ಮ್ಯಾನ್ ಹೋಲ್ ನಲ್ಲಿ ವ್ಯಂಗ್ಯಚಿತ್ರ: ವೈದ್ಯರ ಮುಷ್ಕರಕ್ಕೆ ಕಲಾವಿದನ ಆಕ್ರೋಶ
ಮೈಸೂರು, ನವೆಂಬರ್ 17: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಜನಸಾಮಾನ್ಯರ ಪ್ರಾಣಕ್ಕೆ ಕುತ್ತು ತರುತ್ತಿದೆ. ಇದನ್ನರಿತ ಮೈಸೂರಿನ ನಿವಾಸಿ ಅಂತರಾಷ್ಟ್ರೀಯ ಕಲಾವಿದ ಬಾದಲ್ ನಂಜುಂಡಸ್ವಾಮಿ ವಿಚಿತ್ರವಾಗಿ ಆಸ್ಪತ್ರೆ ಮುಂಭಾಗ ಚಿತ್ರ ಬಿಡಿಸುವ ಮೂಲಕ ವೈದ್ಯರ ನಡೆಯನ್ನು ಟೀಕಿಸಿದ್ದಾರೆ.
ಮೈಸೂರಿನ ಡರ್ಲಾಸ್ ಆಸ್ಪತ್ರೆ ಮುಂಭಾಗ ಬಾಯ್ತೆರದ ಮ್ಯಾನ್ ಹೋಲ್ ನ್ನು ಬಳಸಿಕೊಂಡು ಪೇಂಟಿಂಗ್ ಮಾಡಿದ್ದು, ವೈದ್ಯರನ್ನು ಕಾರ್ಟೂನ್ ನಲ್ಲಿ ಬರುವ ಬ್ಯುಗಲ್ ಬಾಯ್ ಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಹೋಲಿಕೆ ಮಾಡಿದ್ದಾರೆ.

ಬ್ಯುಗಲ್ ಬಾಯ್ ಎಂಬುವನು ಓರ್ವ ಕಳ್ಳ, ಎಲ್ಲವನ್ನೂ ನುಂಗುವವನಾಗಿದ್ದು, ಚಿತ್ರ ಕಲಾವಿದ, ನಟ ಬಾದಲ್ ನಂಜುಂಡಸ್ವಾಮಿ ವಿನೂತನ ಪ್ರತಿಭಟನೆ ನಡೆಸಿದರು.












Click it and Unblock the Notifications