• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮುಂಡಿ ದರ್ಶನಕ್ಕೆ ಬಂದಿದ್ದ ವೃದ್ಧೆ ಸರ ಎಗರಿಸಿದ ಕಳ್ಳರು

|

ಮೈಸೂರು, ಜುಲೈ 25 : ಚಾಮುಂಡೇಶ್ವರಿ ವರ್ಧಂತಿ ನಡೆಯುತ್ತಿದ್ದ ವೇಳೆ ವೃದ್ಧೆಯೊಬ್ಬರ ಸರವನ್ನು ದೋಚಿ ಪರಾರಿಯಾಗಿರುವ ಘಟನೆ ಬುಧವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ.

ಚಾಮುಂಡಿ ದೇವಿಯನ್ನ ಹೊತ್ತು ಸಾಗುತ್ತಿದ್ದ ಚಿನ್ನದ ಪಲ್ಲಕ್ಕಿಗೆ ವೃದ್ಧೆ ಕೈ ಮುಗಿಯುತ್ತಿದ್ದ ವೇಳೆ ಸರಗಳ್ಳರು ಕೈಚಳಕ ತೋರಿದ್ದಾರೆ. ಮೈಸೂರಿನ ಸಿದ್ಧಾರ್ಥ ನಗರದ ನಿವಾಸಿ ಚಾಮಮ್ಮ ಎಂಬುವವರ 35 ಗ್ರಾಂ ಚಿನ್ನದ ಸರವನ್ನು ಕಳ್ಳರು ಲಪಟಾಯಿಸಿದ್ದಾರೆ. ಈ ಕುರಿತು ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪೊಲೀಸರೆಂದು ನಂಬಿಸಿ ಚಿನ್ನ ದೋಚಿ ಪರಾರಿಯಾದ ಕಳ್ಳರು ಪೊಲೀಸರೆಂದು ನಂಬಿಸಿ ಚಿನ್ನ ದೋಚಿ ಪರಾರಿಯಾದ ಕಳ್ಳರು

ಟ್ರಾಫಿಕ್ ಪೊಲೀಸರಿಗೆ ಗುದ್ದಿದ ಆಟೋಚಾಲಕ: ಮೈಸೂರು ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಸಂಚಾರ ನಿಯಮ ಉಲ್ಲಂಘನೆ ಕುರಿತು ತಪಾಸಣೆ ನಡೆಸುತ್ತಿದ್ದ ದೇವರಾಜ ಸಂಚಾರ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ವಿಶ್ವನಾಥ್ ಅವರಿಗೆ ಆಟೊ ಚಾಲಕ ಡಿಕ್ಕಿ ಹೊಡೆದು ಗಾಯಗೊಳಿಸಿದ್ದಾನೆ.‌

ಸಮವಸ್ತ್ರ ಧರಿಸದೇ ಬಂದ ಆಟೊ ಚಾಲಕ ಮುದಾಸಿರ್ ‌ನನ್ನು ನಿಲ್ಲಿಸಲು ವಿಶ್ವನಾಥ್‌ ಸೂಚನೆ ನೀಡಿದ್ದಾರೆ. ‌ಆದರೆ, ಆಟೊ ನಿಲ್ಲಿಸದೇ ರಸ್ತೆಯಲ್ಲಿ ನಿಂತಿದ್ದ ವಿಶ್ವನಾಥ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಗಾಯಗೊಂಡ ವಿಶ್ವನಾಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುದಾಸೀರ್ ವಿರುದ್ಧ ಪ್ರಕರಣ ದಾಖಲಾಗಿದೆ.

English summary
Thieves stolen gold chain of old women in chamundi hills while worshiping in Chamundeshwari Vardhanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X