ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೃಗಾಲಯಕ್ಕೆ ಗುಜರಾತ್ ನ ಅತಿಥಿಗಳ ಆಗಮನ

By Yashaswini
|
Google Oneindia Kannada News

ಮೈಸೂರು, ಜುಲೈ 4 : ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದ್ದು, ಪ್ರಾಣಿಪ್ರಿಯರನ್ನು ಕೈ ಬೀಸಿ ಕರೆಯುತ್ತಿವೆ.

ಪ್ರಾಣಿ ವಿನಿಮಯ ನಿಯಮದಡಿಯಲ್ಲಿ ಗುಜರಾತ್‌ ರಾಜ್ಯದ ಸೂರತ್ ನ ಡಾ. ಶ್ಯಾಮ್ ಪ್ರಸಾದ್ ಮೃಗಾಲಯದಿಂದ ಗಂಡು, ಹೆಣ್ಣು ನೀರು ನಾಯಿಗಳನ್ನು ತರಲಾಗಿದೆ. ಅದರಂತೆ ಮೈಸೂರು ಮೃಗಾಲಯದಿಂದ ಗಂಡು-ಹೆಣ್ಣು ಕತ್ತೆ ಕಿರುಬ ಹಾಗೂ ಗಂಡು-ಹೆಣ್ಣು ಕಪ್ಪು ಹಂಸವನ್ನು ಗುಜರಾತ್ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

Animals brought to Mysuru from Gujarat zoo under exchange scheme

ನಾಲ್ಕೈದು ದಿನಗಳಲ್ಲಿ 4 ಜೀಬ್ರಾ ಮೈಸೂರು ಮೃಗಾಲಯಕ್ಕೆ ಬರಲಿದ್ದು, ಪ್ರವಾಸಿಗರಿಗೆ ಹಾಗೂ ಪ್ರಾಣಿ ಪ್ರಿಯರಿಗೆ ಮತ್ತಷ್ಟು ಪ್ರಾಣಿಗಳನ್ನು ನೋಡಲು ಅವಕಾಶ ಸಿಗಲಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್ ತಿಳಿಸಿದ್ದಾರೆ.

ಹೊಸ ಅತಿಥಿಗಳು ಬಂದಿದ್ದಾರೆ, ಮೈಸೂರು ಝೂಗೆ ಬನ್ನಿ!ಹೊಸ ಅತಿಥಿಗಳು ಬಂದಿದ್ದಾರೆ, ಮೈಸೂರು ಝೂಗೆ ಬನ್ನಿ!

ಕಮಲಾ ಕರಿಕಾಳನ್ ಮಂಗಳೂರಿಗೆ ವರ್ಗಾವಣೆ

ರಾಜ್ಯ ಸರಕಾರವು ಅರಣ್ಯ ಇಲಾಖೆಯ 13 ಐಎಫ್ ಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಕಮಲಾ ಕರಿಕಾಳನ್ ಮತ್ತು ಹಿರಿಯ ಐಎಫ್ ಎಸ್ ಅಧಿಕಾರಿ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಳನ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

Animals brought to Mysuru from Gujarat zoo under exchange scheme

ಮಂಗಳೂರಿನ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಮಲಾ ಕರಿಕಾಳನ್ ಅವರನ್ನು ನೇಮಿಸಲಾಗಿದ್ದು, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಡಾ.ಕರಿಕಾಳನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಗೀತಾ ಮಹಾದೇವಪ್ರಸಾದ್ ವಿರುದ್ಧ ಭ್ರಷ್ಟಾಚಾರದ ದೂರುಗೀತಾ ಮಹಾದೇವಪ್ರಸಾದ್ ವಿರುದ್ಧ ಭ್ರಷ್ಟಾಚಾರದ ದೂರು

ಕಮಲಾ ಕರಿಕಾಳನ್ ಅವರ ಜಾಗಕ್ಕೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಡಿಸಿಎಫ್ ಆಗಿದ್ದ ವಸಂತರೆಡ್ಡಿ ಅವರನ್ನು, ಡಾ.ಕರಿಕಾಳನ್ ಅವರ ಜಾಗಕ್ಕೆ ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

English summary
Animals brought to Mysuru Chamarajendra zoo from Gujarat under animal exchange scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X