Darshan Arrest: ಸ್ಯಾಂಡಲ್‌ವುಡ್ ನಟ ದರ್ಶನ್ ಬಂಧನ, ಕೊಲೆ ಆರೋಪ

ಬೆಂಗಳೂರು, ಜೂನ್ 11: ಕೊಲೆ ಪ್ರಕರಣವೊಂದರಲ್ಲಿ ಮೈಸೂರಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಮಂಗಳವಾರ ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಈ ಹಿಂದೆ ಪವಿತ್ರಾ ಗೌಡ ಅವರನ್ನು ಮದುವೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಫೋಟೋಗಳು ಹರಿದಾಡಿದ್ದವು.

darshan arrest in murder case

ಈ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೆಜ್ ಮಾಡಿದ್ದ ಸ್ವಾಮಿ ಎನ್ನಲಾಗಿದೆ. ಈ ಸ್ವಾಮಿ ಚಿತ್ರದುರ್ಗ ಮೂಲದವನು ಎನ್ನಲಾಗಿದೆ. ಆತನ ಕೊಲೆ ಪ್ರಕರಣದಲ್ಲಿ ಕಾಟೇರಾ ದರ್ಶನ್ ಬಂಧನವಾಗಿದೆ.

ಕೊಲೆ ಆರೋಪಿಗಳ ತಪ್ಪೊಪ್ಪಿಗೆ

ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೆಜ್ ಮಾಡಿದ್ದ ಎನ್ನಲಾಗುತ್ತಿರುವ ರೇಣುಕಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಯಿಸಲಾಗಿದೆ. ಜೂನ್ 8ರಂದು ಆತನನ್ನು ಶೆಡ್ ನಲ್ಲಿ ಇರಿಸಿ ಕೊಲೆ ಮಾಡಲಾಗಿದೆ. ಜೂನ್ 09 ರಂದು ಕೊಲೆ ಮಾಡಲಾಗಿದೆ.

ಕೊಲೆ ಮಾಡಿದ ಆರೋಪಿಗಳು ತಾವು ಕೊಲೆ ಮಾಡಿದ್ದಾಗಿ, ಮತ್ತು ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕೊಲೆ ಪ್ರಕರಣ ವಿಚಾರವಾಗಿ ಇಂದು ಪೊಲೀಸರು ಮೈಸೂರಿನ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಬಂಧಿಸಲಾಗಿದೆ.

ಪ್ರಕರಣದಲ್ಲಿ ದರ್ಶನ್ ಸೇರಿ 10 ಜನರ ಬಂಧನ

ಕೊಲೆ ಪ್ರಕರಣ ವಿಚಾರವಾಗಿ ಕಾಮಾಕ್ಷಿಪಾಳ್ಯ ಪೊಲೀಸರು ನಟ ದರ್ಶನ್ ಸೇರಿ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಕೊಲೆಗಾರರ ತಾವು ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಮೊದಲು ಮೂರು ಜನ ಪೊಲೀಸರಿಗೆ ಸರೆಂಡರ್ ಆಗಿದ್ದರು. ನಂತರ ಅವರನ್ನು ವಿಚಾರಣೆ ಮಾಡಿದ ಬಳಿಕ ಇದರಲ್ಲಿ ನಟ ದರ್ಶನ್ ಪಾತ್ರ ಇದೆ ಎಂಬುದು ಗೊತ್ತಾಗಿದೆ.

Actor Darshan Arrested at Mysuru in Renuka Swamy Murder Case

ಶೆಡ್‌ನಲ್ಲಿಟ್ಟು ಹಲ್ಲೆ: ದರ್ಶನ್ ಭಾಗಿ

ಕಾಮಾಕ್ಷಿಪಾಳ್ಯದ ಶೆಡ್ ನಲ್ಲಿಟ್ಟು ರೇಣುಕಾ ಸ್ವಾಮಿ ಯನ್ನು ಥಳಿಸಲಾಗಿದೆ. ಮನ ಬಂದಂತೆ ಹಲ್ಲೆ ಮಾಡಲಾಗಿದ್ದು. ಈ ವೇಳೆ ಹಲ್ಲೆಕೋರರ ಜೊತೆಗೆ ನಟ ದರ್ಶನ್ ಸಹ ಇದ್ದರು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಕೊಲೆ ಮಾಡಿ ನಂತರ ಕಾಮಾಕ್ಷಿ ಪಾಳ್ಯದ ಮೋರಿಯಲ್ಲಿ ರೇಣುಕಾಸ್ವಾಮಿ ಮೃತದೇಹ ಬೀಡಾಡಲಾಗಿತ್ತು.

