ಮೀರ್‌ಸಾಧಿಕ್ ಯಾರೆಂದು ನನಗೆ ತಿಳಿದಿಲ್ಲ : ಸಿಎಂ
ಮೈಸೂರು, ಮೇ 22 : ಮೈಸೂರು ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರ ಸೋಲಿಗೆ ಕಾರಣ ಏನೆಂದು ಅವರೇ ವರದಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಸೋಲಿಗೆ ಮೀರ್ ಸಾಧಿಕ್ ಆಗಿ ಯಾರು ಕೆಲಸ ಮಾಡಿದ್ದಾರೆ ಎಂಬುದನ್ನು ಅವರೇ ವರದಿ ಮೂಲಕ ನೀಡಲಿ ಎಂದು ಸಿಎಂ ತಿಳಿಸಿದರು.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಬೆಳಗ್ಗೆ ಮಂಡಕಳ್ಳಿಯ ವಿಮಾನನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರ ಸೋಲಿಗೆ ಮೀರ್ ಸಾಧಿಕ್ ಆಗಿ ಕೆಲಸ ಮಾಡಿದವರು ಯಾರೆಂದು ನನಗೆ ಗೊತ್ತಿಲ್ಲ. ವಿಶ್ವನಾಥ್ ಅವರೇ ಈ ಕುರಿತು ವರದಿ ನೀಡಲಿ ಎಂದು ಹೇಳಿದರು.
ಗುರುವಾರ ಮೈಸೂರು ನಗರ ಪೊಲೀಸ್ ಕಮೀಷನರ್ ನೂತನ ಕಛೇರಿ, ಪೊಲೀಸ್ ಪಬ್ಲಿಕ್ ಶಾಲೆಯ ನೂತನ ಕಟ್ಟಡ ನಗರ ಸಶಸ್ತ್ರ ಮೀಸಲು ಸಂಕೀರ್ಣ ಕಟ್ಟಡ, 396 ನೂತನ ಪೊಲೀಸ್ ವಸತಿ ಗೃಹಗಳು, ಪೊಲೀಸ್ ಅಧಿಕಾರಿಗಳ ನೂತನ ಅತಿಥಿಗೃಹ ಹಾಗೂ ನಗರ ಸಶಸ್ತ್ರ ಮೀಸಲು ಪಡೆಯ ನೂತನ ವಿಶ್ರಾಂತಿ ಗೃಹ ಕಟ್ಟಡಗಳ ಶಂಕುಸ್ಥಾಪನೆಯನ್ನು ಸಿದ್ದರಾಮಯ್ಯ ನೆರವೇರಿಸಿದರು. ಚಿತ್ರಗಳಲ್ಲಿ ಸಿಎಂ ಮೈಸೂರು ಪ್ರವಾಸ

ಮೀರ್ ಸಾಧಿಕ್ ಯಾರು ಎಂದು ವರದಿ ನೀಡಲಿ
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಅವರ ಸೋಲಿಗೆ ಕಾರಣವಾದ ಮೀರ್ ಸಾಧಿಕ್ ಯಾರು? ಎಂದು ನನಗೆ ತಿಳಿದಿಲ್ಲ. ಅವರೇ ಈ ಕುರಿತು ವರದಿ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷ ವಿರೋಧಿ ಕೆಲಸ ಮಾಡಿದ ನಾಯಕರು ಯಾರು ಎಂದು ವರದಿ ನೀಡಿದರೆ, ಆ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಸಿಎಂ ಹೇಳಿದರು.

ಹೈಕಮಾಂಡ್ ಗೆ ಬಿಟ್ಟ ವಿಚಾರ
ಸಂಪುಟ ವಿಸ್ತರಣೆ ಮಾಡುವುದು ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಈ ಕುರಿತು ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪೊಲೀಸ್ ಕಮೀಷನರ್ ಕಚೇರಿಗೆ ಶಂಕುಸ್ಥಾಪನೆ
ಮೈಸೂರು ನಗರ ಪೊಲೀಸ್ ಕಮೀಷನರ್ ನೂತನ ಕಛೇರಿ, ಪೊಲೀಸ್ ಪಬ್ಲಿಕ್ ಶಾಲೆಯ ನೂತನ ಕಟ್ಟಡ ನಗರ ಸಶಸ್ತ್ರ ಮೀಸಲು ಸಂಕೀರ್ಣ ಕಟ್ಟಡ, 396 ನೂತನ ಪೊಲೀಸ್ ವಸತಿ ಗೃಹಗಳು, ಪೊಲೀಸ್ ಅಧಿಕಾರಿಗಳ ನೂತನ ಅತಿಥಿಗೃಹ ಹಾಗೂ ನಗರ ಸಶಸ್ತ್ರ ಮೀಸಲು ಪಡೆಯ ನೂತನ ವಿಶ್ರಾಂತಿ ಗೃಹ ಕಟ್ಟಡಗಳ ಶಂಕುಸ್ಥಾಪನೆಯನ್ನು ಸಿದ್ದರಾಮಯ್ಯ ಗುರುವಾರ ನೆರವೇರಿಸಿದರು.

ಸಾರ್ವಜನಿಕ ಕಣ್ಣು ಪುಸ್ತಕ ಬಿಡುಗಡೆ
ಸಾರ್ವಜನಿಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ಅವುಗಳ ಕುರಿತು ಮಾಹಿತಿ ನೀಡುವ ನೂತನ ಪಬ್ಲಿಕ್ ಐ ಎಂಬ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಗಿದೆ. ಯಾವುದೇ ವಾಹನ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೆ ಸಾರ್ವಜನಿಕರು ಅದರ ಫೋಟೋ ತೆಗೆದು ನಗರ ಪೊಲೀಸರಿಗೆ ರವಾನಿಸಬಹುದಾಗಿದೆ. ಪೋಟೋ ತೆಗೆಯುವಾಗ ವಾಹನದ ನಂಬರ್ ಪ್ಲೇಟ್ ಸ್ಟಷ್ಟವಾಗಿ ಕಾಣುವಂತಿರಬೇಕು. ಕೆಲವೇ ದಿನಗಳಲ್ಲಿ ಈ ಯೋಜನೆ ಮೈಸೂರಿನಲ್ಲಿ ಜಾರಿಗೆ ಬರಲಿದೆ.












Click it and Unblock the Notifications