ಸಿದ್ದರಾಮಯ್ಯರಿಂದ ಕುತಂತ್ರ ರಾಜಕಾರಣ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
ಮೈಸೂರು: ಕುತಂತ್ರ ರಾಜಕಾರಣ ಮಾಡುತ್ತಾ ಬಂದು ಕಾಂಗ್ರೆಸ್ ನಲ್ಲಿ ತಾನೊಬ್ಬನೇ ನಾಯಕರಾಗಿ ಬೆಳೆದರು. ಹತ್ತು ಜನ ಗೆಲ್ಲಿಸಿಕೊಂಡು ಬರುವವನು ನಿಜವಾದ ನಾಯಕ. ಆದರೆ ಸಿದ್ದರಾಮಯ್ಯ ಎಲ್ಲರನ್ನೂ ತುಳಿದುಕೊಂಡು ಬರುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಸೋಮವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವರು ನಿಜವಾದ ನಾಯಕರಲ್ಲ, ಚಾಮುಂಡೇಶ್ವರಿಯಲ್ಲಿ ಅವರ ಸ್ಥಿತಿ ಏನಾಯಿತು. ಈಗ ಬಾದಾಮಿಯಲ್ಲಿ ಏನು ಪರಿಸ್ಥಿತಿ ಇದೆ. ಹೀಗಾಗಿ ಗೆಲ್ಲಲು ಯಾವುದೇ ಕ್ಷೇತ್ರವಿಲ್ಲದೆ, ಕ್ಷೇತ್ರದ ಹುಡುಕಾಟ ನಡೆಸುತ್ತಿದ್ದಾರೆ. ಇವರೊಬ್ಬ ಲೀಡರ್ ರಾ, ಬೊಗಳೆ ಭಾಷಣ ಮಾಡುವವರು ಲೀಡರ್ ಅಲ್ಲ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಮೇಲೆ ಬಸಪ್ಪ, ಒಳಗೆ ವಿಷಪ್ಪ: ನಾರಾಯಣಸ್ವಾಮಿ ವಾದ್ದಾಳಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಳೆದ ಬಾರಿ ಕಾಂಗ್ರೆಸ್ ದಲಿತರನ್ನು ಮುಖ್ಯ ಮಂತ್ರಿ ಮಾಡಬೇಕಾಗಿತ್ತು, ಆದರೆ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಕಾಂಕ್ಷಿಯಾಗಿದ್ದವರನ್ನೆಲ್ಲಾ ರಾಜಕೀಯವಾಗಿ ಮುಗಿಸಿದರು. ಕುದುರೆ ವ್ಯಾಪಾರ ಮಾಡಿ ಮುಖ್ಯ ಮಂತ್ರಿಯಾದರು. ಆ ಮೂಲಕ ದಲಿತರಿಗೆ ಸಿಎಂ ಸ್ಥಾನ ತಪ್ಪಿಸಿದರು. ಕುತಂತ್ರ ರಾಜಕಾರಣ ಮಾಡುತ್ತಾ ಬಂದು ಕಾಂಗ್ರೆಸ್ ನಲ್ಲಿ ತಾನೊಬ್ಬನೇ ನಾಯಕರಾಗಿ ಬೆಳೆದರು. ಹತ್ತು ಜನ ಗೆಲ್ಲಿಸಿಕೊಂಡು ಬರುವವನು ನಿಜವಾದ ನಾಯಕ. ಆದರೆ ಸಿದ್ದರಾಮಯ್ಯ ಎಲ್ಲರನ್ನೂ ತುಳಿದುಕೊಂಡು ಬರುತ್ತಿದ್ದಾರೆ. ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೇಲೆ ಬಸಪ್ಪ ಆದರೆ ಒಳಗೆ ವಿಷಪ್ಪ. ತನ್ನ ಮುಖ್ಯ ಮಂತ್ರಿ ಸ್ಥಾನಕ್ಕೆ ಅಡ್ಡಿಯಾಗುತ್ತಿರುವವರನ್ನೆಲ್ಲಾ ರಾಜಕೀಯವಾಗಿ ಕತ್ತು ಹಿಸುಕಿ ಮುಗಿಸುತ್ತಿದ್ದಾರೆ. ಅವರಷ್ಟು ದಲಿತ ವಿರೋಧಿ ಬೇರೆ ಯಾರೂ ಇಲ್ಲ, ಸಿದ್ದರಾಮಯ್ಯ ಗೋಮುಖ ವ್ಯಾಘ್ರ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಚಡ್ಡಿ ಸುಡಿ ಸಿದ್ದರಾಮಯ್ಯ ಹೇಳಿಕೆಗೆ ಖಂಡನೆ
