• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಜೆಟ್ ಎಫೆಕ್ಟ್: ವಾಹನ ಸವಾರರ ಜೇಬಿಗೆ ಬೀಳುತ್ತಿದೆ ಕತ್ತರಿ

|

ಮೈಸೂರು, ಜುಲೈ 8: ಕೇಂದ್ರ ಬಜೆಟ್ ಮಂಡನೆಯಾದ ಕೇವಲ 24 ಗಂಟೆಯೊಳಗೆ ಪೆಟ್ರೋಲ್‌, ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಪೆಟ್ರೋಲ್‌ ಲೀಟರ್‌ಗೆ 2.30 ರೂಪಾಯಿ ಹಾಗೂ ಡೀಸೆಲ್ ಲೀಟರ್‌ಗೆ 2.40 ರೂಪಾಯಿ ಹೆಚ್ಚಾಗಿದೆ.

ಮೈಸೂರಿನ ಅನೇಕ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್‌ ದರ 73.85 ರೂ ಇದ್ದದ್ದು, 76.51 ರೂ ಆಗಿದೆ. ಡೀಸೆಲ್ ದರ 67.24 ಇದ್ದದ್ದು, 69.80 ರೂ ಆಗಿದೆ. ಪೆಟ್ರೋಲ್‌, ಡೀಸೆಲ್ ದರ ಹೆಚ್ಚಿಸಿದ್ದು ಪ್ರತಿಯೊಬ್ಬರ ಜೇಬಿಗೂ ಬರೆ ಎಳೆದಂತಾಗಿದೆ. ಮಳೆ ಇಲ್ಲದೆ, ಬರಗಾಲದಿಂದಾಗಿ ಜನ ತತ್ತರಿಸಿದ್ದಾರೆ. ಈಗ ಸರ್ಕಾರ ಬೆಲೆ ಏರಿಕೆ ಹೊರೆ ಹೊರಿಸಿದೆ ಎನ್ನುತ್ತಾರೆ ವಾಹನ ಸವಾರರು.

ಕೇಂದ್ರ ಬಜೆಟ್ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಆಯ್ತು ದುಬಾರಿ

ಪೆಟ್ರೋಲ್‌, ಡೀಸೆಲ್ ದರ ಹೆಚ್ಚಿಸಿದರೆ ಎಲ್ಲ ವಸ್ತುಗಳ ಬೆಲೆಗಳೂ ಏರುತ್ತವೆ. ಬೆಲೆ ಏರಿಕೆ ಪೆಟ್ಟು ಬಡವರು, ಮಧ್ಯಮ ವರ್ಗದವರಿಗೆ ಹೆಚ್ಚು. ನಿತ್ಯ ತೈಲ ಬೆಲೆ ಪರಿಷ್ಕರಣೆಯಿಂದ ಆಗುತ್ತಿದ್ದ ಏರಿಳಿತ ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ಬಜೆಟ್ ನೆಪದಲ್ಲಿ ಪೆಟ್ರೋಲ್‌ 2.53 ರೂ ಡೀಸೆಲ್ ಬೆಲೆಯಲ್ಲಿ 2.44 ರೂ ಏರಿಕೆಯಾಗಿದೆ. ಒಂದೇ ದಿನ ಬೆಲೆ ಏರಿಕೆಯಾಗಿರುವುದಕ್ಕೆ ವಾಹನ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೈಲ ಬೆಲೆ ಹೆಚ್ಚಳದಿಂದ ರೈತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಸಾಗಣೆ ಬೆಲೆ ಹೆಚ್ಚಾಗುತ್ತದೆ. ಕೃಷಿಗೆ ಡೀಸೆಲ್ ಮೋಟಾರ್‌, ಟ್ರಾಕ್ಟರ್‌, ಪವರ್‌ ಟಿಲ್ಲರ್ ಬಳಸಲು ಕಷ್ಟವಾಗುತ್ತದೆ. ಹಾಗೆಯೇ, ಪದಾರ್ಥಗಳ ಬೆಲೆ ಹೆಚ್ಚುತ್ತದೆ. ಕೃಷಿ ಉತ್ಪನ್ನಗಳ ವೆಚ್ಚ ಹೆಚ್ಚುತ್ತದೆ. ಇದರಿಂದ ಗ್ರಾಹಕರಿಗೂ ಹೊರೆ ಬೀಳುತ್ತದೆ. ಒಟ್ಟಾರೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಬಿಸಿ ಈ ಬಾರಿ ಇನ್ನೂ ಹೆಚ್ಚಿದೆ ಎನ್ನಬಹುದು.

English summary
Just 24 hours after the Union Budget, petrol and diesel prices have been increased. Petrol is up by Rs 2.30 per liter and diesel by Rs 2.40 per liter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X