ಬೆಂಗಳೂರಿಗೆ ದರ್ಶನ್ ಕರೆತರುತ್ತಿರುವ ಪೊಲೀಸರು

ಪೊಲೀಸರಿಗೆ ವಿಷಯ ಗೊತ್ತಾಗಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಮೈಸೂರಿನ ಫಾರ್ಮ್‌ಹೌಸಿನಲ್ಲಿ ಕಾಮಾಕ್ಷಿಪಾಳ್ಯದ ಪೊಲೀಸರು ಬಂಧಿಸಿದ್ದಾರೆ. ಇದೀಗ ಅವರನ್ನು ಬೆಂಗಳೂರಿನತ್ತ ಕರೆತರಲಾಗುತ್ತಿದೆ.

ರೇಣುಕಾ ಸ್ವಾಮಿ ಕುಟುಂಬದ ದೂರು ದಾಖಲು

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾದ ಬಳಿಕ ಮೃತದೇಹ ಪತ್ತೆ ಆಗಿದೆ. ಇದು ಕೊಲೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದಂತೆ ಪೊಲೀಸರ ಮಾಹಿತಿ ಮೇರೆಗೆ ಕುಟುಂಬಸ್ಥರು ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ಸದ್ಯ ಕೊಲೆ ಆರೋಪಿಗಳಾದ ನಟ ದರ್ಶನ್ ಸೇರಿ ಹತ್ತು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸ್ ಪ್ರಕರಣ ಬೇದಿಸಿದ್ದೇ ರೋಚಕ!

ರಾಜಕಾಲುವೆಯಲ್ಲಿ ಸಿಕ್ಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲು ಮೂವರ ಬಂಧನವಾಗಿದೆ. ಈ ಮೂವರು ಒಂದಕ್ಕೊಂದು ಸಂಬಂಧ ಇಲ್ಲದಂತೆ ಹೇಳಿಕೆ ಕೊಟ್ಟಿದ್ದಾರೆ. ಬಳಿಕ ಪ್ರತ್ಯೇಕವಾಗಿ ತೀವ್ರ ವಿಚಾರಣೆ ಬಳಿಕ ನಟ ದರ್ಶನ್ ಪಾತ್ರದ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಆರಂಭದಲ್ಲಿ ಕೊಲೆಗಾರರ ಹಿನ್ನೆಲೆ, ಮೃತರ ಹಿನ್ನೆಲೆ ನೋಡಿದಾಗ ಇವರು ಸುಖಾ ಸುಮ್ಮನೆ ನಟ ದರ್ಶನ್ ಹೆಸರು ಹೇಳುತ್ತಿದ್ದಾರೆ ಎಂದು ಅನ್ನಿಸಿದೆ. ಬಳಿಕ ಸತ್ಯ ತಿಳಿದಿದ್ದು, ಹಿರಿಯ ಪೊಲೀಸರ ಜತೆ ಕಾಮಾಕ್ಷಿಪಾಳ್ಯ ಪೊಲೀಸರು ಚರ್ಚಿಸಿ ದರ್ಶನ್ ಬಂಧಿಸಲು ಸಜ್ಜಾದರು. ಅದರಂತೆ ಮಂಗಳವಾರ ಬಂಧಿಸಿ ಮೈಸೂರಿನ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಬೆಳಗ್ಗೆಯಿಮದ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತ ದರ್ಶನ್ ವಿಚಾರಣೆ: ನಟ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದ್ದು, ಮೈಸೂರಿನಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಮುಂದೆ ದರ್ಶನ್ ಮಾತನಾಡಿದ್ದು, ನಾನು ಕೊಲೆ ಇವರಿಗೆ ಹೇಳಿಲ್ಲ. ಬದಲಾಗಿ ರೇಣುಕಾಸ್ವಾಮಿಯನ್ನು ಬೆದರಿಸುವಂತೆ ಮಾತ್ರ ಹೇಳಿದ್ದೆ ಎಂದು ಪೊಲೀಸರಿಗೆ ನಟ ದರ್ಶನ್ ತಿಳಿಸಿದ್ದಾರೆ.

ದರ್ಶನ್ ಬೆನ್ನಲ್ಲೆ ಪವಿತ್ರಾ ಗೌಡ ವಶಕ್ಕೆ

ಬೆಂಗಳೂರಿನ ನಾಗರಭಾವಿ ಬಳಿ ಇರುವ ಅನ್ನಪೂರ್ಣೇಶ್ವರ ನಗರ ಪೊಲೀಸರು ಸದ್ಯ ದರ್ಶನ್ ಪ್ರೇಯಸಿ ಪ್ರವಿತ್ರಾಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣ ಕುರಿತು ಪವಿತ್ರಾ ಗೌಡ ಅವರನ್ನು ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಲ್ಲಿ ಇವರ ಪಾತ್ರವಿದೆಯಾ? ಇವರ ಕುಮ್ಮಕ್ಕಿನಿಂದಲೇ ಹತ್ಯೆ ನಡೆಯಿತೇ? ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಹೀಗಾಗಿ ಪವಿತ್ರಾ ಗೌಡ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮೃತನ ಪತ್ನಿ ಮೂರು ತಿಂಗಳ ಗರ್ಭಿಣಿ
ಮೃತ ರೇಣುಕಾಸ್ವಾಮಿ ಕೊಲೆ ಪತ್ನಿ ಮೂರು ತಿಂಗಳ ಗರ್ಭಿಣಿ ಎಂಬ ಮಾಹಿತಿ ಲಭ್ಯವಾಗಿದೆ. ಇಂತಹ ಸಂದರ್ಭದಲ್ಲಿ ಆವರ ಪತಿ ನಟ ದರ್ಶನ್ ಸೂಚನೆ ಮೇರೆಗೆ ಕೊಲೆ ಆಗಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ರೇಣುಕಾಸ್ವಾಮಿ ಅಪೋಲೋ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಕೊಲೆ ನಂತರ ಪವಿತ್ರಾ ಮೇಲೆ ದರ್ಶನ್ ಹಲ್ಲೆ: ಯಾಕೆ?

ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆಯ ಬಳಿಕ ತಮ್ಮ ಪ್ರೇಯಸಿ ಪವಿತ್ರಾ ಗೌಡ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಿನ್ನಿಂದಲೇ ಇಷ್ಟೆಲ್ಲ ಆಗಿದೆ. ಕೊಲೆ ಆಗಿದೆ ಎಂದು ಹಲ್ಲೆ ಮಾಡಿದ್ದು, ಪವಿತ್ರಾ ಗಾಯಗೊಂಡಿದ್ದಾರೆ. ಸದ್ಯ ಅವರು ಸೋಮವಾರ ಆರ್‌ಆರ್‌ ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಆಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದೆಲ್ಲ ನೋಡಿದರೆ ದರ್ಶನ್ ಅವರು ಕೊಲೆಯಲ್ಲಿ ಭಾಗಿಯಾಗಿದ್ದರೂ ಎಂಬ ಅನುಮಾನ ವ್ಯಕ್ತವಾಗಿದೆ.

ಇಂದು ಪವಿತ್ರಾ ಗೌಡ ಅವರನ್ನು ಪೊಲೀಸರು ವಿಚಾರಣೆಗೆ ಕರೆಸಿದಾಗ ರೇಣುಕಾಸ್ವಾಮಿ ಕೊಲೆ ನಂತರ ನಡೆದ ಬೆಳವಣಿಗೆ, ದರ್ಶನ್ ಹಲ್ಲೆ ವಿಚಾರವನ್ನು ಪೊಲೀಸರ ಮುಂದೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿದ್ದೇಗೆ?
ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೆಜ್ ಮಾಡಿದ್ದ ಚಿತ್ರದುರ್ಗ ರೇಣುಕಾಸ್ವಾಮಿಯನ್ನು ಉಪಾಯದಿಂದ ಕೊಲೆಗಾರರು, ದರ್ಶನ್ ಕಡೆಯವರು ಬೆಂಗಳೂರಿಗೆ ಕರೆಸಿದ್ದಾರೆ. ಆನ್‌ಲೈನ್‌ ನಲ್ಲಿ ಫೇಕ್ ಐಡಿ ಕ್ರಿಯೇಟ್ ಮಾಡಿ. ಮಹಿಳೆಯ ಹೆಸರಿನಲ್ಲಿ ಬೆಂಗಳೂರಿಗೆ ಕರೆಯಿಸಿ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಶೆಡ್‌ಗೆ ಒಯ್ಯಲಾಗಿದೆ. ನಂತರ ದರ್ಶನ್ ಹಾಗೂ ಕೊಲೆಗಾರರು ಹಲ್ಲೆ ನಡೆಸಿದ್ದಾರೆ. ಬಳಿಕ ಕಬ್ಬಿಣ ಪಟ್ಟಿಯಿಂದ ಹೊಡೆದು ಕೊಲೆ ಮಾಡಿ ರಾಜಕಾಲುವೆ ಬಿಸಾಡಲಾಗಿದೆ.

