕೂಡಿರಲಿದೆ. ಬೆಂಗಳೂರು-ಮೈಸೂರು ನಡುವೆಯೂ ವಿಮಾನ ಹಾರಾಟದಲ್ಲಿನ ಸಮಯ ಬದಲಾವಣೆಯಾಗಿದ್ದು, ಉದ್ಯಮ ವಲಯ ಸೇರಿದಂತೆ ಪ್ರವಾಸೋದ್ಯಮಕ್ಕೆ ಇದು ಪೂರಕವಾಗಲಿದೆ.

ವಿಶಾಖಪಟ್ಟಣಂ-ವಿಜಯವಾಡ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ ಇದೀಗ, ಬೆಂಗಳೂರು-ಮೈಸೂರು ನಡುವಿನ ಹಾರಾಟಕ್ಕೆ ಸೀಮಿತವಾಗಿದೆ. ಸಮಯವೂ ಬದಲಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎನ್ನಲಾಗುತ್ತಿದೆ.

Direct flight facility from Mysuru to 3 places

-ಹೈದರಾಬಾದ್‌ ನಿಂದ ಮೈಸೂರಿಗೆ ಬೆಳಗ್ಗೆ 6.5ಕ್ಕೆ ವಿಮಾನ ಹಾರಾಟನಡೆಸಲಿದ್ದು 7.50ಕ್ಕೆ ತಲುಪಲಿದೆ.
-ಮೈಸೂರಿನಿಂದ ಕೊಚ್ಚಿಗೆ ಬೆಳಗ್ಗೆ 8.15ಕ್ಕೆ ಹೊರಡಲಿದ್ದು 9.40ಕ್ಕೆ ಹೋಗಿ ತಲುಪಲಿದೆ.
-ಕೊಚ್ಚಿಯಿಂದ ಮೈಸೂರಿಗೆ ಬೆಳಗ್ಗೆ 10.10ಕ್ಕೆ ಹೊರಡಲಿದ್ದು 11.40ಕ್ಕೆ ಹೋಗಿ ತಲುಪಲಿದೆ.
-ಮೈಸೂರಿನಿಂದ ಬೆಂಗಳೂರಿಗೆ ಮಧ್ಯಾಹ್ನ 12.10ಕ್ಕೆ ಹೊರಡಲಿದ್ದು 1.05ಕ್ಕೆ ಹೋಗಿ ತಲುಪಲಿದೆ.
-ಬೆಂಗಳೂರಿನಿಂದ ಮೈಸೂರಿಗೆ ಮಧ್ಯಾಹ್ನ 1.50ಕ್ಕೆ ಹೊರಡಲಿದ್ದು 2.50ಕ್ಕೆ ಹೋಗಿ ತಲುಪಲಿದೆ.
-ಮೈಸೂರಿನಿಂದ ಗೋವಾಕ್ಕೆ ಮಧ್ಯಾಹ್ನ 3.20ಕ್ಕೆ ಹೊರಡಲಿದ್ದು ಸಂಜೆ 4.20ಕ್ಕೆ ಹೋಗಿ ತಲುಪಲಿದೆ.
-ಗೋವಾದಿಂದ ಮೈಸೂರಿಗೆ ಸಂಜೆ 5.20ಕ್ಕೆ ವಿಮಾನ ಹೊರಡಲಿದ್ದು ಸಂಜೆ 6.50ಕ್ಕೆ ತಲುಪಲಿದೆ.
-ಮೈಸೂರಿನಿಂದ ಹೈದರಾಬಾದ್‌ಗೆ ಸಂಜೆ 7.20ಕ್ಕೆ ಹೊರಡಲಿದ್ದು ರಾತ್ರಿ 9.5ಕ್ಕೆ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+