ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ 'ಯುವ ಸಂಭ್ರಮ'ದಲ್ಲಿ ನೀವೂ ಭಾಗವಹಿಸಬೇಕೆ?

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 1 : ದಸರೆಯ ಯುವಕರ ಕೇಂದ್ರಬಿಂದು ಎಂದರೆ 'ಯುವ ಸಂಭ್ರಮ'. ಅಲ್ಲಿ ವೇದಿಕೆಯಲ್ಲಿ ಹಾಕುವ ಹೆಜ್ಜೆಗೆ ಹುಚ್ಚೆದ್ದು ಕುಣಿಯಬೇಕೆಂದು ಯಾರಿಗೆ ತಾನೇ ಅನಿಸದೇ ಇರಲಾರದು ಹೇಳಿ..! ಅಂತಹ ಆಕರ್ಷಣೆಯಾಗಿರುವ ಯುವ ಸಂಭ್ರಮದಲ್ಲಿ ಡ್ಯಾನ್ಸ್ ಮಾಡ್ಬೇಕೆ? ಅದಕ್ಕಾಗಿ ಈ ಬಾರಿ ಸ್ಪೆಷಲ್ ಥೀಮ್ಸ್ ಗಳನ್ನು ನೀಡಲಾಗಿದೆ.

ಮೈಸೂರಿನ ಪ್ರವಾಸಿಸ್ಥಳಗಳನ್ನು ನೋಡಲು ಒಂದೇ ಟಿಕೆಟ್ಮೈಸೂರಿನ ಪ್ರವಾಸಿಸ್ಥಳಗಳನ್ನು ನೋಡಲು ಒಂದೇ ಟಿಕೆಟ್

ಹೌದು, ಸ್ವಚ್ಛ ಭಾರತ ಆಂದೋಲನ, ಬೇಟಿ ಬಚಾವೋ, ಮಹಿಳಾ ಶಿಕ್ಷಣ, ಬಾಲ್ಯ ವಿವಾಹ ತಡೆಗಟ್ಟುವಿಕೆ, ರಾಷ್ಟ್ರ ಪ್ರೇಮ, ಕನ್ನಡ ಪ್ರೇಮ, ಮೈಸೂರು ಹಿರಿಮೆ/ಪಾರಂಪರಿಕ ಸಾರ್ಥಕತೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಅಪರಾಧಗಳ ನಿಯಂತ್ರಣ, ವಿದೇಶಿ ವಸ್ತು ನಿಷೇಧ/ ಸ್ವದೇಶಿ ವಸ್ತುಗಳ ಬಳಕೆ, ಅಂತರ್ಜಾಲ ಅಪರಾಧಗಳು ಹಾಗೂ ಅವುಗಳ ತಡೆ, ಪರಿಸರ ಕಾಳಜಿ, ಶಾಂತಿ ಪಾಲನೆ, ರೈತನೇ ರಾಷ್ಟ್ರದ ಬೆನ್ನೆಲುಬು, ಕರ್ನಾಟಕ ಸರ್ಕಾರದ ಯೋಜನೆಗಳ ಉಪಯುಕ್ತತೆ, ಮಾದಕ ವಸ್ತುಗಳ ನಿಷೇಧ, ಕುವೆಂಪು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಿ 50 ವರ್ಷಗಳಾಗಿದ್ದು ಸದರಿ ಪ್ರಶಸ್ತಿ ಬಗ್ಗೆ, ಬುದ್ಧಿಮಾಂದ್ಯ ಮಕ್ಕಳ ಸಾಧನೆಗಳ ಬಗ್ಗೆ ಹೀಗೆ ಹಲವು ಪ್ರಮುಖ ವಿಷಯಗಳ ಮೇಲೆ ವಿದ್ಯಾರ್ಥಿಗಳು ನೃತ್ಯ ನೀಡಬೇಕು.

Application invited for Yuva Sambhrama in Mysuru Dasara

ಇನ್ನು ಕಾಲೇಜುಗಳು ಸದರಿ ಥೀಮ್‌ಗಳನ್ನೊಳಗೊಂಡ ಕಾರ್ಯಕ್ರಮ ನೀಡಲು ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲರ ಮೂಲಕ ಕಾರ್ಯಕ್ರಮದ ವಿವರ, ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಖರ್ಚು ವೆಚ್ಚಗಳ ಪಟ್ಟಿಯನ್ನು ಸೆ.3ರ ಸಂಜೆಯೊಳಗೆ ಜಿಲ್ಲಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಾ.ಬಾಬು ಜಗಜೀವನ್ ರಾಮ್‌ ಭವನ, ನಾರಾಯಣ ಸ್ವಾಮಿ ಬ್ಲಾಕ್, ಪಡುವಾರಹಳ್ಳಿ ಪೂರ್ವ, ಮೈಸೂರು-02.

