ಮೈಸೂರಲ್ಲಿ ಪತ್ನಿಯ ಕೊಲೆಗೆ ಯತ್ನಿಸಿದ ಸಿಡಿಪಿಒ ಅಧಿಕಾರಿ
ಮೈಸೂರು, ಮಾರ್ಚ್ 05: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿಯು ತನ್ನ ಪತ್ನಿಯ ಕೊಲೆಗೆ ಯತ್ನಿಸಿರುವ ಘಟನೆ ಮೈಸೂರು ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ನಡೆದಿದೆ.
ನಾಗವೇಣಿ (41) ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದವರು. ಇವರ ಪತಿ ವೆಂಕಟಪ್ಪ ಅವರು ಹುಣಸೂರಿನಲ್ಲಿ ಅವರು ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ. ಇವರು ನಿರಂತರವಾಗಿ ಪತ್ನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆರು ತಿಂಗಳ ಹಿಂದೆ ಸಹಾಯಕ ಶಿಶು ಯೋಜನಾ ಅಧಿಕಾರಿಯಾಗಿ ಮೈಸೂರು ಜಿಲ್ಲೆಯ ತಿ.ನರಸೀಪುರಕ್ಕೆ ವರ್ಗಾವಣೆಯಾಗಿದ್ದರು.

1997 ರಲ್ಲಿ ವೆಂಕಟಪ್ಪನಿಗೆ ಮಣಿ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಮಾರ್ಚ್ 3 ರಂದು ಮನೆಯಲ್ಲಿ ಪತಿಯೇ ಪತ್ನಿಯನ್ನು ನೇಣು ಹಾಕಲು ಯತ್ನಿಸಿದ್ದಾನೆ.
ಇದನ್ನು ನೋಡಿದ ಕುಟುಂಬಸ್ಥರು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ನಾಗವೇಣಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications