ಎಗ್ಗಿಲ್ಲದೇ ರಸ್ತೆಯಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ

ಮೈಸೂರು, ಅಕ್ಟೋಬರ್. 25: ಸಾರ್ವಜನಿಕವಾಗಿ ಎಗ್ಗಿಲ್ಲದೇ ರಸ್ತೆಯಲ್ಲೇ ಗಾಂಜಾ ಮಾರುತ್ತಿದ್ದ ಯುವಕನೊಬ್ಬನನ್ನು ಖುದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಹೌದು, ಸಾರ್ವಜನಿಕವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಉದಯಗಿರಿ ಪೊಲೀಸರು, ಆತನಿಂದ 50 ಸಾವಿರ ರೂ.ಮೌಲ್ಯದ 1 ಕೆಜಿ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ನಗರದ ಗೌಸಿಯಾನಗರ ನಿವಾಸಿ ಕಲೀಂಪಾಷ (30).

ಮಂಗಳವಾರ (ಅ.23) ಸಂಜೆ ಉದಯಗಿರಿ ಪೊಲೀಸ್ ಠಾಣೆಯ ಎಎಸ್ ಐ ಕೆ.ಸಿ.ಬೀರಪ್ಪ ಅವರು ಗರುಡದಲ್ಲಿ ಗಸ್ತು ಮಾಡಿಕೊಂಡು ಸಾತಗಳ್ಳಿ ಬಸ್ ಡಿಪೋ ಹಿಂಭಾಗದಲ್ಲಿರುವ ವರ್ತುಲ ರಸ್ತೆ ಬಳಿ ಹೋಗುತ್ತಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು.

A man who was selling ganja in public was arrested

ಹೀಗಾಗಿ ಪೊಲೀಸರು ಅವರ ಬಳಿ ತೆರಳಿದಾಗ ಒಬ್ಬಾತ ಓಡಿ ಹೋಗಿದ್ದು, ಮತ್ತೊಬ್ಬನನ್ನು ಹಿಡಿದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆತನ ಕೈಯ್ಯಲ್ಲಿದ್ದ ಬಿಳಿಯ ಪ್ಲಾಸ್ಟಿಕ್ ಕವರ್ ನಲ್ಲಿ 9 ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ಸೊಪ್ಪು ಕಂಡುಬಂದಿದೆ. ಕೂಡಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ವಿಚಾರಣೆಗೊಳಪಡಿಸಿದ ವೇಳೆ ಆತ ಹಳೆಯ ಅಪರಾಧಿಯಾಗಿದ್ದು, ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ 8 ಅಪರಾಧ ಪಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ತಕ್ಷಣವೇ ಆತನ ವಿರುದ್ಧ ಪಕರಣ ದಾಖಲಿಸಿದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+