ಮೈಸೂರಿನಲ್ಲಿ ಒಳಚರಂಡಿ ಕಾಮಗಾರಿಗೆ ಮರ ಬಲಿ?

ಆಕ್ಷೇಪಣಾ ಅರ್ಜಿಯ ಬಗ್ಗೆ ಮಾತನಾಡಿದ ರಮೇಶ್, ಪಾಲಿಕೆ ಹೊಸದಾಗಿ ನಿರ್ಮಿಸುತ್ತಿರುವ ಒಳಚರಂಡಿ ಕಾಮಗಾರಿಯ ಪೈಪ್ ಲೈನ್ ಅಳವಡಿಕೆಗೆ ಸುಮಾರು 384 ಮರಗಳನ್ನು ಕತ್ತರಿಸಲು ತೀರ್ಮಾನಿಸಲಾಗಿದೆ. ಕುಕ್ಕರಹಳ್ಳಿ ಕೆರೆಯು ಮೈಸೂರುನಗರದ ಶ್ವಾಸಕೋಶವಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ ಮರಗಳನ್ನು ಉಳಿಸಿ, ಕೆರೆಯನ್ನು ಸಂರಕ್ಷಣೆ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.
ಹಿಂದೆ ಮೈಸೂರು ವಿವಿ ಆವರಣದಲ್ಲಿ 5 ಕೋಟಿ ವೆಚ್ಚದಲ್ಲಿ ಪರಿಸರ ಸೂಕ್ಷ್ಮ ಉದ್ಯಾನ ನಿರ್ಮಿಸಲು ಅಲ್ಲಿದ್ದ ಸುಮಾರು 500 ಮರ ಕತ್ತರಿಸಲಾಗಿತ್ತು. ಆದರೆ, ಉದ್ಯಾನವನ ಮಾತ್ರ ನಿರ್ಮಾಣ ಆಗಲಿಲ್ಲ. ಈಗ ಒಳಚರಂಡಿ ಪೈಪ್ ಲೈನ್ ಅಳವಡಿಕೆಗೆ ಮರ ಕಡಿಯಲಾಗುತ್ತಿದೆ. ಹಾಲಿ ಇರುವ ಮಾರ್ಗದಲ್ಲಿಯೇ ಪೈಪ್ ಲೈನ್ ಅಳವಡಿಸಬೇಕು ಎಂದು ಹೇಳಿದರು. [ಕೊಳ್ಳೇಗಾಲ ಹೆದ್ದಾರಿಗೆ 2667 ಮರ ಮಾರಣಹೋಮ]
ಪೈಪ್ ಲೈಪ್ ಕಾಮಗಾರಿಗೆ ಜೆಸಿಬಿ ಮತ್ತು ಇತರೆ ದೊಡ್ಡ ಗಾತ್ರದ ಕ್ರೇನ್‌ಗಳನ್ನು ಬಳಸಿದರೆ, ಮರ ಕಡಿಯಬೇಕಾಗುತ್ತದೆ. ಆದ್ದರಿಂದ ಮಾನವ ಸಂಪನ್ಮೂಲ ಬಳಸಿ ಕೆಲಸ ಮಾಡಿಸಬೇಕು. ಪೈಪ್ ಲೈನ್ ಕಾಮಗಾರಿಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ, ಅದಕ್ಕಾಗಿ ಮರಗಳನ್ನು ಕಡಿಯುವುದು ಬೇಡ ಎಂದು ಮನವಿ ಮಾಡಿದರು.
ಆಯುಕ್ತರು ಹೇಳುವುದೇನು : ಆಕ್ಷೇಪಣಾ ಅರ್ಜಿ ಸ್ವೀಕರಿಸಿದ ನಂತರ ಮಾತನಾಡಿ ಪಾಲಿಕೆ ಆಯುಕ್ತರು, ನಾವು ಹಳೆಯ ಪೈಪ್ ಲೈನ್ ಮಾರ್ಗದಲ್ಲಿ ಕಾಮಗಾರಿ ನಡೆಸುತ್ತಿಲ್ಲ. ಹೊಸದಾಗಿ ಅಳವಡಿಕೆಗೆ ಯೋಜನೆ ರೂಪಿಸಿದ್ದೇವೆ. ಆದ್ದರಿಂದ ಮರ ಕಡಿಯಬೇಕಿದೆ ಎಂದರು.
ಪಾಲಿಕೆ ಅಧಿಕಾರಿಗಳು ಮತ್ತು ಎಸಿಐಸಿಎಂ ಪದಾಧಿಕಾರಿಗಳು ಒಮ್ಮೆ ಸ್ಥಳ ಪರಿಶೀಲಿಸಿದ ಬಳಿಕ ಮರ ಕಡಿಯದೆ ಕಾಮಗಾರಿ ನಡೆಸಲು ಸಾಧ್ಯವೇ ಎಂಬ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಆಯುಕ್ತರು ಆಕ್ಷೇಪಣೆ ಸಲ್ಲಿಸಿದವರಿಗೆ ಭರವಸೆ ನೀಡಿದರು.












Click it and Unblock the Notifications