ನಂಜನಗೂಡು ಘಟಕದಲ್ಲಿ ಕನ್ನಡಿಗರಿಗೆ ಆದ್ಯತೆ : ಏಷಿಯನ್ ಪೈಂಟ್ಸ್ ಸ್ಪಷ್ಟನೆ

ಮೈಸೂರು, ಮೇ 16: ಇಲ್ಲಿನ ನಂಜನಗೂಡು ಸಮೀಪವಿರುವ ಏಷಿಯನ್ ಪೈಂಟ್ಸ್ ತಯಾರಿಕೆ ಘಟಕದಲ್ಲಿ, ಏಷಿಯನ್ ಪೈಂಟ್ಸ್ ಲಿ., ಸ್ಥಳೀಯರಿಗೆ ಮತ್ತು ಭೂಮಿ ಮಾರಿದವರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ವದಂತಿಗಳು ಪ್ರಚಾರದಲ್ಲಿವೆ ಎಂದು ಕಂಪನಿಯ ಗಮನಕ್ಕೆ ಬಂದಿದೆ.

ಈ ವದಂತಿಗಳಿಗೆ ಆಧಾರವಿಲ್ಲ ಮತ್ತು ಮೈಸೂರಿನಲ್ಲಿ ಸ್ಥಾಪಿಸಿರುವ ಸಂಸ್ಥೆಯ ಪೈಂಟ್ ತಯಾರಿಕೆ ಘಟಕದ ಭಾಗವಾಗಿ ಕರ್ನಾಟಕ ಸರ್ಕಾರದೊಂದಿಗೆ ಕಂಪನಿಯು ಮಾಡಿಕೊಂಡಿರುವ ಷರತ್ತು ಹಾಗೂ ನಿಬಂಧನೆಗಳಿಗೆ ಅನುಗುಣವಾಗಿ ಕಂಪನಿ ನಡೆದುಕೊಂಡಿದೆ ಎಂದು ಕಂಪನಿಯು ಸ್ಪಷ್ಟಪಡಿಸಲು ಇಚ್ಛಿಸುತ್ತದೆ.

Asian Paints clarification on Jobs offered to domicile of Karnataka

ಕಂಪನಿ ಹಾಗೂ ಕ.ಕೈ.ಪ್ರ.ಅ.ಮಂ(KIADB) ನಡುವೆ ಮಾಡಿಕೊಂಡಿರುವ ಷರತ್ತು ಹಾಗೂ ನಿಬಂಧನೆಗಳಿಗೆ ಅನುಗುಣವಾಗಿ ಮತ್ತು ಸರ್ಕಾರದ ಇತರ ನಿರ್ದೇಶನಗಳ ಅನ್ವಯ ಕಂಪನಿಯು ಅರ್ಹ ಭೂ ಮಾರಾಟಗಾರರಿಗೆ ಮೈಸೂರಿನ ಏಷಿಯನ್ ಪೈಂಟ್ಸ್ ಲಿ. ಘಟಕದಲ್ಲಿ ಉದ್ಯೋಗ ನೀಡುವುದಾಗಿ ಹೇಳಿದ್ದೇವೆ.

ಇದಲ್ಲದೆ, ಕರ್ನಾಟಕದ ಜನರಿಗೆ ಏಷಿಯನ್ ಪೈಂಟ್ಸ್ ಉದ್ಯೋಗ ವಿಷಯದಲ್ಲಿ ಹೆಚ್ಚಿನ ಆದ್ಯತೆ ನೀಡಿದೆ ಮತ್ತು ಮೈಸೂರಿನ ಘಟಕದಲ್ಲಿ ನೇಮಿಸಿಕೊಳ್ಳಲಾಗಿರುವ ಕಾರ್ಮಿಕರ ಪೈಕಿ ಹೆಚ್ಚಿನ ಜನರು ಕರ್ನಾಟಕದವರಾಗಿದ್ದಾರೆ ಎಂದೂ ಸಂಸ್ಥೆ ಸ್ಪಷ್ಟೀಕರಿಸುತ್ತದೆ.

ನಂಜನಗೂಡು ಸಮೀಪದ ಇಮ್ಮಾವು ಗ್ರಾಮದ ರೈತರಿಗೆ ಕಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಏಷ್ಯನ್ ಪೇಂಟ್ಸ್ ಅತಿ ಕಡಿಮೆ ದರದಲ್ಲಿ ರೈತರಿಂದ ಭೂಮಿ ಪಡೆದುಕೊಂಡಿತ್ತು. ಆದರೆ, ಈಗ ರೈತರಿಗೆ ಉದ್ಯೋಗವನ್ನು ನೀಡದೆ ವಂಚಿಸುತ್ತಿದೆ. ರೈತರು ಶಿಕ್ಷಣ ಪಡೆದಿಲ್ಲ ಎಂದು ಕೆಳ ದರ್ಜೆಯ ಕೆಲಸಗಳನ್ನು ನೀಡುತ್ತಿದೆ. ರೈತರಿಗೆ ಕಾಯಂ ಉದ್ಯೋಗ ನೀಡಲಿಲ್ಲ. ಹಾಗಾಗಿ ತಕ್ಷಣವೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+