ಮೈಸೂರಿನಲ್ಲಿ ನಾಲ್ಕು ತಿಂಗಳ ಹಸುಗೂಸನ್ನು ಬಲಿಪಡೆದ ಭಾರೀ ಮಳೆ
ಮೈಸೂರಿನಲ್ಲಿ ಕಳೆದ ರಾತ್ರಿ (ಮೇ 10) ಸುರಿದ ಭಾರೀ ಮಳೆಯಿಂದಾಗಿ ಗುಡಿಸಲಿಗೆ ನೀರು ನುಗ್ಗಿದ ಪರಿಣಾಮ ನಾಲ್ಕು ತಿಂಗಳ ಮಗು ಸಾವನ್ನಪ್ಪಿದೆ. ಬಳ್ಳಾರಿಯಲ್ಲಿ ಸಿಡಿಲಿಗೆ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ.
ಮೈಸೂರು, ಮೇ 11 : ಮೈಸೂರಿನಲ್ಲಿ ಕಳೆದ ರಾತ್ರಿ (ಮೇ 10) ಸುರಿದ ಭಾರೀ ಮಳೆಯಿಂದಾಗಿ ಗುಡಿಸಲಿಗೆ ನೀರು ನುಗ್ಗಿದ ಪರಿಣಾಮ ನಾಲ್ಕು ತಿಂಗಳ ಮಗು ಸಾವನ್ನಪ್ಪಿದೆ.
ಮೈಸೂರು ಜಿಲ್ಲೆಯ ಟಿ.ನರಸಿಪುರದ ದಾವಣಗೆರೆ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ನಿರಾಶ್ರಿತರು ವಾಸಿಸುತ್ತಿದ್ದರು. ಕೃಷ್ಣ ಮತ್ತು ಲಕ್ಷ್ಮಿ ದಂಪತಿಯ 4 ತಿಂಗಳ ಮಗು ಸಾವನ್ನಪ್ಪಿದ್ದು, ಗುಡಿಸಲು ಕೆಲಕಾಲ ಜಲಾವೃತವಾಗಿತ್ತು.[ಮೈಸೂರಿನ ಕೆ ಆರ್ ನಗರದಲ್ಲಿ ಸಿಡಿಲಿಗೆ ಮತ್ತೊಬ್ಬ ಬಲಿ]

ಬಳ್ಳಾರಿಯಲ್ಲಿ ಸಿಡಿಲಿಗೆ ಇಬ್ಬರು ಮಕ್ಕಳು ಬಲಿ ಸಿಡಿಲು ಬಡಿದು ಇಬ್ಬರು ಮಕ್ಕಳು ದುರ್ಮರಣ ಹೊಂದಿದ ಘಟನೆ ಬಳ್ಳಾರಿ ಜಿಲ್ಲೆ ಸುಂದೂರ್ ತಾಲೂಕಿನ ಬಂದ್ರಿ ಗ್ರಾಮದ ಬಳಿಯ ಕೋಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಮೃತ ಮಕ್ಕಳನ್ನು ಆಕಾಶ್ (10), ಪುಟ್ಟರಾಜ್ (8) ಎಂದು ಗುರುತಿಸಲಾಗಿದೆ.[ಮೈಸೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸಿಡಿಲಿಗೆ ಬಲಿ]
ಇನ್ನೊಬ್ಬರಿಗೆ ಗಾಯವಾಗಿದ್ದು, ಅವರನ್ನು ಕುಡ್ಲಿಗಿ ಆಸ್ಪತ್ರೆಗೆ ಸೇರಿಸಲಾಗಿದೆ.












Click it and Unblock the Notifications