ಭುವನೇಶ್ವರಿ ದೇಗುಲಕ್ಕೆ ಹೋಗದ, ಮೈಸೂರು ಪೇಟ ನಿರಾಕರಿಸಿದ ಚಂಪಾ
ಮೈಸೂರು, ನವೆಂಬರ್ 24: ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ಅನಿರೀಕ್ಷಿತಗಳು ಎದುರಾದವು. ಮೈಸೂರು ಅರಮನೆ ಆವರಣದಲ್ಲಿ ಇರುವ, ಇಡೀ ರಾಜ್ಯದ ಏಕೈಕ ಭುವನೇಶ್ವರಿ ದೇವಾಲಯಕ್ಕೆ ಮೆರವಣಿಗೆಗೂ ಉನ್ನ ಸಚಿವರಾದ ಮಹದೇವಪ್ಪ ಸೇರಿ ಇತರರು ತೆರಳಿದರು. ಅಲ್ಲಿ ಪೂಜೆ ಕೂಡ ಮಾಡಿಸಿದರು.
ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ
ಆದರೆ, ಸಮ್ಮೇಳನಾಧ್ಯಕ್ಷರಾದ ಚಂದ್ರಶೇಖರ ಪಾಟೀಲ (ಚಂಪಾ) ಭುವನೇಶ್ವರಿ ದೇವಾಲಯಕ್ಕೆ ತೆರಳಲಿಲ್ಲ. ಇನ್ನು ಅಧ್ಯಕ್ಷರಿಗೆ ತೊಡಿಸಲು ಕನ್ನಡ ಅಭಿಮಾನಿಗಳು ತಂದಿದ್ದ ಮೈಸೂರು ಪೇಟ ಧರಿಸುವುದಕ್ಕೆ ಕೂಡ ಚಂಪಾ ನಿರಾಕರಿಸಿದರು. ಇದರಿಂದ ಪೇಟ ತಂದಿದ್ದವರು ಪೇಚಿಗೆ ಸಿಕ್ಕಿದಂತೆ ಕಂಡು ಬಂದಿತು.

ಬಂಡಾಯ ಸಾಹಿತ್ಯದ ಹಿನ್ನೆಲೆಯ ಚಂದ್ರಶೇಖರ ಪಾಟೀಲರು ಸಂಪ್ರದಾಯದ ಹೆಸರಿನಲ್ಲಿನ ಗುಲಾಮಗಿರಿಯನ್ನು ಹಾಗೂ ಮೌಢ್ಯವನ್ನು ಧಿಕ್ಕರಿಸಿದವರು. ಮತ್ತು ಅವುಗಳ ವಿರುದ್ಧ ಹೋರಾಟ-ಚಳವಳಿಗಳನ್ನು ರೂಪಿಸಿ, ಧ್ವನಿ ಎತ್ತಿದವರು. ಆದರೂ ಭುವನೇಶ್ವರಿ ದೇವಾಲಯಕ್ಕೆ ತೆರಳದಿರುವುದು ಹಾಗೂ ಪೇಟ ತೊಡಿಸಲು ಬಂದಾಗ ನಿರಾಕರಿಸಿರುವುದು ಆ ಬಗ್ಗೆ ಭಾವನಾತ್ಮಕ ನಂಟು ಹೊಂದಿದವರಿಗೆ ನೋವುಂಟು ಮಾಡಿದೆ.












Click it and Unblock the Notifications