ಮೃತ ರೇಣುಕಾಸ್ವಾಮಿ ಕುಟುಂಬಸ್ಥರ ಆಕ್ರಂದನ

ಪೊಲೀಸರ ಮಾಹಿತಿ ಮೇರೆಗೆ ಚಿತ್ರದುರ್ಗದಿಂದ ಬಂದ ಮೃತ ರೇಣುಕಾಸ್ವಾಮಿ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಶವ ನೋಡಿ ಕಣ್ಣೀರು ಹಾಕುತ್ತಾ ನಟ ದರ್ಶನ್ ಗೆ ಹಿಡಿಶಾಪ್ ಹಾಕುತ್ತಿದ್ದಾರೆ. ಕುಟುಂಬಸ್ಥರು ಕಣ್ಣೀರ ಕಡಲಲ್ಲಿ ಮುಳುಗಿದ್ದು, ನಮಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದ್ದಾರೆ. ದರ್ಶನ್‌ಗೆ ಕಠಿಣ ಶಿಕ್ಷೆ ಕೊಡುವಂತೆ ಒತ್ತಾಯಿಸಿದ್ದಾರೆ.

ಒಳಿತು ಬಯಸಿದ ಅಭಿಮಾನಿಗೆ ಸಾವಿನ ಶಿಕ್ಷೆ

ನಟ ದರ್ಶನ್ ನಮ್ಮ ಬಾಸ್ ಎಂದು ಮೃತ ರೇಣುಕಾ ಸ್ವಾಮಿ ಹೇಳಿದ್ದಾರೆ. ಹಲ್ಲೆ ಮಾಡುವಾಗ ಸಾಯುವ ಮುನ್ನ ದರ್ಶನ್ ನಮ್ ಬಾಸ್. ಅವರ ಜೀವನ ಹಾಳು ಮಾಡಿದ್ದು ಈ ಪವಿತ್ರಾ ಗೌಡ. ಬಾಸ್ ಕುಟುಂಬ ಸರಿಹೋಗಬೇಕು ಎಂದು ಅಭಿಮಾನ ಮೆರೆದಿದ್ದ. ಅದಕ್ಕಾಗಿ ನಾನು ಮೆಸೆಜ್ ಮಾಡಿದ್ದೆ ಎಂದು ಚಿತ್ರದುರ್ಗ ರೇಣುಕಾಸ್ವಾಮಿಯನ್ನೇ ಕೊಲೆಗಾರರ ಮುಂದೆ ಹೇಳಿದ್ದರು ಎಂದು ಪೊಲೀಸ್ ಮೂಲಗಳು ಮಾಹಿರಿ ಬಹಿರಂಗಪಡಿಸಿವೆ.

ಇಂದು ದರ್ಶನ್ ಸೇರಿ 13 ಮಂದಿ ನ್ಯಾಯಾಲಯಕ್ಕೆ ಹಾಜರು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆತನ ಪ್ರೇಯಸಿ ಪವಿತ್ರಾ ಗೌಡನ ಸೇರಿದಂತೆ ಒಟ್ಟು 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರೆಲ್ಲ ಆರೋಗ್ಯ (ವೈಧ್ಯಕೀಯ) ತಪಾಸಣೆ ನಡೆಸಿರುವು ಕಾಮಾಕ್ಷಿಪಾಳ್ಯ ಪೊಲೀಸರು ಇಂದು ಸಂಜೆಯೇ ಅವರೆಲ್ಲರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ಪೊಲೀಸರ ಮೇಲೆ ದರ್ಶನ್ ಬಂಧಿಸದಂತೆ ಒತ್ತಡ

