• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ: ಮತದಾರರಿಗೆ ಕೈ ಮುಗಿದು ಮನವಿ ಮಾಡಿದ ದೇವೇಗೌಡ

|

ಮೈಸೂರು, ಏಪ್ರಿಲ್ 13: ಕಳೆದ ಚುನಾವಣೆಯಲ್ಲಿ ಪಡೆದ ಭಾರಿ ವಿಜಯದಿಂದ ಮೋದಿ ಅವರು ಅಹಮ್ಮಿಗೆ ಒಳಗಾಗಿ ದೇಶವನ್ನು ಹಾಳುಮಾಡುತ್ತಿದ್ದಾರೆ, ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಹೋರಾಡುತ್ತಿದೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಜಂಟಿ ಸಮಾವೇಶದಲ್ಲಿ ದೇವೇಗೌಡ ಅವರು ಮಾತನಾಡಿ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ದೇಶ ಒಂದು ಧರ್ಮಕ್ಕೆ ಸೇರಿಲ್ಲ, ಹಿಂದೂ, ಕ್ರಿಸ್ತರು, ಮುಸ್ಲಿಂರು, ಬೌದ್ಧರು ಎಲ್ಲರೂ ಸಮಬಾಳು ಪಡೆಯುವಂತೆ ದೇಶವಾಗಬೇಕು, ಮೋದಿ ಅವರ ಆಡಳಿತದಲ್ಲಿ ಧರ್ಮ-ಧರ್ಮಗಳ ನಡುವೆ ತಿಕ್ಕಾಟ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.

ಮೋದಿ ಅವರಿಗೆ ಸುದ್ದಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಚಾರ ಸಿಗುತ್ತಿರುವ ಬಗ್ಗೆ ಮಾತನಾಡಿದ ದೇವೇಗೌಡ ಅವರು, ಗ್ರಾಮೀಣ ಭಾಗದ ಜನರು ಬುದ್ಧಿವಂತರಿದ್ದಾರೆ, ಅವರಿಗೆ ಪೊಳ್ಳು ಮಾತುಗಳು ಯಾವುವು ಎಂದು ಗೊತ್ತಿದೆ ಎಂದರು.

'ನಾನು-ಸಿದ್ದರಾಮಯ್ಯ ಜಂಟಿ ಪ್ರಚಾರ'

'ನಾನು-ಸಿದ್ದರಾಮಯ್ಯ ಜಂಟಿ ಪ್ರಚಾರ'

ನಾನು-ಸಿದ್ದರಾಮಯ್ಯ ಅವರು ಹಲವು ದಿನಗಳಿಂದ ಜಂಟಿಯಾಗಿ ಪ್ರಚಾರ ಪ್ರವಾಸ ಮಾಡುತ್ತಿದ್ದೇವೆ, ಜನರಿಗೆ ಬದಲಾವಣೆ ಬೇಕಿದೆ ಎಂದ ದೇವೇಗೌಡ, ಇಷ್ಟು ದಿನ ಇದ್ದ ಅಸಮಾಧಾನಗಳನ್ನು ದೇಶದ ಕಾರಣಕ್ಕೆ ನಾವು ಮರೆಯಬೇಕಿದೆ ಎಂದು ಅವರು ಹೇಳಿದರು.

'ಮೋದಿ ಪ್ರಧಾನಿಯಾದರೆ ಸಂವಿಧಾನ ನಾಶ'

'ಮೋದಿ ಪ್ರಧಾನಿಯಾದರೆ ಸಂವಿಧಾನ ನಾಶ'

ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ, ಅಕಸ್ಮಾತ್ ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ ಸಂವಿಧಾನ ನಾಶ ಮಾಡುತ್ತಾರೆ. ಸಂವಿಧಾನದ ಮೇಲೆ ಮೋದಿ ಸರ್ಕಾರ ಮಾಡುತ್ತಿರುವ ಪ್ರಹಾರಗಳ ಬಗ್ಗೆ ಹಲವು ಉದಾಹರಣೆಗಳನ್ನು ನಾನು ಕೊಡಬಲ್ಲೆ ಎಂದು ದೇವೇಗೌಡ ಅವರು ಹೇಳಿದರು.

