ಮೈಸೂರಿನಲ್ಲಿಂದು ಏರ್ ಶೋ ರಿಹರ್ಸಲ್, ನಾಳೆ ಪ್ರದರ್ಶನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಮೈಸೂರು, ಅಕ್ಟೋಬರ್, 22: ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಏರ್ ಶೋಗೆ ಅಕ್ಟೋಬರ್ 22ರಂದು ರಿಹರ್ಸಲ್ ಹಾಗೂ ಅಕ್ಟೋಬರ್ 23ರಂದು ಪ್ರದರ್ಶನ ನಡೆಸಲು ಜಿಲ್ಲಾಡಳಿ ಸಕಲ ಸಿದ್ಧತೆ ಕೈಗೊಂಡಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಏರ್ ಶೋ ನಡೆಯಲಿದೆ. ಏರೊ ಬ್ಯಾಟಿಕ್ ಚಟುವಟಿಕೆಗಳನ್ನು ಆಯೋಜಿಸಲು ಭಾರತೀಯ ವಾಯು ಪಡೆಯಲ್ಲಿ ಪ್ರತ್ಯೇಕ ತಂಡವಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ 2ನೇ ಸ್ಥಾನದಲ್ಲಿದೆ. ಈ ತಂಡವು ಮೈಸೂರಿನಲ್ಲಿ ಏರ್ ಶೋ ನಡೆಸಿಕೊಡಲಿದೆ. ಮೈಸೂರಿನ ಬನ್ನಿ ಮಂಟಪ ಮೈದಾನ ಪೂರ್ವಕ್ಕೆ ಮುಖ ಮಾಡಿಕೊಂಡಿರುವುದರಿಂದ ಮಧ್ಯಾಹ್ನದ ನಂತರ ಶೋ ಮಾಡಬೇಕೆಂದು ಪ್ಲಾನ್ ಮಾಡಲಾಗುತ್ತಿದೆ.

ಆದರೆ, ಯಾವ ದಿನ ಮಾಡಬೇಕೆಂದು ನಿಗದಿಯಾಗಿಲ್ಲ. ರಕ್ಷಣೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ, ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ. ಇನ್ನು ಮೈಸೂರು ದಸರೆಯಲ್ಲಿ ಏರ್ ಶೋ ಆಯೋಜನೆಗೆ ಅನುಮತಿ ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರವನ್ನು ಮುಂಚಿತವಾಗಿಯೇ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರು ಭಾರತೀಯ ವಾಯು ಸೇನೆಯಿಂದ ಏರ್ ಶೋ ನಡೆಸಲು ಅನುಮತಿ ನೀಡಿದ್ದಾರೆ.
ಕಳೆದ ಬಾರಿ ಏರ್ ಶೋ ನಡೆದ ಸಂದರ್ಭದಲ್ಲಿ ಉಂಟಾದ ವ್ಯತ್ಯಾಸಗಳು ಈ ಬಾರಿ ಮರುಕಳಿಸದಂತೆ ಮುಂಜಾಗ್ರತೆ ವಹಿಸಬೇಕೆಂಬುದು ನಾಗರಿಕರು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮೈಸೂರಿಗೆ ಆಗಮಿಸುತ್ತಿದ್ದು, ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಬೆಂಗಳೂರು ಮೂಲದ ಏರ್ ಬೇಸ್‌ನಿಂದ ಕ್ಯಾಪ್ಟನ್ ಗ್ರೋವರ್ ಕೂಡ ಶನಿವಾರ ಮೈಸೂರಿಗೆ ಆಗಮಿಸುತ್ತಿದ್ದಾರೆ. ಅವರು ಮತ್ತೊಮ್ಮೆ ಸ್ಥಳ ಪರಿಶೀಲನೆ ಮಾಡಲಿದ್ದಾರೆ.
ಅದಾದ ಬಳಿಕ ಏರ್ ಶೋ ಆಯೋಜನೆ ಹಾಗೂ ಮೈಸೂರಿನಲ್ಲಿ ಈ ಬಾರಿ ಯಾವ್ಯಾಯ ಕಾರ್ಯಕ್ರಮ ಆಯೋಜಿಸಬೇಕೆಂಬುದರ ಬಗ್ಗೆ ನಿರ್ಧರಿಸಲಾಗುತ್ತದೆ.ಪ್ರತಿ ಬಾರಿಯೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 2019ರಲ್ಲಿ ಮೈಸೂರಿನಲ್ಲಿ ದಸರಾ ಅಂಗವಾಗಿ ನಡೆದ ಏರ್ ಶೋನಲ್ಲಿ ದರಿಂಗ್ ಪೆಟಲ್ ಡ್ರಾಪಿಂಗ್, ಯುದ್ಧ ವಿಮಾನಗಳಿಂದ ಭಾರತೀಯ ವಾಯು ಸೇನೆ ಯೋಧರು ಜಿಗಿದು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ಯಾರಾಚೂಟ್‌ಗಳ ಮೂಲಕ ಬಂದಿಳಿಯುವುದು, ಯುದ್ಧ ವಿಮಾನದಿಂದ ಯೋಧರು ಹಗ್ಗ ಹಿಡಿದುಕೊಂಡು ಕೆಳಗೆ ಇಳಿದು ಯುದ್ಧ ಮಾಡುವ ಪ್ರದರ್ಶನ ನಡೆದಿತ್ತು.
ಹೆಲಿಕಾಪ್ಟರ್ ಮೂಲಕ ಬಿಡಿ ಗುಲಾಬಿ ಹೂಗಳನ್ನು ಮೈದಾನಕ್ಕೆ ಚೆಲ್ಲುವ ಪೆಟಲ್ ರಾಪಿಂಗ್ ಮಾಡಲಾಯಿತು. ಈ ಬಾರಿ ಮತ್ತಷ್ಟು ವಿಭಿನ್ನ ಕಾರ್ಯಕ್ರಮಗಳು ಏರ್ ಶೋ ಆಸಕ್ತರ ಮನ ತಣಿಸಲಿವೆ.












Click it and Unblock the Notifications