'ಬೊಗಸೆ ಜಲ ಒಂದು ಬೀಜಕ್ಕಾಗಿ' ಕವನ ಸಂಕಲನ ಬಿಡುಗಡೆ
ಮೈಸೂರು, ಆಗಸ್ಟ್, 06 : ಬರಹಗಾರ ಜೀವಯಾನದ ಎಸ್, ಮಂಜುನಾಥ್ ಅವರು ರಚಿಸಿರುವ 'ಬೊಗಸೆ ಜಲ ಒಂದು ಬೀಜಕ್ಕಾಗಿ' ಎಂಬ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಮೈಸೂರಿನ ಕಲಾಮಂದಿರದ ಮನೆಯಂಗಳ ಸಭಾಂಗಣದಲ್ಲಿ ನಡೆಯಲಿದೆ.

ಅಭಿರುಚಿ ಪ್ರಕಾಶನ ಪ್ರಕಟಿಸಿರುವ 'ಬೊಗಸೆ ಜಲ ಒಂದು ಬೀಜಕ್ಕಾಗಿ' ಕೃತಿ ಸಮಾರಂಭವು ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ಸಹಕಾರದಲ್ಲಿ ಜರುಗಲಿದ್ದು, ಹೆಸರಾಂತ ಕತೆಗಾರ ಅಬ್ದುಲ್ ರಶೀದ್ ಅವರು ಪುಸ್ತಕವನ್ನು ಆಗಸ್ಟ್ 9, ಭಾನುವಾರ ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ.[ಯುವ ಬರಹಗಾರರ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ]
ಕವನ ಸಂಕಲನ ಕುರಿತು ಕವಯತ್ರಿ ಜ ನಾ ತೇಜಶ್ರೀ ಹಾಗೂ ಕಥೆಗಾರ ವಿಕ್ರಂ ಹತ್ವಾರ್ ಅವರು ಮಾತನಾಡಲಿದ್ದು, ಬರ್ಟಿ ಒಲಿವೇರಾ, ಚರಿತಾ, ರೋಶ್ನಿ ಎಸ್, ರವಿಚಂದ್ರ ಚಿಕ್ಕೆಂಪಿಹುಂಡಿ ಇವರುಗಳು ಕವನ ವಾಚಿಸಲಿದ್ದಾರೆ.











Click it and Unblock the Notifications