ವಿಡಿಯೋ; ಕಾರಿನ ಟೈರ್ ಬದಲಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಮೈಸೂರು, ಫೆಬ್ರವರಿ 26: ತಮ್ಮ ಆಡಳಿತ ವೈಖರಿ, ಸರಳ ವ್ಯಕ್ತಿತ್ವದ ಮೂಲಕ ಹಲವರು ಜನರ ಮೆಚ್ಚುಗೆ ಪಡೆದಿದ್ದಾರೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ. ಪ್ರಸ್ತುತ ಮೈಸೂರು ಜಿಲ್ಲಾಧಿಕಾರಿಯಾಗಿರುವ ಅವರು ಮತ್ತೊಮ್ಮೆ ಜನರ ಗಮನ ಸೆಳೆದಿದ್ದಾರೆ.

ಜನರ ಜೊತೆ ಸದಾ ಬೆರೆಯುವ ರೋಹಿಣಿ ಸಿಂಧೂರಿ ಅವರು ಇದೀಗ ತಮ್ಮ ಕಾರಿನ ಟೈರ್ ಬದಲಾಯಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ರೋಹಿಣಿ ಸಿಂಧೂರಿ ಅವರು ಕುಟುಂಬದ ಜೊತೆ ಹೊರ ಹೋಗಿದ್ದ‌ ಸಂದರ್ಭದಲ್ಲಿ ತಾವೇ ಕಾರಿನ ಟೈರ್ ಕಳಚಿ, ಬದಲಾಯಿಸಿದ್ದಾರೆ. ಇದನ್ನು ಗಮನಿಸಿದ ಜನರು ನೀವು ರೋಹಿಣಿ ಸಿಂಧೂರಿ ಅವರಲ್ಲವೇ?, ನೀವೇ ಟೈರ್ ಬದಲಾವಣೆ ಮಾಡುತ್ತೀರಾ? ಎಂದು ಹೇಳಿದ್ದಾರೆ.

Viral Video Mysuru DC Rohini Sindhuri Change The Car Tyre

ರೋಹಿಣಿ ಸಿಂಧೂರಿ ಅವರು ಕಾರಿನ ಟೈರ್ ಬದಲಾವಣೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಲ್ಲಾಧಿಕಾರಿಗಳ ನಡೆಗೆ ಜನರು ಸಹ ಮೆಚ್ಚುಗೆ ಸೂಚಿಸಿದ್ದಾರೆ.

ಟೈರ್ ಬದಲಾಯಿಸುವಾಗ ರೋಹಿಣಿ ಸಿಂಧೂರಿ ಅವರನ್ನು ಗುರುತು ಹಿಡಿದ ಜನರು ತಾವು ರೋಹಿಣಿ ಸಿಂಧೂರಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಆದರೆ, ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡದ ಅವರು, ನಕ್ಕು ಸುಮ್ಮನಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+