ರಾಮದಾಸ್ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ
ಮೈಸೂರು, ಫೆ.26 : ಭಾರೀ ಚರ್ಚೆಗೆ ಕಾರಣವಾಗಿದ್ದ ಮಾಜಿ ಸಚಿವ ಎಸ್ಎ ರಾಮದಾಸ್ ಮತ್ತು ಪ್ರೇಮಕುಮಾರಿ ಅವರ ನಡುವಿನ ಆರೋಪ ಪ್ರತ್ಯಾರೋಪ ಪ್ರಕರಣವನ್ನು ಮೈಸೂರು ಪೊಲೀಸರು ಸಿಐಡಿಗೆ ಒಪ್ಪಿಸಿದ್ದಾರೆ. ಇದರಿಂದ ಪ್ರಕರಣದ ಉನ್ನತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದ ರಾಮದಾಸ್ ಮಾತಿಗೂ ಬೆಲೆ ಸಿಕ್ಕಂತಾಗಿದೆ.
ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ರಾಮದಾಸ್ ಪ್ರಕರಣವನ್ನು ಸಿಐಡಿ ತನಿಖೆಗೆ ಶಿಫಾರಸು ಮಾಡಿದ್ದರು. ಮಂಗಳವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರುಖುಮೋ ಪಚಾವೋ ಪ್ರಕರಣವನ್ನು ಸಿಐಡಿ ಪೊಲೀಸರಿಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ಶೀಘ್ರವೇ ಪ್ರಕರಣದ ತನಿಖೆ ಆರಂಭವಾಗಲಿದೆ.[ರಾಮದಾಸ್ ಬಗ್ಗೆ ಏರ್ ಪೋರ್ಟ್ ಗಳಲ್ಲಿ ಹೈ ಅಲರ್ಟ್]

ಪ್ರಕರಣಗಳು : ಮಾಜಿ ಸಚಿವ ರಾಮದಾಸ್ ತನ್ನನ್ನು ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದಾರೆ ಮತ್ತು ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಪ್ರೇಮಕುಮಾರಿ ಎಂಬುವವರು ಫೆ.14ರಂದು ಮೈಸೂರಿನ ಸರಸ್ವತೀಪುರಂ ಠಾಣೆಯಲ್ಲಿ ರಾಮದಾಸ್ ಮತ್ತು ಅವರ ಸಹೋದರ ಶ್ರೀಕಾಂತ್ ದಾಸ್ ವಿರುದ್ಧ ದೂರು ದಾಖಲಿಸಿದ್ದಾರೆ.[ಸಿಎಂ ಸಿದ್ದರಾಮಯ್ಯಗೆ ರಾಮದಾಸ್ ಪತ್ರ]
ರಾಮದಾಸ್ ವಿರುದ್ಧ ವಂಚನೆ ಆರೋಪ ಹೊರಿಸಿರುವ ಪ್ರೇಮಕುಮಾರಿ ವಿರುದ್ಧ ರಾಮದಾಸ್ ಪ್ರತಿದೂರು ಸಲ್ಲಿಸಿದ್ದಾರೆ. ತಮ್ಮನ್ನು ಬೆದರಿಸಿ ಹಣ ಕೀಳಲು ಪ್ರೇಮಕುಮಾರಿ ಬ್ಲಾಕ್‌ವೆುಲ್ ಮಾಡಿದ್ದಾರೆ. ಇದಕ್ಕೆ ಮಣಿಯದಿದ್ದಾಗ ಆಕೆ ಮತ್ತು ಆಕೆ ಸಂಬಂಧಿಕರು ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ಅಪಪ್ರಚಾರ ನಡೆಸಿದ್ದಾರೆ ರಾಮದಾಸ್ ಕುವೆಂಪು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. [ರಾಮದಾಸ್ ಸಂಕ್ಷಿಪ್ತ ಪರಿಚಯ]
ಪ್ರೇಮಕುಮಾರಿ ಮಾಧ್ಯಮಗಳ ಮುಂದೆ ಬಂದು ರಾಮದಾಸ್ ವಿರುದ್ಧ ಆರೋಪ ಮಾಡಿದಾಗ ಮನನೊಂದ ಅವರು, ಆತ್ಮಹತ್ಯೆಗೆ ಯತ್ನಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ರಾಮದಾಸ್ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಪ್ರಕರಣದ ಗಂಭೀರತೆ ಅರಿತ ಮೈಸೂರು ಪೊಲೀಸ್ ಆಯುಕ್ತರು ಪ್ರಕರಣವನ್ನು ಸಿಐಡಿಗೆ ಶಿಫಾರಸು ಮಾಡಿದ್ದರು. ಸದ್ಯ ಅದಕ್ಕೆ ಒಪ್ಪಿಗೆ ದೊರೆತಿದ್ದು, ರಾಮದಾಸ್ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲಿದೆ. ತನಿಖಾ ವರದಿ ಬಂದ ನಂತೆ ಸತ್ಯಾಸತ್ಯತೆ ತಿಳಿದುಬರಲಿದೆ. [ಪ್ರೇಮಕುಮಾರಿ ಯಾರು]












Click it and Unblock the Notifications