ಮೈಸೂರು: ಬಿಇಎಂಎಲ್ ನೌಕರರ ನಿದ್ದೆಗೆಡಿಸಿದ್ದ ಚಿರತೆ ಅಂದರ್
ಮೈಸೂರು , ಮಾರ್ಚ್ 19 : ಇತ್ತೀಚೆಗೆ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಬಿಇಎಂಎಲ್ ಒಳಾಂಗಣದಲ್ಲಿ ಕಾಣಿಸಿಕೊಂಡಿದ್ದ ಚಿರತೆಯೊಂದು ಕೊನೆಗೂ ಭಾನುವಾರ ಬೋನಿಗೆ ಬಿದ್ದಿದೆ.
ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿರುವ ಬಿಇಎಂಎಲ್ ಆವರಣದಲ್ಲಿ ಚಿರತೆಯೊಂದು ಬೀಡು ಬಿಟ್ಟಿದೆ ಎಂದು ಇಲ್ಲಿನ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.[ತಂದೆಯ ಮರ್ಮಾಂಗ ಕತ್ತರಿಸಿ ಕೊಲೆಗೈದಿದ್ದ ಮಗನಿಗೆ ಜೀವಾವಧಿ ಶಿಕ್ಷೆ]

ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೆದ 15ದಿನಗಳ ಹಿಂದೆ ಇರಿಸಲಾಗಿದ್ದ ಬೋನಿಗೆ ಭಾನುವಾರ ಒಂದೂವರೆ ವರ್ಷದ ಹೆಣ್ಣು ಚಿರತೆ ಸಿಕ್ಕಿ ಹಾಕಿಕೊಂಡಿದೆ.
ಹಲವು ದಿನಗಳಿಂದ ಈ ಚಿರತೆ ಕಾಣಿಸಿಕೊಂಡು ಬಿಇಎಂಎಲ್ ನೌಕರರ ನಿದ್ದೆಗೆಡಿಸಿತ್ತು. ಇದೀಗ ಚಿರತೆ ಸಿಕ್ಕಿ ಬಿದ್ದಿದ್ದರಿಂದ ಬಿಇಎಂಎಲ್ ನೌಕರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications