ಎಚ್.ಡಿ. ಕೋಟೆ: ಸಿಡಿಲು ಬಡಿದು ನಾಲ್ವರಿಗೆ ಗಾಯ
ಮೈಸೂರು, ಮೇ 25 : ಸಿಡಿಲ ಬಡಿತದಿಂದ ನಾಲ್ವರು ಅಸ್ವಸ್ಥರಾಗಿರುವ ಘಟನೆ ಎಚ್.ಡಿ ಕೋಟೆ ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದಲ್ಲಿ ನಡೆದಿದೆ.
ಪುಟ್ಟೀರಯ್ಯ (40), ಶಂಕರ (37), ಸ್ವಾಮಿ (36), ರಂಗಯ್ಯ (35) ಸಿಡಿಲು ಬಡಿತದಿಂದ ಗಾಯಾಗೊಂಡವರು. ಈ ನಾಲ್ವರು ಚಿಕ್ಕದೇವಮ್ಮ ಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ವಾಪಸ್ಸು ತೆರಳುವಾಗ ಈ ಘಟನೆ ನಡೆದಿದೆ. ಮಳೆ ಬರುತಿದ್ದಂತೆಯೇ ಮರದ ಕೆಳಗೆ ನಾಲ್ವರು ಆಶ್ರಯ ಪಡೆದಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದಿದೆ.

ಗಾಯಾಳುಗಳು ನಂಜನಗೂಡು ತಾಲೂಕಿನ ದೇಬೂರು ಗ್ರಾಮದವರಾಗಿದ್ದು, ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












Click it and Unblock the Notifications