ವಕ್ಫ್ ಆಸ್ತಿಯಲ್ಲಿ 54 ಸಾವಿರ ಕೋಟಿ ಅಕ್ರಮ: ಈಶ್ವರಪ್ಪ ಆರೋಪ
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಸರ್ಕಾರದ ಹಲವು ಅಕ್ರಮಗಳ ಬಗ್ಗೆ ಗಂಭೀರ ಆರೋಪ ಮಾಡಿದರು.
ಮೈಸೂರು, ಮಾರ್ಚ್ 30: ಅಲ್ಪಸಂಖ್ಯಾತರ ರಕ್ಷಣೆ ನಮ್ಮದೆಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ ಸಚಿವರು ವಕ್ಫ್ ಆಸ್ತಿಯಲ್ಲಿ 54 ಸಾವಿರ ಕೋಟಿ ಅಕ್ರಮ ನಡೆಸಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಕ್ಫ್ ಆಸ್ತಿಯಲ್ಲಿನ ಅಕ್ರಮಕ್ಕೆ ಕಾಂಗ್ರೆಸ್ ನ ಹಲವು ಸಚಿವರು, ಮುಖಂಡರು ಭಾಗಿಯಾಗಿದ್ದಾರೆ. ಇದರಿಂದ ಅನ್ವರ್ ಮಾಣಿಪ್ಪಾಡಿ ವರದಿ ಜಾರಿಗೆ ಸರ್ಕಾರ ಮುಂದಾಗುತ್ತಿಲ್ಲ, ನ್ಯಾಯಾಲಯಕ್ಕೂ ಮರ್ಯಾದೆ ನೀಡುತ್ತಿಲ್ಲ. ಸಿಎಂ ಇಬ್ರಾಹಿಂ, ಮಲ್ಲಿಕಾರ್ಜುನ ಖರ್ಗೆ, ಅಜೀಜ್ ಸೇಠ್ ಸೇರಿದಂತೆ ಹಲವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.[ಗುಂಡ್ಲುಪೇಟೆ ಉಪಚುನಾವಣೆ: ಗೆಲುವು ಸುಲಭವಲ್ಲ!]
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದವರಿಗೆ, ದಲಿತರಿಗೆ ತುಂಬಾ ಮೋಸ ಮಾಡಿದ್ದಾರೆ. ಖಡ್ಗ ಹಿಡಿದು ಪೇಟ ತೊಟ್ಟು ಹಿಂದುಳಿದವರ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ ಅವರ ಸಾಧನೆ ಶೂನ್ಯವಾಗಿದೆ. ದಲಿತರಿಗೆ ಮೋಸ ಮಾಡುತ್ತಿರುವುದರಿಂದ ಹಿಡಿದಿರುವ ಖಡ್ಗ ಕೆಳಗಿಳಿಸಿ, ಪೇಟ ತೆಗೆದಿರಿಸಿ ಎಂದರು.
ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಅದರಲ್ಲಿ ಸಿಎಂ ಸೇರಿದಂತೆ ಮೂವರು ಸಚಿವರು ಭಾಗಿಯಾಗಿದ್ದಾರೆ. ಇಷ್ಟೆಲ್ಲ ಹಗರಣಗಳನ್ನು ಹೊತ್ತಿರುವ, ಹಿಂದುಳಿದವರ ಅಭಿವೃದ್ಧಿಗಾಗಿ ಶ್ರಮಿಸದ ಮುಖ್ಯಮಂತ್ರಿಗಳು ತಾವೇ ಹಿಂದುಳಿದವರ ಚಾಂಪಿಯನ್ ಅನ್ನೋ ಭ್ರಮೆಯಲ್ಲಿದ್ದಾರೆ ಎಂದರು.[ಉಪಚುನಾವಣೆ: ಗೀತಾ ಮಹದೇವಪ್ರಸಾದ್ ಕಣ್ಣೀರು!]
ಸಚಿವ ಆಂಜನೇಯನವರು ಸಿದ್ದರಾಮಯ್ಯಗೆ ರಾಮನ ಶಿಷ್ಯ ಇದ್ದಂತೆ. ಹಿಂದುಳಿದವರಿಗೆ ಮೀಸಲಿಟ್ಟ ಹಣದಲ್ಲಿ ಅರ್ಧ ಖರ್ಚಾಗಿದ್ದಕ್ಕೆ ಸಿಎಂಗೆ ಸನ್ಮಾನ ಮಾಡಿದ್ದಾರೆ. ಕಾಂಗ್ರೆಸ್ 70 ವರ್ಷಗಳಿಂದ ಹಿಂದುಳಿದ ವರ್ಗಗಳಿಗೆ ಮೋಸ ಮಾಡಿಕೊಂಡು ಬಂದಿದೆ. ಸಿದ್ದರಾಮಯ್ಯನವರು ಸಹ ಕಳೆದ ನಾಲ್ಕು ವರ್ಷದಿಂದ ಮೂಗಿಗೆ ತುಪ್ಪ ಸವರುತ್ತಲೇ ಬಂದಿದ್ದಾರೆ. ಮೀಸಲಾತಿ ಹೆಚ್ಚಳ, ಸಾಮಾಜಿಕ ಆರ್ಥಿಕ ಸಮೀಕ್ಷೆ.
ಬಜೆಟ್ ನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಹಣ ಈ ಮೂರು ವಿಚಾರದ ಕುರಿತು ಸಿಎಂ ಸ್ಪಷ್ಟನೆ ನೀಡಬೇಕು. 37 ಸಾವಿರ ಕೋಟಿಯನ್ನು ಇನ್ನೊಂದು ವರ್ಷದಲ್ಲಿ ಖರ್ಚು ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.[ಸೌದಿಯಲ್ಲಿ ಮೈಸೂರು ಯುವಕ ಸಾವು: ಸುಷ್ಮಾ ಪ್ರತಿಕ್ರಿಯೆ]
ಇದೇ ವೇಳೆ ಬಿಜೆಪಿಗೂ, ರಾಯಣ್ಣ ಬ್ರೀಗೇಡ್ ಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಗುಲ್ಬರ್ಗದಲ್ಲಿ ಅಮಾನತುಗೊಳಿಸಲಾದ ಬ್ರಿಗೇಡ್ ಸದಸ್ಯರಿಬ್ಬರನ್ನು ಮತ್ತೆ ಸೇರಿಸಿಕೊಳ್ಳಲಾಗುವುದು ಎಂದರಲ್ಲದೆ, ಬ್ರಿಗೇಡ್ ಕೇವಲ ವಿದ್ಯಾರ್ಥಿಗಳ ಪೋಷಣೆಗಿದೆ ಎಂದು ತಿಳಿಸಿದರು.












Click it and Unblock the Notifications