ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಂಬರ್ 1032 ರೂಮ್ ನ ಕಾಯಂ ಅತಿಥಿ ಅಂಬಿ

|
Google Oneindia Kannada News

ಮೈಸೂರು, ನವೆಂಬರ್ 25 : ತಮ್ಮ ಸಂಬಂಧಿಕರೊಬ್ಬರ ತಿಥಿಯಲ್ಲಿ ಭಾಗವಹಿಸಲು ಶನಿವಾರ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ರೂಮ್ ಬುಕ್ ಆಗಿತ್ತು. ಮಧ್ಯಾಹ್ನದವರೆಗೂ ಕಾದಿದ್ದೆವು. ಆದರೆ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಭಾಗವಹಿಸಿಲ್ಲ ಎಂಬ ಮಾಹಿತಿ ಅವರ ಪತ್ನಿ ಸುಮಲತಾ ತಿಳಿಸಿದರು ಎಂದು ಹೋಟೆಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಪ್ರಕಾಶ್ ತಿಳಿಸಿದರು.

ಅಂಬರೀಶ್ ಅವರು ಮೈಸೂರಿಗೆ ಬಂದರೆ ಉಳಿದುಕೊಳ್ಳುತ್ತಿದ್ದದ್ದು ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ ನಲ್ಲಿಯೇ. ಈ ಹೋಟೇಲ್ ನಲ್ಲಿ ಅಂಬರೀಶ್ ಅವರಿಗಂತಲೇ ಪ್ರತ್ಯೇಕ ರೂಮ್ ಇತ್ತು. ಅದೇ ರೂಮ್ ನಲ್ಲಿ ಯಾವಾಗಲೂ ರೆಬೆಲ್ ಸ್ಟಾರ್ ತಂಗುತ್ತಿದ್ದರು. ರೂಮ್ ನಂಬರ್ 1032 ಎಂದಿಗೂ ಅಂಬರೀಶ್ ಅವರಿಗಾಗಿ ಎಂದು ಮಾಲೀಕ ಸಂದೇಶ್ ನಾಗರಾಜ್ ಮೀಸಲಿಟ್ಟಿದ್ದರು.

'ಮಂಡ್ಯದ ಗಂಡೇ' ಆದರೂ ಅಂಬರೀಶ್ 'ಮೈಸೂರು ಜಾಣ'.! ಹೇಗೆ ಅಂತೀರಾ.?

ರೂಮ್ ನಂಬರ್ 1032ಗೆ ಅಂಬಿಸ್ ಸೂಟ್ ಎಂದೇ ಹೆಸರು ಕೂಡ ಇಡಲಾಗಿತ್ತು. ಹೋಟೆಲ್ ನ ಎಲ್ಲ ಸಿಬ್ಬಂದಿಯೊಂದಿಗೂ ಅಂಬರೀಶ್ ಸ್ನೇಹದಿಂದ ವರ್ತಿಸುತ್ತಿದ್ದರು. ಇನ್ನು 1032ನೇ ನಂಬರ್ ರೂಮ್ ​ಗೆ ಅಂಬಿ ಸೂಟ್ ಎಂದೇ ಹೆಸರಿಡಲಾಗಿದ್ದು, ವಿಶಾಲವಾದ ಈ ಕೊಠಡಿಯಲ್ಲಿ ಸಿಟ್ಟಿಂಗ್ ರೂಂ, ಜೊತೆಗೆ ಬೆಡ್ ರೂಂ, ಎರಡು ಟಿವಿ ಹಾಗೂ ಮಸಾಜ್ ಚೇರ್ ಸಹ ಇದೆ.

Ambareesh had to attend function at Mysuru on Saturday

ಮೈಸೂರಿನಲ್ಲಿದೆ ಅಣ್ಣನ ಮನೆ :

ಅಂಬರೀಶ್ ಹುಟ್ಟಿ ಬೆಳೆದಿದ್ದು ಅರಮನೆ ನಗರಿಯಲ್ಲಿ. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಅಜ್ಜ ಪಿಟೀಲು ಟಿ. ಚೌಡಯ್ಯ ಅವರ ನಿವಾಸ. ಅಲ್ಲೇ ಅಂಬರೀಶ್ ಹುಟ್ಟಿದ್ದರು. ಪಿಟೀಲು ಚೌಡಯ್ಯ ಅವರಿಗೆ ಮೂವರು ಹೆಣ್ಣುಮಕ್ಕಳು. ಪದ್ಮಮ್ಮ ಅವರು ಅಂಬರೀಶ್ ಅವರ ತಾಯಿ. ಈಗ ಚೌಡಯ್ಯ ಅವರ ಮನೆಯಲ್ಲಿ ಅಂಬರೀಶ್ ಅಣ್ಣ ಆನಂದ್ ಕುಮಾರ್ ಅವರು ವಾಸವಾಗಿದ್ದಾರೆ.

ಧರಣಿ ಕೂತಿದ್ದ ಬಿಎಸ್ವೈ ಅವರ ಪಾದಮುಟ್ಟಿ, ಎಬ್ಬಿಸಿ ಕೂರಿಸಿದ್ದ ಅಂಬರೀಶ್ ಧರಣಿ ಕೂತಿದ್ದ ಬಿಎಸ್ವೈ ಅವರ ಪಾದಮುಟ್ಟಿ, ಎಬ್ಬಿಸಿ ಕೂರಿಸಿದ್ದ ಅಂಬರೀಶ್

ಅಂಬರೀಶ್ ಅವರ ಸಾಕಷ್ಟು ಬಾಲ್ಯದ ನೆನಪುಗಳು ತಾತನ ಮನೆಯಲ್ಲಿದೆ. ಅವರು ಮೈಸೂರಿಗೆ ಬಂದರೆ ಆಗಾಗ ತಮ್ಮ ತಾತನ ಮನೆಗೂ ಹೋಗಿಬರುತ್ತಿದ್ದರು. ಅಂಬರೀಶ್ ಅವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ತಮ್ಮ ತಾತ ಪಿಟೀಲು ಟಿ. ಚೌಡಯ್ಯ ಅವರ ನೆನಪಿಗಾಗಿ ಮೈಸೂರಿನ ನಿವಾಸವನ್ನು ನವೀಕರಣಗೊಳಿಸದೇ ಹಾಗೇ ಬಿಟ್ಟಿದ್ದರು. ತಾತನ ನೆನಪಿಗಾಗಿ ಮೀಸಲಿಟ್ಟಿದ್ದರು.

English summary
Former minister and actor Ambareesh who passed away on Saturday, had to go to Mysuru on that day. But due to ill health he did not go. Here is the nexus of Ambareesh with Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X