ಸಿದ್ದರಾಮಯ್ಯ ಚಡ್ಡಿ ಆರ್‌ಎಸ್‌ಎಸ್‌ನ ಸಮವಸ್ತ್ರ. ಹಾಗಾಗಿ, ಅದನ್ನು ಸುಡಿ ಎಂದು ಹೇಳಿದ್ದಾರೆ. ಚಡ್ಡಿಯನ್ನು ಸುಟ್ಟು ಹಾಕಿದರು. ಆದರೆ ಚಡ್ಡಿಯನ್ನು ಕಾಂಗ್ರೆಸ್ ನವರು ಧರಿಸಿದ್ದರು. ಈ ಹಿಂದೆ ಪೋಲಿಸ್, ಸೈನಿಕರು ಸೇರಿದಂತೆ ಎಲ್ಲರು ಧರಿಸುತ್ತಿದ್ದರು. ಈಗಲೂ ಯುವ ಸಮೂಹ ಚಡ್ಡಿಯನ್ನು ಧರಿಸುತ್ತಿದೆ. ಮನುಷ್ಯರ ಮಾನವನ್ನು ಕಾಪಾಡುತ್ತಿದೆ. ಅದು ಮಾನವರ ಗೌರವದ ಸಂಕೇತವಾಗಿದೆ. ಅಂತಹ ಚಡ್ಡಿಯನ್ನು ಕಾಂಗ್ರೆಸ್ ನವರು ಸುಟ್ಟಿದ್ದಾರೆ. ಆ ಮೂಲಕ ಮಾನವರ ಮರ್ಯಾದೆ, ಗೌರವಗಳನ್ನು ಸುಟ್ಟಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಮಾನವೂ ಈಗ ಇಲ್ಲದಂತಾಗಿದೆ ಎಂದು ಕಿಡಿಕಾರಿದರು. ಕಾಂಗ್ರೆಸ್ ನಾಯಕರ ಇಂತಹ ಕೃತ್ಯಗಳೇ ಆ ಪಕ್ಷ ಈಗ ಈ ಪರಿಯ ದುಸ್ಥಿಗೆ, ಅವನತಿಗೆ ಬರಲು ಕಾರಣವಾಗಿದೆ ಎಂದರು. ಚಡ್ಡಿಯನ್ನು ತಯಾರು ಮಾಡುವವರು ನೇಕಾರರು, ಬಟ್ಟೆಗೆ ಬೇಕಾದ ವಸ್ತುಗಳನ್ನು ತಯಾರು ಮಾಡುವವರು ರೈತರು, ಚಡ್ಡಿಯನ್ನು ಹೊಲೆಯುವವರು, ಮಾರಾಟ ಮಾಡುವವರು ಇದ್ದಾರೆ. ಕಾಂಗ್ರೆಸ್ ಚಡ್ಡಿಯನ್ನು ಸುಡುವ ಮೂಲಕ ಅವರಿಗೆಲ್ಲ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಯಲ್ಲಿಕಾಂಗ್ರೆಸ್ ನಿರ್ನಾಮ
ಸಿದ್ದರಾಮಯ್ಯನವರ ಕಾಂಗ್ರೆಸ್ ಚಡ್ಡಿಯನ್ನು ದೇಶದ ಜನ ಬಿಚ್ಚಿ ಕಳುಹಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಿದ್ದರಾಮಯ್ಯನವರ ಚಡ್ಡಿ ಸುಡಿ ಅಭಿಯಾನಕ್ಕೆ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಕಾಂಗ್ರೆಸ್ ಎಲ್ಲಿದೆ ಹೇಳಿ, ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ನ್ನು ಅಟ್ಟಾಡಿಸಿ ಓಡಿಸಿದ್ದಾರೆ. ಹಾಗಾಗಿ ಚಡ್ಡಿ ಸುಡುವ ಕಾರ್ಯಕ್ರಮ ಹಮ್ಮಿಕೊಂಡು ಓಡಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರ ಕಥೆಯೂ ಮುಗಿಯುತ್ತದೆ ಎಂದು ಹೇಳಿದರು. ಆರ್ ಎಸ್ ಎಸ್ ನವರು ಯಾವಾಗಲೂ ಗುರಿಯಾಗುತ್ತಿರುವುದು ಅಲ್ಪಸಂಖ್ಯಾತರ ಮತಬ್ಯಾಂಕ್ ಗಾಗಿ. ಆರ್ ಎಸ್ ಎಸ್ ದೇಶ ನಿರ್ಮಾಣ ಮತ್ತು ವ್ಯಕ್ತಿ ನಿರ್ಮಾಣ ಮಾಡುವ ಸಂಘಟನೆಯಾಗಿದೆ. ಈ ದೇಶದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹ ಸಚಿವನಾಗಿರುವ ನಾನು ಕೂಡ ಆರ್ ಎಸ್ ಎಸ್ ನವನಾಗಿದ್ದೇನೆ. ಇತರೆ ರಾಜ್ಯದ ಸಿಎಂಗಳು ಆರ್‌ಎಸ್‌ಎಸ್ ನವರಾಗಿದ್ದಾರೆ. ಇಡೀ ದೇಶವೇ ಆರ್ ಎಸ್‌ಎಸ್‌ನ್ನು ಒಪ್ಪಿಕೊಂಡಿದೆ. ಹಾಗಾಗಿ ಆರ್ ಎಸ್ ಎಸ್ ನ ವಿರುದ್ಧ ಮಾತನಾಡಿದಷ್ಟು ಎದುರಾಳಿಗಳು ಕುಗ್ಗುತ್ತಾರೆ ಎಂದು ಸಿದ್ದರಾಮಯ್ಯ ಮಾತನಾಡುತ್ತಿರುವುದಾಗಿ ಹೇಳಿದರು.

