• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ ನಗರಿಗಳ ಪಟ್ಟಿ; 8ನೇ ಸ್ಥಾನ ಅಲಂಕರಿಸಿದ ಮೈಸೂರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್‌, 02: 2022ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಶ್ರೇಣಿ ಪಟ್ಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಡುಗಡೆ ಮಾಡಿದರು. ಸತತ ಆರನೇ ಬಾರಿಗೆ ದೇಶದಲ್ಲೇ ಅತಿಹೆಚ್ಚು ಸ್ವಚ್ಛತೆ ಕಾಯ್ದುಕೊಂಡಿರುವ ನಗರವಾಗಿ ಮಧ್ಯಪ್ರದೇಶದ ಇಂದೋರ್ ಹೊರ ಹೊಮ್ಮಿದೆ. ಸಾಂಸ್ಕೃತಿಕ ನಗರಿ ಮೈಸೂರು 8 ಸ್ಥಾನ ಪಡೆದಿದೆ.

ಗುಜರಾತ್‌ ಸೂರತ್ ಸತತ 3ನೇ ಬಾರಿಗೆ 2ನೇ ಸ್ಥಾನ ಕಾಯ್ದುಕೊಂಡಿರುವುದು ಕೂಡ ಮತ್ತೊಂದು ವಿಶೇಷವಾಗಿದೆ. ಆಂಧ್ರಪ್ರದೇಶದ ವಿಜಯವಾಡವನ್ನು ಹಿಂದಿಕ್ಕಿರುವ ಮುಂಬೈ ಆಗ್ರ 3ನೇ ಸ್ಥಾನಕ್ಕೇರಿದೆ. ವಿಶ್ವದ ಅತಿ ಶ್ರೀಮಂತ ದೇವರು ನೆಲೆಸಿರುವ ತಿರುಪತಿಗೆ 7ನೇ ಸ್ವಚ್ಛನಗರ ಸ್ಥಾನ ದಕ್ಕಿದೆ. 2020ರಲ್ಲಿ 3ರಿಂದ 8 ಲಕ್ಷ ಜನಸಂಖ್ಯೆಯ ನಗರಗಳ ಪೈಕಿ ದೇಶದಲ್ಲೇ ನಂ.1 ಸ್ವಚ್ಛನಗರ ಎಂಬ ಖ್ಯಾತಿ ಪಡೆದಿದ್ದ ಅರಮನೆ ನಗರಿ 'ಮೈಸೂರು' ಇದೀಗ ಅಗ್ರ 8ನೇ ಸ್ಥಾನ ಪಡೆದಿದೆ.

ಟಾಂಗಾ ಏರಿ ಹೋಗುಮಾ ಎಂದು ಮೈಸೂರು ಸುತ್ತಿದ 45 ಜೋಡಿಗಳು; ಪಾರಂಪರಿಕ ಉಡುಗೆಯ ರಂಗುಟಾಂಗಾ ಏರಿ ಹೋಗುಮಾ ಎಂದು ಮೈಸೂರು ಸುತ್ತಿದ 45 ಜೋಡಿಗಳು; ಪಾರಂಪರಿಕ ಉಡುಗೆಯ ರಂಗು

