ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತಿಗೋಡು ಶಿಬಿರದಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿದ ದಸರಾ ಆನೆ ವರಲಕ್ಷ್ಮಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 17: ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ವರಲಕ್ಷ್ಮಿ ಭಾನುವಾರ ಹೆಣ್ಣು ಮರಿಗೆ ಜನ್ಮ ನೀಡಿದೆ.

Recommended Video

Randeep Hooda shares gutting video of people shooting at elephant in Karnataka | Bandipur

ಹದಿನೈದು ವರ್ಷಗಳಿಂದ ಶಿಬಿರದಲ್ಲಿರುವ ವರಲಕ್ಷ್ಮಿಈ ಹಿಂದೆಯೂ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ಈಗ ಬೆಳೆದು ದೊಡ್ಡವಾಗಿವೆ. ಕಳೆದ ಸೆಪ್ಟೆಂಬರ್ ನಲ್ಲಿ ನಡೆದ ಮೈಸೂರು ದಸರಾದ ಗಜಪಡೆಯಲ್ಲಿ ವರಲಕ್ಷ್ಮಿ ಪಾಲ್ಗೊಂಡಿತ್ತು. ಈಗ ವರಲಕ್ಷ್ಮಿಮತ್ತು ಮರಿ ಆನೆ ಎರಡೂ ಆರೋಗ್ಯವಾಗಿವೆ ಎಂದು ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮುಜಿಬ್ ರೆಹಮನ್ ತಿಳಿಸಿದ್ದಾರೆ.

ಅರಮನೆಗೆ ಬಂದಾಯ್ತು ಗಜಪಡೆ; ಇಲ್ಲಿದೆ ನೋಡಿ ದಸರಾ ಆನೆಗಳ ಬಯೋಡಾಟಾಅರಮನೆಗೆ ಬಂದಾಯ್ತು ಗಜಪಡೆ; ಇಲ್ಲಿದೆ ನೋಡಿ ದಸರಾ ಆನೆಗಳ ಬಯೋಡಾಟಾ

Dasara Elephant Varalakshmi Gave Birth In Mattigodu

ಆನೆ ಮರಿ ಮತ್ತು ತಾಯಿ ಆನೆಯನ್ನು ಶಿಬಿರದ ಇತರ ಆನೆಗಳು ತಮ್ಮ ಮಧ್ಯವೇ ಇರಿಸಿಕೊಂಡು ಪ್ರೀತಿಯಿಂದ ನೋಡಿಕೊಳ್ಳುತ್ತಿವೆ. ಪುಟಾಣಿ ಮರಿ ತಾಯಿ ಜೊತೆ ಓಡಾಡಿಕೊಂಡಿದೆ. ವರಲಕ್ಷ್ಮಿ ಆನೆಯ ಮಾವುತ ರವಿ ಆನೆಗೆ ಬೇಕಾದ ಆಹಾರ ಮತ್ತಿತರ ವಸ್ತುಗಳನ್ನು ಎಚ್ಚರಿಕೆಯಿಂದ ನೀಡುತ್ತಿದ್ದಾರೆ.

English summary
Dasara elephant varalakshmi gave birth on Sunday at the mattigodu Nagarahole Wildlife Refuge,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X