ಕೊಲೆ ಪ್ರಕರಣ ನಡೆದು ಮೂರು ದಿನಗಳಾಗಿವೆ. ಇದರಲ್ಲಿ ದರ್ಶನ್ ಕೈವಾಡ ಇದೆ ಎಂಬುದು ಪೊಲೀಸ್ ವಯಲದಲ್ಲಿ ಗೊತ್ತಾಗುತ್ತಿದ್ದಂತೆ ಹಿರಿಯ ರಾಜಕಾರಣಿಗಳು, ಚಿತ್ರರಂಗದ ಕೆಲವು ಹಿರಿಯ ಕಲಾವಿದರ ಬಂಧಿಸದಂತೆ ಒತ್ತಡ ಹೇರಿದ್ದಾರೆ. ಸೋಮವಾರ ರಾತ್ರಿಯಿಂದಲೇ ನಟ ದರ್ಶನ್ ಬಂಧಿಸದಂತೆ ಆಗ್ರಹಿಸಿದ್ದಾರೆ.

ಪ್ರಕರಣದಲ್ಲಿ ದರ್ಶನ್ ನನ್ನು ಕೇವಲ ಸಾಕ್ಷಿಯಾಗಿ ಮಾಡಿ. ಆರೋಪಿಯನ್ನಾಗಿ ಮಾಡುವುದು, ಬಂಧಿಸುವುದು ಎಲ್ಲವು ಬೇಡ ಎಂದು ಪೊಲೀಸರ ಮೇಲೆ ಒತ್ತಡ ಹೇರಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳ ಮಹಜರು ಬಳಿಕ ಕೋರ್ಟ್‌ಗೆ ಹಾಜರು

ದರ್ಶನ್, ಪವಿತ್ರಾ ಗೌಡ ರನ್ನು ವಿಚಾರಣೆ ನಡೆಸಿ, ಅವರು ಸೇರಿದಂತೆ ಹದಿಮೂರು ಮಂದಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಕಾಮಾಕ್ಷಿಪಾಳ್ಯ ಪೊಲೀಸರು ಹಾಜರುಪಡಿಸಿದ್ದಾರೆ. ನ್ಯಾಯಾದೀಶರು ಬಂಧನ ಬಗ್ಗೆ ದರ್ಶನ್ ಹಾಗೂ ಪವಿತ್ರಾರನ್ನು ಪ್ರಶ್ನಿಸಿದ್ದಾರೆ. ಪೊಲೀಸರು ಒಂದಷ್ಟು ಮಾಹಿತಿಯನ್ನು ನ್ಯಾಯಾಯಲಕ್ಕೆ ತಿಳಿಸಿದ್ದಾರೆ. ದರ್ಶನ್ ಪರ ವಕೀಲರು ಸ್ಥಳದಲ್ಲಿದ್ದರು ಎನ್ನಲಾಗಿದೆ. ವಾದ ವಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳನ್ನು ಪೊಲೀಸ್ ಕಸ್ಟಡಿ ಗೆ ನೀಡಿದ್ದಾರೆ.

ರಾತ್ರಿಯಾಗುತ್ತಿದ್ದಂತೆ ಎಲ್ಲ ಆರೋಪಿಗಳು ಜೈಲಿನಲ್ಲಿದ್ದಾರೆ. ರಾತ್ರಿ ದರ್ಶನ್ ಊಟ ಮಾಡದೇ ಒಂದಷ್ಟು ರಗಳೆ ತೆಗೆದಿದ್ದಾರೆ ಎನ್ನಲಾಗಿದೆ. ಊಟಕ್ಕೆ ಬಿರಿಯಾನಿ ತಂದರೂ ತಿನ್ನದೇ, ಡೊಲೋ 650 ಮಾತ್ರೆ ತರಿಸಿಕೊಂಡಿದ್ದಾರೆ. ಇದಕ್ಕು ಮೊದಲು ಪೊಲೀಸರು ಹಾಗೂ ನ್ಯಾಯಾಲಯದ ವಿಚಾರಣೆ ವೇಳೆ ಕಣ್ಣೀರು ಹಾಕಿದ್ದಾರೆ. ಅರಿಯದೇ ಕೋಪದಲ್ಲಿ ಆದ ತಪ್ಪಿಗೆ ಪಶ್ಚಾತಾಪ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+