ಕೆಎಎಸ್, ಕೆಪಿಎಸ್ಸಿ ಅಕ್ರಮ ಸಿಬಿಐ ತನಿಖೆಗೆ ಆಗ್ರಹ

ಮೈಸೂರು, ನ.26: 2011ನೇ ಸಾಲಿನ ಕೆಎಎಸ್ ಹುದ್ದೆಗಳ ಪರೀಕ್ಷಾ ಅಕ್ರಮವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹಿಸಿದೆ. ಇತ್ತೀಚೆಗೆ ಹಿರಿಯ ಸಹಾಯಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಲೋಕಸೇವಾ ಆಯೋಗ ರದ್ದುಪಡಿಸಿತ್ತು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಚ್.ಕೃಷ್ಣೇಗೌಡ, '2011ರ ಪರೀಕ್ಷಾ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮರು ಮೌಲ್ಯಮಾಪನ ಹಾಗೂ ಮರು ಸಂದರ್ಶನಕ್ಕೆ ಸರ್ಕಾರ ಆದೇಶ ನೀಡಿರುವುದು ನ್ಯಾಯೋಚಿತವಾಗಿದೆ. ಸಾರ್ವಜನಿಕವಾಗಿ ಟೀಕೆಗೊಳಗಾದ ಈ ಪ್ರಕರಣದಲ್ಲಿ ಸರ್ಕಾರದ ನಿರ್ಧಾರಕ್ಕೆ ಸೆಡ್ಡುಹೊ ಡೆಯುವ ರೀತಿಯಲ್ಲಿ ಕೆಪಿಎಸ್ಸಿ ನಡೆದುಕೊಳ್ಳುತ್ತಿದೆ' ಎಂದರು.

CBI Probe urged in KPSC recruitment process chaos

ಇದು ಕೆಪಿಎಸ್ಸಿ ಸದಸ್ಯರು ಹಾಗೂ ಆಯೋಗದ ಒಳಗಡೆ ಇರುವ ಕೊಳಕುತನದ ಹಾಗೂ ಭ್ರಷ್ಟಾಚಾರದ ಪಾಲುದಾರಿಕೆಯನ್ನು ಬಹಿರಂಗಗೊಳಿಸುತ್ತದೆ. ಇಂಥ ತೀರ್ಮಾನವು 2011ರ ಕೆಎಎಸ್ ಹುದ್ದೆಗಳ ಆಯ್ಕೆಯ ಅಕ್ರಮದಲ್ಲಿ ಕೇವಲ ನಾಲ್ಕೈದು ಜನ ಮಾತ್ರ ಪಾಲುದಾರರಾಗಿಲ್ಲ. ಬದಲಿಗೆ ಇಡೀ ಆಯೋಗವೇ ಈ ಅಕ್ರಮ ಅವ್ಯವಹಾರಗಳಲ್ಲಿ ಭಾಗವಹಿಸಿರುವುದನ್ನು ತೋರಿಸುತ್ತದೆಂದು ಆರೋಪಿಸಿದರು.

ಶ್ವೇತಪತ್ರಕ್ಕೆ ಆಗ್ರಹ: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆಯೋಗದ ಆಗಿನ ಅಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಕೆಎಎಸ್ 362 ಹುದ್ದೆಗಳ ಭರ್ತಿಗೆ ಕೆಪಿಎಸ್ಸಿಗೆ ಮಾಡಿಕೊಂಡ ಮನವಿಯನ್ನು ಸರಕಾರ ವಾಪಸ್ ಪಡೆಯಬೇಕು. ಡಿ.15ರೊಳಗೆ ಕೆಪಿಎಸ್ಸಿಯು ಶ್ವೇತಪತ್ರ ಹೊರಡಿಸಿ ತಪ್ಪಿತಸ್ಥ ಆಯೋಗದ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು.

ಎಲ್ಲಾ ಬ್ಯಾಚಿನ ಕೆಎಎಸ್ ಹುದ್ದೆಗಳ ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿರುವ ಎಲ್ಲಾ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಹೋರಾಟದ ನಿರ್ಧಾರಕ್ಕೆ ಸಭೆ: ಕೆಪಿಎಸ್ಸಿ ಭ್ರಷ್ಟಾಚಾರದ ವಿರುದ್ಧ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಂದ ಬೆಂಗಳೂರಿಗೆ ಪ್ರತಿಭಟನಾ ಜಾಥಾ ಹೊರಡಲು, ಪ್ರತಿಭಟನೆ ಮಾಡಲು ಹಾಗೂ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾ ಯಿಸುವ ಸಂಬಂಧ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ನ.30ರಂದು ಸಂಜೆ 4ಕ್ಕೆ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಸಭೆಯನ್ನು ಕರೆಯಲಾಗಿದೆ. ಈ ಸಭೆಯ ಕೆಪಿಎಸ್ ಸಿಯಿಂದ ಅನ್ಯಾಯಕ್ಕೊಳಗಾದವರು, ಹೋರಾಟಗಾರರು, ಪ್ರಗತಿ ಪರ ಚಿಂತಕರು ಸಭೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+