ಸ್ಚಚ್ಛ ನಗರಕ್ಕೆ ಪೌರಕಾರ್ಮಿಕರ ಶ್ರಮ ಅಪಾರ; ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೆ ಸ್ವಚ್ಛತೆ ನಗರ ಎಂಬ ಗೌರವ ಲಭಿಸಿದೆ. ಪೌರಕಾರ್ಮಿಕರು, ಅಧಿಕಾರಿಗಳ ಶ್ರಮ ಹಾಗೂ ಸಾರ್ವಜನಿಕರ ಸಹಕಾರದಿಂದ ಸ್ವಚ್ಛ ಸರ್ವೇಕ್ಷಣೆಯಲ್ಲಿ 3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೈಸೂರು ನಗರ ಎರಡನೇ ಸ್ಥಾನ ಪಡೆದಿದೆ ಎಂದು ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಹೆಚ್. ವಿ‌. ರಾಜೀವ್ ಸ್ನೇಹಬಳಗ ಹಾಗೂ ಇತರೆ ಸಂಘಟನೆಗಳು ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಮೈಸೂರು ನಗರ ಪ್ರಥಮ ಸ್ಥಾನಕ್ಕೇರಲಿದೆ. ಪೌರಕಾರ್ಮಿಕರು ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ ಮೂರು ಗಂಟೆಯವರೆಗೆ ಸ್ವಚ್ಚತಾ ಕಾರ್ಯ ಮಾಡುತ್ತಿದ್ದಾರೆ. ಇದರ ಜೊತೆಗೆ ವಿವಿಧ ಸಂಘಟನೆಗಳು ಕೂಡ ಸ್ವಚ್ಚತಾ ಕಾರ್ಯಕ್ಕೆ ಕೈಜೋಡಿಸಿದ್ದು, ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ, ಮೂಡಾ ಮಾಜಿ ಅಧ್ಯಕ್ಷರಾದ ಹೆಚ್. ವಿ. ರಾಜೀವ್ ಅವರು ಮಾತನಾಡಿ, ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು.

ಸ್ವಚ್ಛ ನಗರ ಸ್ಥಾನದಲ್ಲಿ ಮೈಸೂರಿಗೆ 8ನೇ ಸ್ಥಾನ; ಇನ್ನು ಕಳೆದ ಬಾರಿ 12ನೇ ಸ್ಥಾನಕ್ಕೆ ಕುಸಿದಿದ್ದ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು, ಈ ಬಾರಿ 8ನೇ ಸ್ಥಾನಕ್ಕೆ ಏರುವ ಮೂಲಕ ಗಮನ ಸೆಳೆದಿದೆ. ಹಾಗೆಯೇ ಶಿವಮೊಗ್ಗವು 'ಅತ್ಯಂತ ವೇಗವಾಗಿ ಚಲಿಸುತ್ತಿರುವ ನಗರ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2022ರ ಸ್ವಚ್ಛ ನಗರಿಗಳ ನಗರ ಸ್ಥಳೀಯ ಸಂಸ್ಥೆಗಳ ಶ್ರೇಯಾಂಕದ ಸ್ವಚ್ಛ ಸರ್ವೇಕ್ಷಣ ಪಟ್ಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಿಡುಗಡೆ ಮಾಡಿದ್ದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಎಲ್ಲ ಪುರಸ್ಕೃತ ನಗರಗಳ ಪ್ರತಿನಿಧಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ನವಿ ಮುಂಬಯಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.

Cleanest Cities Ranking Mysuru Listed In 8th Place

ದೇಶದ ಅತ್ಯಂತ ಪ್ರಭಾವಶಾಲಿ ಜನರು ವಾಸಿಸುತ್ತಿರುವ ಎನ್‌ಡಿಎಂಸಿ, 2021ರಲ್ಲಿ ಐದನೇ ಸ್ಥಾನದಿಂದ ಈ ಬಾರಿ 9ನೇ ಸ್ಥಾನಕ್ಕೆ ಕುಸಿತ ಕಂಡಿದೆ. 2020ರಲ್ಲಿ ಅದು ಎಂಟನೇ ಸ್ಥಾನದಲ್ಲಿತ್ತು. ಕಳೆದ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದ ವಿಜಯವಾಡ, ಈ ಬಾರಿ ಐದನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಎರಡು ವರ್ಷಗಳಲ್ಲಿ ಟಾಪ್ ಹತ್ತರಲ್ಲಿಯೂ ಸ್ಥಾನ ಪಡೆದುಕೊಳ್ಳದ ವಿಶಾಖಪಟ್ಟಣ, ಈ ವರ್ಷ ನಾಲ್ಕನೇ ಶ್ರೇಯಾಂಕ ಪಡೆದು ಗಮನ ಸೆಳೆದಿದೆ. ಇನ್ನು ಭೋಪಾಲ್, ತಿರುಪತಿ, ಮೈಸೂರು, ಎನ್‌ಡಿಎಂಸಿ ಮತ್ತು ಅಂಬಿಕಾಪುರ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. 2021ರಲ್ಲಿ ಕೊನೆಯ ಮೂರು ಸ್ಥಾನಗಳಲ್ಲಿದ್ದ ಪುಣೆ, ನೋಯ್ಡಾ ಮತ್ತು ಉಜ್ಜಯನಿ ನಗರಗಳು ಈ ಬಾರಿ ಟಾಪ್ 10ರಿಂದ ಸ್ಥಾನ ಕಳೆದುಕೊಂಡಿವೆ.

