ಗುರುವಾರ ಮೈಸೂರು-ಬೆಂಗಳೂರು ಮಾರ್ಗ ಬದಲು

ಮೈಸೂರು, ನ. 26: ನಗರದ ಹೊರವಲಯದಲ್ಲಿರುವ ಸಿದ್ದಲಿಂಗಪುರದಲ್ಲಿ ಗುರುವಾರ ಸುಬ್ರಹ್ಮಣ್ಯೇಶ್ವರ ಸ್ವಾಮಿ ಸೃಷ್ಟಿ ನಡೆಯಲಿರುವ ಕಾರಣ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗವನ್ನು ಬದಲಾಯಿಸಲಾಗಿದೆ.

ಈ ಕುರಿತು ಮೈಸೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳು ಮೈಸೂರು-ಬೆಂಗಳೂರು ಹೆದ್ದಾರಿ ಮೇಲೆ ಟೋಲ್ ಗೇಟ್ ಹತ್ತಿರ ಎಡಕ್ಕೆ ತಿರುಗಬೇಕು. ವರ್ತುಲ ರಸ್ತೆಯಲ್ಲಿ ಮುಂದುವರಿದು ರಾಯಲ್ ಇನ್ ಜಂಕ್ಷನ್‌ವರೆಗೆ ಮುಂದುವರಿಯಬೇಕು. [ಆರು ಪಥವಾಗಲಿದೆ ಮೈಸೂರು-ಬೆಂಗಳೂರು ಹೆದ್ದಾರಿ]

road

ನಂತರ ಬಲಕ್ಕೆ ತಿರುಗಿ ಮುಂದುವರಿದು ಕೆಆರ್‌ಎಸ್ ರಸ್ತೆಯಲ್ಲಿ ಪಂಪ್ ಹೌಸ್‌ವರೆಗೂ ಮುಂದುವರಿಯಬೇಕು. ಇಲ್ಲಿಂದ ಬಲಕ್ಕೆ ತಿರುಗಿ ಪಶ್ಚಿಮ ವಾಹಿನಿಯವರೆಗೂ ಮುಂದುವರಿಯಬೇಕು. ಅಲ್ಲಿ ಎಡಕ್ಕೆ ತಿರುಗಿದರೆ ಮೈಸೂರು-ಬೆಂಗಳೂರು ಹೆದ್ದಾರಿ ಸಿಗುತ್ತದೆ. ಈ ಆದೇಶವು ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದ್ದು, ಗುರುವಾರ ರಾತ್ರಿ 10 ಗಂಟೆಯವರೆಗೂ ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ. [ಮೈಸೂರು-ಬೆಂಗಳೂರು ಚತುಷ್ಪಥ ನಿರ್ಮಾಣ]

ಸಿದ್ಧಲಿಂಗಪುರದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನಕ್ಕೆ ಗುರುವಾರ ಸುಮಾರು 15-20 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ಭಕ್ತರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಲಾಗಿದೆ. [ಏಳು ಹೊಸ ರಾಷ್ಟ್ರೀಯ ಹೆದ್ದಾರಿಗಳು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+