ನ್ಯಾಯಕ್ಕಾಗಿ ಹೋರಾಟ ಮಾಡುವುದು ಸಂವಿಧಾನ ನಮಗೆ ಕೊಟ್ಟ ಹಕ್ಕು
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಜ್ಯದಾದ್ಯಂತ ಚಡ್ಡಿ ಸುಡುವ ಅಭಿಯಾನ ಆರಂಭಿಸುವುದಾಗಿ ಶುಕ್ರವಾರ ಹೇಳಿದ್ದ ಹೇಳಿಕೆಗೆ ಇದೀಗ ಬಾರೀ ಚರ್ಚೆಗಳು ನಡೆಯುತ್ತಿವೆ.
ಆರ್ ಎಸ್.ಎಸ್ ನವರು ಹಿಂದೆ ಚಡ್ಡಿ ಹಾಕುತ್ತಿದ್ದರು, ಈಗ ಪ್ಯಾಂಟ್ ಹಾಕುತ್ತಿದ್ದಾರೆ. ನಮ್ಮವರು ಪ್ರತಿಭಟನೆ ಸಂದರ್ಭದಲ್ಲಿ ಸಾಂಕೇತಿಕವಾಗಿ ಒಂದೇ ಒಂದು ಚಡ್ಡಿ ಸುಟ್ಟು ಹಾಕಿದ್ದಾರೆ. ಅದು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ದೊಡ್ಡ ಅಪರಾಧವಾಗಿ ಕಂಡಿದೆ ಎಂದು ಹೇಳಿದ್ದಾರೆ.
ಅವರೇನು ಮನೆಗೆ ಬೆಂಕಿ ಹಚ್ಚುವ ಅಥವಾ ಬೆಂಕಿಯನ್ನು ಸಮಾಜ ವಿರೋಧಿ ಕೆಲಸಕ್ಕೆ ಬಳಸಿಲ್ಲ. ಇದು ಕಾನೂನು ವಿರೋಧಿ ಕೃತ್ಯ ಹೇಗಾಗುತ್ತದೆ? ಕಾನೂನು ಉಲ್ಲಂಘನೆಗಾಗಿ ಗುಂಪುಗೂಡಿರುವುದು ಹೇಗಾಗುತ್ತದೆ ? ಒಬ್ಬರೇ ಪ್ರತಿಭಟನೆ ಮಾಡುವುದಕ್ಕಾಗುತ್ತದೆಯೇ ? ಅನ್ಯಾಯದ ವಿರುದ್ಧ, ನ್ಯಾಯಕ್ಕಾಗಿ ಹೋರಾಟ ಮಾಡುವುದು ಸಂವಿಧಾನ ನಮಗೆ ಕೊಟ್ಟ ಹಕ್ಕು. ಅದು ಮೂಲಭೂತ ಹಕ್ಕು. ಪ್ರತಿಭಟನೆ ವೇಳೆ ಆರ್'ಎಸ್ಎಸ್ ನವರ ಚಡ್ಡಿಯನ್ನು ಸುಟ್ಟು ಹಾಕಿದ್ದಾರೆ. ಒಂದೇ ಒಂದು ಚಡ್ಡಿ ಸುಟ್ಟಿದ್ದು ಪೊಲೀಸರಿಗೆ, ಸರ್ಕಾರದವರಿಗೆ ದೊಡ್ಡ ಅಪರಾಧವಾಗಿದೆ. ಅವರೇನು ಮನೆಗೆ ಬೆಂಕಿ ಹಚ್ಚೋಕೆ ಹೋಗಿರಲಿಲ್ಲ. ಕಾಂಪೌಂಡ್ ಗೇಟ್ ತೆಗೆದು ಒಳಗೆ ಹೋಗಿದ್ದಾರೆ. ಮನೆಗೆ ಪ್ರವೇಶ ಮಾಡಿಲ್ಲ. ಆಗ ಪೊಲೀಸರು ಏನು ಮಾಡುತ್ತಿದ್ದರು? ತಡೆಯಬೇಕಿತ್ತು ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
-
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications