ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಫೈಟೋ ಫೈಟು
ಮೈಸೂರು, ಮಾರ್ಚ್ 17 : ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡರ ನಡುವೆ ಕೈ- ಕೈ ಮಿಲಾಯಿಸುವ ಹಂತಕ್ಕೆ ಜಟಾಪಟಿ ಘಟನೆ ಮೈಸೂರಿನಲ್ಲಿ ಶನಿವಾರ ಸಂಭವಿಸಿದೆ. ಜಿಲ್ಲೆಯ ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪ ಈ ಘಟನೆಗೆ ಸಾಕ್ಷಿಯಾಯಿತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಸಭೆಯಲ್ಲಿ ಉತ್ತರ ಪ್ರದೇಶದ ಸಂಸದ ರಾಮ್ ಶಂಕರ್ ಕೊಠಾರಿ ಪಾಲ್ಗೊಂಡಿದ್ದರು. ಈ ವೇಳೆ ಮಾಜಿ ಶಾಸಕ ಎಲ್.ಭಾರತೀಶಂಕರ್ ಹಾಗೂ ಬನ್ನೂರು ಪಟ್ಟಣದ ಬಿಜೆಪಿ ಮುಖಂಡ ಸುರೇಶ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಉತ್ತರ ಪ್ರದೇಶದ ಎಂ.ಪಿ ರಾಮ್ ಶಂಕರ್ ಕೊಠಾರಿಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಅಡ್ಡಲಾಗಿ ಬಂದ ಬಿಜೆಪಿ ಮುಖಂಡ ಸುರೇಶ್ ರನ್ನು ಮಾಜಿ ಶಾಸಕ ಭಾರತೀಶಂಕರ್ ತಳ್ಳಿದ್ದಾರೆ.

ಈ ಸಮಯದಲ್ಲಿ ಕುಪಿತಗೊಂಡ ಸುರೇಶ್, ಮಾಜಿ ಶಾಸಕ ಭಾರತೀಶಂಕರ್ ಕೊರಳಪಟ್ಟಿಗೆ ಕೈ ಹಾಕಲು ಯತ್ನಿಸಿದ್ದಾರೆ. ಇವರಿಬ್ಬರು ನಾಯಕರ ಜಗಳ ಕೈ- ಕೈ ಮಿಲಾಯಿಸುವ ಹಂತ ತಲುಪಿದ್ದು, ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಸಮಾಧಾನ ಪಡಿಸಿದರು.












Click it and Unblock the Notifications