ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ರೈತರ ದಸರೆಗೆ ಬರಲಿದೆ 777 ‘ಚಾರ್ಲಿ’ ಚಿತ್ರದ ಶ್ವಾನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್‌, 19: 777 ಚಾರ್ಲಿ ಚಿತ್ರದ ಮೂಲಕ ಬೆರಗು ಮೂಡಿಸಿದ್ದ ಶ್ವಾನ ಈ ಬಾರಿಯ ರೈತ ದಸರಾ ಅಂಗವಾಗಿ ನಡೆಯುವ ಮುದ್ದು ಪ್ರಾಣಿಗಳ ಪ್ರದರ್ಶನದಲ್ಲಿ ಆಕರ್ಷಣೆಯ ಕೇಂದ್ರ ಬಿಂದು ಆಗಲಿದೆ.

ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ ಸಿನಿಮಾ ರಾಜ್ಯದ ಜನರ ಮನಸ್ಸನ್ನು ಗೆದ್ದಿತ್ತು. ಅದರಲ್ಲೂ ಮುದ್ದು ಶ್ವಾನದ ನಟನೆ ಎಲ್ಲರಲ್ಲೂ ಕಣ್ಣೀರು ಬರುವಂತೆ ಮಾಡಿತ್ತು. ನಂತರ ಚಾರ್ಲಿ ಶ್ವಾನಕ್ಕೆ ಹೊರರಾಜ್ಯದ ಚಿತ್ರರಂಗದ ಸಿನಿಮಾದಲ್ಲೂ ಅಭಿನಯಿಸಲು ಬೇಡಿಕೆ ಬಂದಿತ್ತು. ಇಗೀಗ ಅದೇ ಚಾರ್ಲಿ ಶ್ವಾನವನ್ನು ಮೈಸೂರು ದಸರಾದಲ್ಲೂ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಜೊತೆಗೆ ಅದರ ಇತರೆ ಪ್ರದರ್ಶನವನ್ನೂ ನೋಡಬಹುದು.

ದಸರಾ ವೇಳೆ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಕಾಂಬೋ ಟಿಕೆಟ್; ಸ್ಥಳ, ದರದ ವಿವರದಸರಾ ವೇಳೆ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಕಾಂಬೋ ಟಿಕೆಟ್; ಸ್ಥಳ, ದರದ ವಿವರ

ರೈತ ದಸರಾ ಉಪ ಸಮಿತಿಯ ಉಪ ವಿಶೇ‍ಷಾಧಿಕಾರಿ ಕೃಷ್ಣಂ ರಾಜು ಈ ಬಗ್ಗೆ ಮಾತನಾಡಿ, ಈ ಬಾರಿಯ ಪ್ರಾಣಿಗಳ ಪ್ರದರ್ಶನದಲ್ಲಿ ಚಾರ್ಲಿ ಸಿನಿಮಾದ ಶ್ವಾನವನ್ನು ಕರೆತರಲಾಗುತ್ತಿದೆ. ಇದರಿಂದ ಚಿಣ್ಣರಿಗೆ ತುಂಬಾ ಖುಷಿ ಆಗುತ್ತದೆ. ಇದೇ ಮೊದಲ ಬಾರಿ ರೈತ ದಸರಾದಲ್ಲಿ ಸಾಕುಪ್ರಾಣಿ ಪ್ರದರ್ಶನ ಆಯೋಜಿಸಲಾಗುತ್ತಿದೆ. ಸೆಪ್ಟೆಂಬರ್‌ 30ರಂದು ಆರಂಭ ಆಗುವ ರೈತ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲು ಚಲನಚಿತ್ರ ನಟ ದರ್ಶನ್ ಅವರನ್ನು ಆಹ್ವಾನಿಸಲಾಗುತ್ತಿದೆ ಎಂದರು.

777 Charlie film fame Dog Main attraction during Raita Dasara

ಸೆಪ್ಟೆಂಬರ್‌ 29ಕ್ಕೆ ಕೋಲಾರ, ಚಿಂತಾಮಣಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಗೋವಿನ ಪಾಲಕರು ಹಸುಗಳೊಂದಿಗೆ ಆಗಮಿಸಲಿದ್ದಾರೆ. ಸೆಪ್ಟೆಂಬರ್‌ 30ರಂದು ಹಸುಗಳಿಗೆ ವಿಶ್ರಾಂತಿ ಇದ್ದು, ಅಕ್ಟೋಬರ್‌ 1ರಂದು ಸ್ಪರ್ಧೆ ನಡೆಯಲಿದೆ ಎಂದು ಉಪಸಮಿತಿಯ ಕಾರ್ಯದರ್ಶಿ ಷಡಕ್ಷರಿ ಮಾಹಿತಿ ನೀಡಿದರು. ಗೆದ್ದ ನಾಲ್ವರಿಗೆ ಕ್ರಮವಾಗಿ 50 ಸಾವಿರ, 40 ಸಾವಿರ, 30 ಸಾವಿರ ಹಾಗೂ 20 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ವಿವರಿಸಿದರು. ಈ ಸಂದರ್ಭದಲ್ಲಿ ರೈತ ದಸರೆ ಉಪಸಮಿತಿ ಕಾರ್ಯಾಧ್ಯಕ್ಷ ಡಾ.ಬಿ.ಎಸ್.ಚಂದ್ರಶೇಖರ್ ಇದ್ದರು.

