ಮೈಸೂರು: ಬ್ರಿಟನ್‌ನಿಂದ ಬಂದಿದ್ದವರಿಗೆ ಕೊರೊನಾ ತಪಾಸಣೆ
ಮೈಸೂರು, ಡಿಸೆಂಬರ್ 23: ಬ್ರಿಟನ್‌ನಿಂದ ಮೈಸೂರಿಗೆ ಬಂದಿದ್ದ ಏಳು ಮಂದಿಗೆ ಪುರಭವನ ಆವರಣದಲ್ಲಿರುವ ಟೆಸ್ಟಿಂಗ್ ಕೇಂದ್ರದಲ್ಲಿ ಕೊರೊನಾ ತಪಾಸಣೆ ನಡೆಸಲಾಗುತ್ತಿದೆ.
ಬುಧವಾರ ಸಂಜೆ ಅಥವಾ ಡಿ.24 ರಂದು ಬೆಳಿಗ್ಗೆ ಸಂಪೂರ್ಣ ವರದಿ ಬರಲಿದ್ದು, ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಅಮರನಾಥ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ, ರೋಗಿಗಳ ಸ್ಯಾಂಪಲ್ಸ್‌ಗಳನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ. ಈಗಾಗಲೇ ಬಂದಿರುವ ಕೊರೊನಾ ಸೋಂಕೇ ಅಥವಾ ರೂಪಾಂತರ ಗೊಂಡಿರುವ ಕೊರೊನಾ ಸೋಂಕೇ ಎಂಬುದನ್ನು ಕಂಡುಹಿಡಿಯಲಾಗುತ್ತದೆ ಎಂದಿದ್ದಾರೆ.

ರೂಪಾಂತರ ಕೊರೊನಾ ವೈರಸ್ ಅತ್ಯಂತ ವೇಗವಾಗಿ ಹರಡುತ್ತದೆ ಎಂಬ ಮಾಹಿತಿ ಇದೆ. ಆದರೆ, ಈ ಬಗ್ಗೆ ಇನ್ನೂ ಆರೋಗ್ಯ ಇಲಾಖೆಯಿಂದ ಮಾಹಿತಿ ಬಂದಿಲ್ಲ. ಅಲ್ಲದೆ, ಹೊಸ ವೈರಸ್‌ಗೆ ಸಂಬಂಧಿಸಿದಂತೆ ಮಾರ್ಗಸೂಚಿಯೂ ಬಿಡುಗಡೆಯಾಗಿಲ್ಲ. ಹಾಗಾಗಿ ಕೊರೊನಾ ಸೋಂಕಿನ ಎಸ್‌ಒಪಿ ನಂತೆ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬ್ರಿಟನ್‌ನಿಂದ ಮೈಸೂರಿಗೆ ಬಂದಿರುವವರ ಬಗ್ಗೆ ನಿನ್ನೆಯಿಂದಲೂ ಹುಡುಕಾಟ ನಡೆಸಲಾಗಿದ್ದು, ಏಳು ಮಂದಿ ಪತ್ತೆಯಾಗಿದ್ದಾರೆ.












Click it and Unblock the Notifications