'ಸಿದ್ದರಾಮಯ್ಯ-ನನಗೆ ಗೌರವ ಸಿಗುವಂತೆ ಮಾಡಿ'

'ಸಿದ್ದರಾಮಯ್ಯ-ನನಗೆ ಗೌರವ ಸಿಗುವಂತೆ ಮಾಡಿ'

ನಾನು-ಸಿದ್ದರಾಮಯ್ಯ ಜೊತೆಯಾಗಿದ್ದೆವು, ಯಾವುದೋ ಕಾರಣಕ್ಕೆ ಬೇರೆಯಾದೆವು, ಈಗ ದೇಶದ ಕಾರಣಕ್ಕೆ ಮತ್ತೆ ಒಂದಾಗಿದ್ದೇವೆ. ಮೈತ್ರಿಯು ಕನಿಷ್ಟ 20 ಸ್ಥಾನಗಳನ್ನು ಗೆಲ್ಲದೇ ಹೋದರೆ ನಾನು-ಸಿದ್ದರಾಮಯ್ಯ ಮತ್ತೆ ಜೊತೆಯಾಗಿದ್ದಕ್ಕೆ ಅರ್ಥವಿಲ್ಲದೆ ಹೋಗುತ್ತದೆ ಎಂದು ದೇವೇಗೌಡ ಹೇಳಿದರು.

'ಕೈಮುಗಿದು ಬೇಡುತ್ತೇನೆ, ಮೈತ್ರಿಗೆ ಮತ ಹಾಕಿ'

'ಕೈಮುಗಿದು ಬೇಡುತ್ತೇನೆ, ಮೈತ್ರಿಗೆ ಮತ ಹಾಕಿ'

'ಕೈಮುಗಿದು ಬೇಡುತ್ತೇನೆ, ಮೈತ್ರಿಗೆ ಮತ ಹಾಕಿ'

ಮಂಡ್ಯದ ನಿಖಿಲ್ ಕುಮಾರಸ್ವಾಮಿ, ಮೈಸೂರಿನ ವಿಜಯಶಂಕರ್, ಚಾಮರಾಜನಗರ ಅಭ್ಯರ್ಥಿ ಧೃವನಾರಾಯಣ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ ದೇವೇಗೌಡ ಅವರು, ತಮ್ಮ ಭಾಷಣದಲ್ಲಿ ಹಲವು ಬಾರಿ 'ಕೈಮುಗಿದು ಬೇಡಿಕೊಳ್ಳುತ್ತೇನೆ' ಎಂದು ದೀನರಾಗಿ ಕೇಳಿಕೊಂಡರು. ಒಂದು ಬಾರಿ ವಿಜಯಶಂಕರ್ ಅವರನ್ನು ತಪ್ಪಾಗಿ ವಿಜಯ್ ಸಂಕೇಶ್ವರ್ ಎಂದು ಸಹ ಕರೆದು ನಂತರ ತಪ್ಪು ತಿದ್ದಿಕೊಂಡರು.

ರಾಹುಲ್ ಕಾಯಿಸಿದ್ದಕ್ಕೆ ಬೇಸರ

ರಾಹುಲ್ ಕಾಯಿಸಿದ್ದಕ್ಕೆ ಬೇಸರ

ಸಮಯದ ಅಭಾವ ಇರುವ ಕಾರಣ ಲಘು-ಬಗೆಯಲ್ಲಿ ಭಾಷಣವನ್ನು ಮುಗಿಸಿದ ದೇವೇಗೌಡ. ರಾಹುಲ್ ಗಾಂಧಿ ಅವರನ್ನು ಅರ್ಧಗಂಟೆ ಕಾಲ ಕಾಯಿಸಿದ್ದಕ್ಕೆ ಬೇಸರವಾಗಿದೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS leader Deve Gowda said if Modi become prime minister again then constitution will be in danger. He talked in Mandya constituency KR Nagar JDS-congress rally.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more