ಮೈಸೂರು ಅರಮನೆಗೆ ಆಗಮಿಸಿದ ಗಜಪಡೆಯ 2 ನೇ ತಂಡಮೈಸೂರು ಅರಮನೆಗೆ ಆಗಮಿಸಿದ ಗಜಪಡೆಯ 2 ನೇ ತಂಡ

ಇಲ್ಲಿಗೆ ನೇರವಾಗಿ ಅಥವಾ ಇ- ಮೇಲ್ ಮೂಲಕ ತಲುಪಿಸಬೇಕಿದೆ. ಕಾಲೇಜು ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹೆಚ್ಚಿನ ಮಾಹಿತಿಗೆ ಮೊ. 91084 60800 ಸಂಪರ್ಕಿಸುವಂತೆ ಕೋರಲಾಗಿದೆ.

Application invited for Yuva Sambhrama in Mysuru Dasara

ಸಾಂಸ್ಕೃತಿಕ ಸಮಿತಿ ಸಿದ್ಧತೆ
ಸೆ.22ರಿಂದ 28ರವರೆಗೆ ನಡೆಯುವ ಯುವ ದಸರಾಕ್ಕೆ ದೇಶದ ಪ್ರಖ್ಯಾತ ಕಲಾವಿದರನ್ನು ಆಹ್ವಾನಿಸಲಾಗುತ್ತಿದೆ. ಸೆ.21ರಿಂದ 28ರವರೆಗೆ ನಗರದ ಅರಮನೆ ಮುಂಭಾಗದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಸುಗಮ ಸಂಗೀತ ಹಾಗೂ ಜಾನಪದ ರಷೀದ್ ಖಾನ್ ಮೊದಲಾದ ಖ್ಯಾತನಾಮ ಕಲಾವಿದರನ್ನು ಆಹ್ವಾನಿಸಲು ದಸರಾ ಮಹೋತ್ಸವದ ಸಾಂಸ್ಕೃತಿಕ ಸಮಿತಿ ಸಿದ್ಧತೆ ನಡೆಸಿದೆ.

ದಸರಾ ಅಂದ್ರೆ ಕನ್ನಡಮ್ಮನ ಪೂಜೆ, ಆದ್ರೆ ವೆಬ್ ಸೈಟ್ ನಲ್ಲಿ ಕನ್ನಡ ಕೇಳಬೇಡಿ!ದಸರಾ ಅಂದ್ರೆ ಕನ್ನಡಮ್ಮನ ಪೂಜೆ, ಆದ್ರೆ ವೆಬ್ ಸೈಟ್ ನಲ್ಲಿ ಕನ್ನಡ ಕೇಳಬೇಡಿ!

ಸೆ.30ರಂದು ನಡೆಯುವ ಜಂಬೂ ಸವಾರಿ ಮೆರವಣಿಗೆ ನಂತರ ಬನ್ನಿಮಂಟಪ ಮೈದಾನದಲ್ಲಿ ಸಂಜೆ ನಡೆಯಲಿರುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ 300ರಿಂದ 400 ಕಲಾವಿದರು ಏಕ ಕಾಲಕ್ಕೆ ನೃತ್ಯರೂಪಕ ನಡೆಸಿಕೊಡಲಿದ್ದಾರೆ. ಸಂಗೀತ ಕ್ಷೇತಗಳಲ್ಲಿ ಹೆಸರು ಮಾಡಿರುವ ಕಲಾವಿದರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ.

ದನಿಗೂಡಿಸಲಿರುವ ಸಂಗೀತ ದಿಗ್ಗಜರು
ನಾಡಿನ ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ, ಪ್ರಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಸಂಗೀತ ನಿರ್ದೇ ಶಕ ಹಂಸಲೇಖ ಅವರನ್ನು ಆಹ್ವಾನಿಸಲು ಚಿಂತನೆ ನಡೆದಿದೆ. ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್, ಜಾಕೀರ್ ಹುಸೇನ್, ಹೆಸರಾಂತ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯಾ, ರೋಣು ಮಜುಂದಾರ್ ಕೂಡ ಭಾಗವಹಿಸಲಿದ್ದಾರೆ.

ಇನ್ನು ಯುವ ವೇದಿಕೆಯಲ್ಲಿ ಸೆ. 22ರಂದು ಅರ್ಮನ್ ಮಲಿಕ್, 23 ರಂದು ಅಂಕಿತ್ ತಿವಾರಿ, 24 ರಂದು ಕೋಕ್ ಸ್ಟುಡಿಯೋ, 25 ರಂದು ಅರ್ಜುನ್ ಜನ್ಯ, 26 ರಂದು ನೀತಿ ಮೋಹನ್, 27 ರಂದು ಫಲಕ್ ಮುಚ್ಛಾಲ್ ಅವರ ಗಾಯನ ಗೋಷ್ಠಿಯ ತಾತ್ಕಾಲಿಕ ಪಟ್ಟಿ ತಯಾರಾಗಿದ್ದು, ಇದೇ ಅಂತಿಮದ್ದಲ್ಲ.

English summary
If anyone interested to participate in Yuva Sambhara (youth fest) in Mysuru Dasara they can send application to District administration before September 3rd evening. Interested can call 91084 60800 for more details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X