ಮೈಸೂರು-ಮಂಗಳೂರು ವಿಮಾನ ಸಂಚಾರಕ್ಕೆ ಚಾಲನೆ
ಮೈಸೂರು, ಡಿಸೆಂಬರ್ 11: ಮೈಸೂರು ಮತ್ತು ಮಂಗಳೂರು ನಡುವಿನ ವಿಮಾನ ಸೇವೆಗೆ ಚಾಲನೆ ನೀಡಲಾಗಿದೆ. ಅಲೆಯೆನ್ಸ್ ಏರ್ ಕಂಪನಿಯ ವಿಮಾನ ವಾರದಲ್ಲಿ 4 ದಿನಗಳ ಕಾಲ ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.
ಶುಕ್ರವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕೊಚ್ಚಿನ್-ಮೈಸೂರು-ಮಂಗಳೂರು ವಿಮಾನಕ್ಕೆ ಚಾಲನೆ ನೀಡಲಾಯಿತು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ವಿಮಾನ ನಿಲ್ದಾಣದ ಅಧಿಕಾರಿಗಳು ಉಪಸ್ಥಿತರಿದ್ದರು.

ಮೊದಲ ದಿನ ಮೈಸೂರಿನಿಂದ ಮಂಗಳೂರಿಗೆ ಸಂಚಾರ ನಡೆಸಲು 23 ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದರು. ಮಂಗಳೂರಿನಿಂದ ಮೈಸೂರಿಗೆ ಆಗಮಿಸಲು 33 ಟಿಕೆಟ್ ಬುಕ್ ಆಗಿತ್ತು. ಅಲಯನ್ಸ್ ಏರ್ ಕಂಪನಿ ಉಭಯ ನಗರಗಳ ನಡುವೆ ವಿಮಾನ ಹಾರಾಟ ನಡೆಸಲಿದೆ.

ಮೈಸೂರು-ಮಂಗಳೂರು ನಡುವೆ 2, 303ರೂ. ಗಳಿಗೆ ಸಂಚಾರ ನಡೆಸಬಹುದಾಗಿದೆ. ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ ಮಾತ್ರ ವಿಮಾನ ಸಂಚಾರ ನಡೆಸಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಪ್ರತಿದಿನದ ಸಂಚಾರವೂ ಆರಂಭವಾಗಲಿದೆ.
ಉಡಾನ್ ಯೋಜನೆಯಡಿ ಮೈಸೂರು-ಮಂಗಳೂರು ನಡುವೆ ವಿಮಾನ ಹಾರಾಟ ಆರಂಭಿಸುವುದಾಗಿ ಅಲೆಯನ್ಸ್ ಏರ್ ಹೇಳಿತ್ತು. ಅಕ್ಟೋಬರ್‌ನಲ್ಲಿಯೇ ವಿಮಾನ ಸೇವೆ ಆರಂಭವಾಗಬೇಕಿತ್ತು. ಆದರೆ, ವಿಳಂಬವಾಗಿದ್ದು ಡಿಸೆಂಬರ್‌ನಲ್ಲಿ ಹಾರಾಟ ಆರಂಭವಾಗಿದೆ.
ವೇಳಾಪಟ್ಟಿ
— Alliance Air (@allianceair) November 24, 2020












Click it and Unblock the Notifications