Get Updates
Get notified of breaking news, exclusive insights, and must-see stories!

ಅನ್ನಭಾಗ್ಯ ಯೋಜನೆ: ಮೈಸೂರು ಜಿಲ್ಲೆಯ 6 ಲಕ್ಷ ಫಲಾಭವಿಗಳಿಗೆ ಜಮಾ ಆಗಿದ್ದು ಇಷ್ಟು ಕೋಟಿ ಹಣ, ವಿವರ ಇಲ್ಲಿದೆ

ಮೈಸೂರು, ಜುಲೈ, 19: ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಕೇಂದ್ರ ನೀಡುತ್ತಿರುವ 5 ಕೆ.ಜಿ. ಅಕ್ಕಿಯೊಂದಿಗೆ ರಾಜ್ಯ ಸರ್ಕಾರ 5 ಕೆ.ಜಿ. ಅಕ್ಕಿ ಬದಲು ಪಡಿತರ ಚೀಟಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆ ಜಿಲ್ಲೆಯಲ್ಲೂ ಶುರುವಾಗಿದೆ. ಜಿಲ್ಲೆಯ ಅಂದಾಜು 6.6 ಲಕ್ಷ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ಗಳ ಫಲಾನುಭವಿಗಳಿಗೆ 34 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ

ರಾಜ್ಯದಲ್ಲಿ ಮೊದಲ ಹಂತದಲ್ಲಿಯೇ ಮೈಸೂರು ಜಿಲ್ಲೆಯ ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ದೊರೆತಿದೆ. ಜಿಲ್ಲೆಯಲ್ಲಿ 50,432 ಅಂತ್ಯೋದಯ ಅನ್ನ ಯೋಜನೆ ಕಾರ್ಡ್‌ದಾರ ಕುಟುಂಬದ ಒಟ್ಟು 2,17,199 ಫಲಾನುಭವಿಗಳು, 6,61,290 ಬಿಪಿಎಲ್ ಕಾರ್ಡ್‌ಗಳ 20,83,627 ಜನರಿಗೆ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ವಿತರಿಸಬೇಕಿದೆ. ಅದರಂತೆಯೇ ಎಂದಿನಂತೆ ತಲಾ 5 ಕೆ.ಜಿ. ಅಕ್ಕಿ ವಿತರಿಸಲಾಗಿದೆ.

Anna bhagya scheme: 34 crores cradited for 6 lakh people of Mysuru district

ಇನ್ನುಳಿದ 5 ಕೆ.ಜಿ. ಅಕ್ಕಿಗೆ ಬದಲಾಗಿ (1 ಕೆಜಿಗೆ 34 ರೂ. ನಂತೆ 5 ಕೆಜಿಗೆ ಹಣ) 170 ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 7,11,722 ಕಾರ್ಡ್‌ಗಳ ಅಂದಾಜು 23 ಲಕ್ಷ ಮಂದಿ ನಗದು ಪಡೆದಿದ್ದಾರೆ ಎಂದು ಮೈಸೂರು ಆಹಾರ ಇಲಾಖೆ ಉಪ ನಿರ್ದೇಶಕಿ ಕುಮುದಾ ಶರತ್ ತಿಳಿಸಿದ್ದಾರೆ.

ಪಡಿತರ ಫಲಾನುಭವಿಗಳು ತಮ್ಮ ಬ್ಯಾಂಕ್‌ ಖಾತೆಗೆ ಅಕ್ಕಿ ಹಣ ಸಂದಾಯವಾಗಿದೆಯೇ? ಇಲ್ಲವೇ ಎಂಬುದನ್ನು ಸ್ವಯಂ ಖಾತರಿಪಡಿಸಿಕೊಳ್ಳಬಹುದು. ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಕೇಳಿರುವ ಮಾಹಿತಿಯನ್ನು ಎಂಟ್ರಿ ಮಾಡಬೇಕು. ಆಗ ಯಾವ ತಿಂಗಳು, ಎಷ್ಟು ಹಣ ಖಾತೆಗೆ ಜಮೆಯಾಗಿದೆ ಎಂಬ ಮಾಹಿತಿ ಮೊಬೈಲ್‌ ಸ್ಕ್ರೀನ್‌ನಲ್ಲೇ ಕಾಣುತ್ತದೆ.

ತಾಲೂಕುವಾರು ಸಹಾಯವಾಣಿ ಆರಂಭ

ಮೈಸೂರು ಜಿಲ್ಲೆಯಲ್ಲಿ ಈವರೆಗೆ ಶೇಕಡಾ 80ರಷ್ಟು ಮಂದಿಗೆ ಅಕ್ಕಿಯ ಬದಲಿಗೆ ಸರ್ಕಾರದಿಂದ ನೀಡಲಾಗುತ್ತಿರುವ ನಗದು ತಲುಪಿದೆ. ಹಣ ವರ್ಗಾವಣೆಯಾಗದವರ ದೂರು ಸ್ವೀಕರಿಸಲು ಜಿಲ್ಲಾಡಳಿತದಿಂದ ಸಹಾಯವಾಣಿಯನ್ನು ತೆರೆಯಲಾಗಿದೆ.

ಬ್ಯಾಂಕ್ ಖಾತೆಗಳ ತಾಂತ್ರಿಕ ದೋಷದ ಕಾರಣಗಳಿಂದಾಗಿ ಹಣ ಪಡೆಯಲು ಸಾಧ್ಯವಾಗದೇ ಇರುವ ಪಡಿತರ ಫಲಾನುಭವಿಗಳು ತಮ್ಮ ಖಾತೆಗೆ ಹಣ ಜಮಾವಣೆಯಾಗದಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಜಿಲ್ಲೆಯಾದ್ಯಂತ ತಾಲೂಕುವಾರು ಸಹಾಯವಾಣಿ ತೆರೆಯಲಾಗಿದೆ. ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 10:30ರಿಂದ ಸಂಜೆ 5 ಗಂಟೆಯವರೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ತಾಲೂಕುವಾರು ಸಹಾಯವಾಣಿ ಸಂಖ್ಯೆ

1. ಎಚ್.ಡಿ.ಕೋಟೆ - 81972 22784

2. ಹುಣಸೂರು - 88840 24771, 89709 39533

3. ಕೆ.ಆರ್.ನಗರ - 73531 97375

4. ಮೈಸೂರು ನಗರ- 98802 38495, 99018 21269

5. ಮೈ.ತಾಲೂಕು - 86187 71871, 97439 05385

6. ನಂಜನಗೂಡು - 94800 99882

7. ಪಿರಿಯಾಪಟ್ಟಣ - 95354 08876

8. ತಿ.ನರಸೀಪುರ - 99007 15824

9. ಸರಗೂರು- 97407 38154

10. ಸಾಲಿಗ್ರಾಮ- 73531 97375

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+