2021ರಲ್ಲಿ 12ನೇ ಸ್ಥಾನಕ್ಕೆ ಕುಸಿದುದ್ದ ಮೈಸೂರು; 2021ರಲ್ಲಿ ಮೈಸೂರು 12ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಈ ಬಾರಿ ಎಂಟನೇ ಸ್ಥಾನಕ್ಕೆ ಏರಿರುವುದು ಸಮಾಧಾನಕರವಾಗಿದೆ. ಆದರೆ 2020ರಲ್ಲಿ ಅದು ಐದನೇ ಸ್ಥಾನದಲ್ಲಿತ್ತು ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಶಿವಮೊಗ್ಗ ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಪ್ರಶಸ್ತಿ ಪಡೆದುಕೊಂಡಿದೆ. ನಗರ ಸ್ಥಳೀಯ ಸಂಸ್ಥೆಗಳ ಶ್ರೇಯಾಂಕವನ್ನು 1 ಲಕ್ಷಕ್ಕಿಂತ ಅಧಿಕ ಮತ್ತು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ನಗರಗಳ ಎರಡು ವರ್ಗಗಳಲ್ಲಿ ನೀಡಲಾಗುತ್ತದೆ. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಮೊದಲ ಐದು ನಗರಗಳ ಪೈಕಿ, ನಾಲ್ಕು ನಗರಗಳು ಮಹಾರಾಷ್ಟ್ರದಲ್ಲಿವೆ. ಮಹಾರಾಷ್ಟ್ರದ ಪಂಚಗನಿ ಮೊದಲ ಸ್ಥಾನದಲ್ಲಿದೆ. ಛತ್ತೀಸಗಢ್‌ನ ಪತಾನ್ ಎರಡನೇ ಅತ್ಯಂತ ಸ್ವಚ್ಛನಗರಿ ಎನಿಸಿದೆ. ಮಹಾರಾಷ್ಟ್ರದ ಕರ್ಹಾದ್ ಮೂರನೇ ಸ್ಥಾನದಲ್ಲಿದೆ. ಲೋನಾವಾಲ ಮತ್ತು ಕರ್ಜತ್ ಉಳಿದ ಎರಡು ನಗರಗಳಾಗಿವೆ.

2022ರ ಸಮೀಕ್ಷೆಯು 4,354 ಯುಎಲ್‌ಬಿಗಳನ್ನು ಒಳಗೊಂಡಿವೆ. ಇದರಲ್ಲಿ 62 ಕಂಟೋನ್ಮೆಂಟ್ ಮಂಡಳಿ ಹಾಗೂ 91 ಗಂಗಾ ಪಟ್ಟಣಗಳು ಸೇರಿವೆ. 2016ರಲ್ಲಿ ಬಿಡುಗಡೆಯಾದ ಮೊದಲ ಸ್ವಚ್ಛ ಸರ್ವೇಕ್ಷಣ ಆವೃತ್ತಿಯಲ್ಲಿ ಕೇವಲ 73 ಯುಎಲ್‌ಬಿಗಳಿದ್ದವು. ಈ ಬಾರಿ ಪಶ್ಚಿಮ ಬಂಗಾಳದ 126 ಯುಎಲ್‌ಬಿಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಸಂಸ್ಥೆಗಳು ಭಾಗಿ ಆಗಿದ್ದವು.

English summary
swachh survekshan cleanest cities ranking list released by President Draupadi Murmu, cultural city Mysuru ranked 8th. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X