ಅ. 2ರಂದು ಸಾಕು ಪ್ರಾಣಿಗಳ ಪ್ರದರ್ಶನ

ಜೆ.ಕೆ. ಮೈದಾನದಲ್ಲಿ ಅಕ್ಟೋಬರ್‌ 1ರಂದು ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ. ಮೈಸೂರು ವಿಶ್ವವಿದ್ಯಾಲಯದ ಸ್ಫೋರ್ಟ್ಸ್ ಪೆವಿಲಿಯನ್ ಹಾಕಿ ಮೈದಾನದಲ್ಲಿ ಅಕ್ಟೋಬರ್‌ 2ರಂದು ಬೆಳಗ್ಗೆ 10.30ಕ್ಕೆ ಸಾಕು ಪ್ರಾಣಿಗಳ ಪ್ರದರ್ಶನಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಲಿದ್ದಾರೆ. ಸಂಜೆ 5.30ಕ್ಕೆ ಜೆ.ಕೆ. ಗ್ರೌಂಡ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ಪ್ರಭು ಚೌಹಾಣ್ ವಿಜೇತ ಪ್ರಾಣಿಗಳ ಮಾಲೀಕರಿಗೆ ಬಹುಮಾನ ವಿತರಿಸಲಿದ್ದಾರೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಚಾರ್ಲಿ ಜೊತೆ ತರಬೇತುದಾರ ಪ್ರಮೋದ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

35 ಕೋಟಿ ವೆಚ್ಚದಲ್ಲಿ ದಸರಾ ಆಚರಣೆ

ಈ ಬಾರಿ ಅಂದಾಜು 35 ಕೋಟಿ ವೆಚ್ಚದಲ್ಲಿ ಅದ್ಧೂರಿ ದಸರಾ ಆಚರಿಸಲಾಗುತ್ತಿದೆ. ಅರಮನೆ ಮಂಡಳಿಯಿಂದ 5 ಕೋಟಿ ರೂಪಾಯಿ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂಪಾಯಿ ಹಣ ವ್ಯಯಿಸಲು ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಕಳೆದ ಎರಡು ವರ್ಷದಲ್ಲಿ ಮಹಾಮಾರಿ ಕೊರೊನಾ ಕಾರಣದಿಂದ ಸರಳ ದಸರಾ ಆಚರಣೆ ಮಾಡಲಾಗಿತ್ತು. ಆದರೆ ಈ ವರ್ಷ ಕೋವಿಡ್ ಕ್ಷೀಣಿಸಿರುವ ಕಾರಣದಿಂದ ಅದ್ಧೂರಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಈಗಾಗಲೇ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಅಂದಾಜು ವೆಚ್ಚದ ಬಗ್ಗೆ ಮಾಹಿತಿ ನೀಡಿದ್ದಾರೆ.

777 Charlie film fame Dog Main attraction during Raita Dasara

ದಸರಾ ದಟ್ಟಣೆಯಲ್ಲಿ ಪ್ರವಾಸಿ ಸ್ಥಳದಲ್ಲಿ ಸರತಿಯಲ್ಲಿ ನಿಂತು ಟಿಕೆಟ್ ಕೊಳ್ಳುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಹೀಗೆ ಸಮಯ ವ್ಯರ್ಥ ಆಗದಂತೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಬಾರಿ ಕಾಂಬೋ ಟಿಕೆಟ್ ಹೊರತರಲಾಗಿದೆ. ಮೈಸೂರು ಅರಮನೆ, ಚಾಮುಂಡಿಬೆಟ್ಟ, ಕೆ.ಆರ್.ಎಸ್, ಮೃಗಾಲಯ, ರೈಲ್ವೆ ಮ್ಯೂಸಿಯಂ ಸೇರಿದಂತೆ 8 ಸ್ಥಳಗಳಲ್ಲಿ ಒಂದೇ ಟಿಕೆಟ್ ಬಳಕೆ ಮಾಡಬಹುದು. ವಯಸ್ಕರು 500 ಹಾಗೂ ಮಕ್ಕಳು 250 ರೂಪಾಯಿ ಪಾವತಿಸಿ ಕಾಂಬೋ ಟಿಕೆಟ್ ಪಡೆಯಬಹುದು ಎಂದು ಸಚಿವರು ಹೇಳಿದ್ದರು.

English summary
A dog from 777 Charlie film will be center of attraction at animals show organized part of Raitha Dasara this year. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X