• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿ ಬೆಟ್ಟಕ್ಕೆ ನೀಡುತ್ತಿದ್ದ ವಾಹನ ಪಾಸ್ ರದ್ದು, ಕಾರಣ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 11: ದುರುಪಯೋಗಗೊಳ್ಳುತ್ತಿದೆ ಎಂಬ ಕಾರಣದಿಂದ ಆಷಾಡ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ನೀಡಲಾಗುತ್ತಿದ್ದ ವಾಹನ ಪಾಸ್‌ಗಳನ್ನು ಪೊಲೀಸ್ ಇಲಾಖೆ ರದ್ದುಗೊಳಿಸಿದೆ.

ಆಷಾಢ ಶುಕ್ರವಾರ ಹಾಗೂ ಚಾಮುಂಡೇಶ್ವರಿ ದೇವಿಯ ವರ್ಧಂತಿಯಂದು ಬೆಟ್ಟಕ್ಕೆ ವಾಹನ ಸಂಚಾರವನ್ನು ನಿರ್ಬಂಧಿಸಿದ್ದು, ಕೆಲವು ತುರ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಮಾತ್ರ ಚಾಮುಂಡಿ ಬೆಟ್ಟಕ್ಕೆ ತೆರಳಲು ಪೊಲೀಸ್ ಆಯುಕ್ತರವರ ಕಚೇರಿಯಿಂದ ವಾಹನ ಪಾಸ್‌ಗಳನ್ನು ನೀಡಲಾಗುತ್ತಿತ್ತು.

ಮೈಸೂರು ದಸರಾ; ಜಂಬೂ ಸವಾರಿಗೆ 5 ಹೊಸ ಆನೆ!ಮೈಸೂರು ದಸರಾ; ಜಂಬೂ ಸವಾರಿಗೆ 5 ಹೊಸ ಆನೆ!

ಆದರೆ ಈ ಪಾಸ್‌ಗಳಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಖಾಸಗಿ ವಾಹನಗಳ ದರ್ಬಾರ್ ಹೆಚ್ಚಾಗುತ್ತಿತ್ತು. ವಾಹನ ದಟ್ಟಣೆಯು ಕೂಡ ಹೆಚ್ಚಾಗಿತ್ತು. ಆದರೆ ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರಿಗೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಸುಗಮ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಚಾಮುಂಡಿ ಬೆಟ್ಟಕ್ಕೆ ಸಂಚರಿಸುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಮುಂದೆ ಬರುವ ಆಷಾಡ ಶುಕ್ರವಾರಗಳಾದ ಜುಲೈ 15, 20 ಮತ್ತು 22 ರಂದು ಬೆಟ್ಟಕ್ಕೆ ತೆರಳಲು ಪೊಲೀಸ್ ಆಯುಕ್ತರ ಕಚೇರಿಯಿಂದ ಯಾವುದೇ ರೀತಿಯ ವಾಹನದ ಪಾಸ್ ನೀಡಲಾಗುವುದಿಲ್ಲ. ಈ ಹಿಂದೆ ನೀಡಲಾಗುತ್ತಿದ್ದ ವಾಹನ ಪಾಸ್ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಸೋಮವಾರ ತಿಳಿಸಿದ್ದಾರೆ.

ಕೋವಿಡ್‌ 19 ಬ್ರೇಕ್ ನಂತರ ವೈಭವದ ದಸರಾ ನಿರೀಕ್ಷೆಯಲ್ಲಿ ಮೈಸೂರು ಜನತೆಕೋವಿಡ್‌ 19 ಬ್ರೇಕ್ ನಂತರ ವೈಭವದ ದಸರಾ ನಿರೀಕ್ಷೆಯಲ್ಲಿ ಮೈಸೂರು ಜನತೆ

ಸಾರ್ವಜನಿಕರು ಮುಂದಿನ ಆಷಾಡ ಶುಕ್ರವಾರಗಳು ಮತ್ತು ಚಾಮುಂಡೇಶ್ವರಿ ದೇವಿಯ ವರ್ಧಂತಿ ದಿನಗಳಂದು ನಗರ ಸಾರಿಗೆ ಅಥವಾ ದೇವಸ್ಥಾನದ ಆಡಳಿತ ಮಂಡಳಿ ವ್ಯವಸ್ಥೆ ಮಾಡಿರುವ ಉಚಿತ ಕೆ. ಎಸ್. ಆರ್. ಟಿ. ಸಿ. ಬಸ್‌ಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಪ್ರಯಾಣಿಸಿ, ದೇವಸ್ಥಾನದಲ್ಲಿ ನಿರ್ಧಿಷ್ಠ ಪಡಿಸಿರುವ ಸರತಿ ಸಾಲುಗಳಲ್ಲಿ ತೆರಳಿ ದೇವರ ದರ್ಶನವನ್ನು ಪಡೆಯಬೇಕೆಂದು ಮನವಿ ಮಾಡಿದ್ದಾರೆ.

ಜುಲೈ 20ರಂದು ನಡೆಯುವ ವರ್ಧಂತಿಗೂ ಕೂಡ ಪಾಸ್‌ ಕೊಡದಿರಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಅಂದೂ ಕೂಡ ಭಕ್ತಾದಿಗಳು ಬಸ್‌ಗಳಲ್ಲೇ ತೆರಳಲು ಸೂಚಿಸಲಾಗಿದೆ. ಕಳೆದ 2 ವರ್ಷಗಳಿಂದ ಕೊರೊನಾ ಕಾರಣದಿಂದ ಆಷಾಢ ಮಾಸದ ವಿಶೇಷ ಪೂಜೆಗೆ ಭಕ್ತರಿಲ್ಲದೆ ದೇವಸ್ಥಾನ ಬಣಗುಡುತ್ತಿತ್ತು.

ಈ ಬಾರಿ ಅವಶ್ಯಕತೆ ಭಕ್ತಾದಿಗಳಿಗೆ ನಾಡದೇವತೆ ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ ತಾಯಿಗೆ ಆಷಾಢ ಮಾಸದಲ್ಲಿ ವಿಶೇಷ ಪೂಜೆಗೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಕೊರೊನಾ 2ನೇ ಡೋಸ್​ ​ ಪಡೆದಿರುವ ಜೊತೆಗೆ ನೆಗೆಟಿವ್ ವರದಿಯ ಪ್ರತಿ ಕಡ್ಡಾಯ ತರಬೇಕಿದೆ.

Recommended Video

   Narendra Modi ಹೊಸ ಸಂಸತ್ ಭವನದ ಮೇಲೆ ಲಾಂಛನವನ್ನು ಅನಾವರಣಗೊಳಿಸಿದರು | *India | OneIndia Kannada
   English summary
   Special passes issued by the Mysuru city police to Chamundi Hills for Ashada Fridays and Chamundeshwari Vardhanti have been withdrawn for control traffic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X