ಹುಣಸೂರು ಬಳಿ ಭೀಕರ ಅಪಘಾತ, ಐವರ ಸಾವು
ಹುಣಸೂರು, ಮಾರ್ಚ್ 25 : ಕಾರು ಉರುಳಿದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನ ಹೆಗ್ಗಡೆದೇವನ ಕೋಟೆ ಮುಖ್ಯ ರಸ್ತೆಯಲ್ಲಿ ಶನಿವಾರ ನಡೆದಿದೆ.
ಹುಣಸೂರು - ಹೆಗ್ಗಡೆದೇವನ ಕೋಟೆ ಮಾರ್ಗದ ನಲ್ಲೂರು ಪಾಲಾ ಗ್ರಾಮದ ಬಳಿ ಈ ದುರಂತ ನಡೆದಿದೆ. ಚಾಲಕನ ಅತಿ ವೇಗದ ಚಾಲನೆಯಿಂದ ಫೋರ್ಡ್ ಇಂಡೀವರ್ ಕಾರು ಪಲ್ಟಿಯಾಗಿ ಉರುಳಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಭೀಕರ ಅಪಘಾತದಲ್ಲಿ ಐದು ಮಂದಿ ದುರ್ಮರಣಕ್ಕೀಡಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೃತಪಟ್ಟ ವ್ಯಕ್ತಿಗಳು ಬೆಂಗಳೂರು ಹೊಸ್ಕೆರೆಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಹುಣಸೂರು ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.













Click it and Unblock the Notifications